ಬೆಂಗಳೂರು: ವಾಲ್​ಮಾರ್ಕ್ ಮಾಲೀಕರ ಮನೆ ಕಛೇರಿ ಮೇಲೆ ಎಸಿಬಿ ದಾಳಿ, ಅಕ್ರಮ ದಾಖಲೆಗಳ ಜಪ್ತಿ

ಅಕ್ರಮ ಟಿಡಿಆರ್ ಹಗರಣದ ವಿಚಾರಣೆ ತೀವ್ರಗೊಳಿಸಿರುವ ರಾಜ್ಯದ ಭ್ರಷ್ತಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪ್ರತಿಷ್ಠಿತ ಖಾಸಗಿಸಂಸ್ಥೆ ವಾಲ್ ಮಾರ್ಕ್ ಮಾಲೀಕರ ಮನೆ ಹಾಗೂ....
ವಾಲ್​ಮಾರ್ಕ್ ಮಾಲೀಕರ ಮನೆ ಕಛೇರಿ ಮೇಲೆ ಎಸಿಬಿ ದಾಳಿ, ಅಕ್ರಮ ದಾಖಲೆಗಳ ಜಪ್ತಿ
ವಾಲ್​ಮಾರ್ಕ್ ಮಾಲೀಕರ ಮನೆ ಕಛೇರಿ ಮೇಲೆ ಎಸಿಬಿ ದಾಳಿ, ಅಕ್ರಮ ದಾಖಲೆಗಳ ಜಪ್ತಿ
ಬೆಂಗಳೂರು: ಅಕ್ರಮ ಟಿಡಿಆರ್ ಹಗರಣದ ವಿಚಾರಣೆ ತೀವ್ರಗೊಳಿಸಿರುವ ರಾಜ್ಯದ ಭ್ರಷ್ತಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪ್ರತಿಷ್ಠಿತ ಖಾಸಗಿಸಂಸ್ಥೆ ವಾಲ್ ಮಾರ್ಕ್ ಮಾಲೀಕರ ಮನೆ ಹಾಗೂ ಕಛೇರಿ ಮೇಲೆ ದಾಳಿ ನಡೆಸಿದ್ದಾರೆ. ಒಟ್ಟು ಐದು ಕಡೆ ದಾಳಿ ನಡೆಸಿರುವ ಎಸಿಬಿ ಮಹತ್ವದ ದಾಖಲೆಗಳ ಜಪ್ತಿ ಮಾಡಿದೆ.
ಎಸಿಬಿ ಸಂಜೀವ್ ಪಾಟೀಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿಕುಮಾರ್ ನೇತೃತ್ವದ ತಂಡ ವಾಲ್ ಮಾರ್ಕ್ ಸಂಸ್ಥೆಯ ಮಾಲೀಕ ರತನ್ ಲಾಥ್ ಮನೆ ಹಾಗೂ ರೆಸಿಡೆನ್ಸಿ ರಸ್ತೆಯ ಕಛೇರಿ ಮೇಲೆ ದಾಳಿ ನಡೆಸಿದೆ.  ಆದರೆ ದಾಳಿ ಸೂಚನೆ ದೊರಕಿದ್ದ ಕಾರಣ ರತನ್ ಲಾಥ್ ಮೊದಲೇ ಸ್ಥಳದಿಂದ ನಿರ್ಗಮಿಸಿದ್ದು ದಾಳಿಯ ವೇಳೆ ಅವರು ಪತ್ತೆಯಾಗಿಲ್ಲ. ಇನ್ನು ಸಂಸ್ಥೆಯ ನೌಕರ ಅಮಿತ್ ಬೋಳಾರ್ ಅವರ ಮನೆ, ಗುತ್ತಿಗೆದಾರರಾದ ಮುನಿರಾಜು, ಗೌತಮ್ ಅವರ ಮನೆಗಳ ಮೇಲೆ ಸಹ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಟಿಡಿಆರ್ ಹಗರಣದಲ್ಲಿ ಇದುವರೆಗೆ ಎಂಟಕ್ಕೂ ಹೆಚ್ಚು ಆರೋಪಿಗಳ ಮನೆ ಮೇಲೆ ದಾಳಿಯಾಗಿದೆ, ಆದರೆ ಎಲ್ಲಾ ಆರೋಪಿಗಳೂ ತಲೆಮರೆಸಿಕೊಂಡಿದ್ದಾರೆ.
ಬಿಬಿಎಂಪಿ ಇಂಜಿನಿಯರ್ ಕೃಷ್ಣಲಾಲ್ ಈ ಹಗರಣದ ಮುಖ್ಯ ಆರೋಪಿಯಾಗಿದ್ದು ಈತ ನೀಡುತ್ತಿದ್ದ ಟಿಡಿಆರ್ ಅನ್ನು ವಾಲ್ ಮಾರ್ಕ್ ಸಂಸ್ಥೆ ಮೂಲಕ ಪರಭಾರೆ ಮಾಡಲಾಗುತ್ತಿತ್ತು. ಬಿಲ್ಡರ್ ಗಳು ಹಾಗೂ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಈ ಟಿಡಿಆರ್ ಅನ್ನು ಹತ್ತಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಲಾಗುತ್ತಿತ್ತು ಎನ್ನಲಾಗಿದ್ದು ಇಂದಿನ ದಾಳಿ ವೇಳೆ ಹಲವಾರು ಮಹತ್ವದ ದಾಕಲೆಗಳ ಜಪ್ತಿ ಆಗಿದೆ ಎಂದು ಎಸಿಬಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com