ಸರ್ಕಾರದಿಂದ ಮಕ್ಕಳ ಶಾಲಾ ಬ್ಯಾಗ್ ಭಾರ ಮಿತಿ ನಿಯಮ; ತಜ್ಞರಿಂದ ವಿಭಿನ್ನ ಅಭಿಮತ

ಶಾಲಾ ಮಕ್ಕಳ ಬ್ಯಾಗುಗಳ ತೂಕವನ್ನು ತಗ್ಗಿಸಲು ಸರ್ಕಾರ ಆದೇಶ ಹೊರಡಿಸಿದ್ದು ಈ ಬಗ್ಗೆ ಪೋಷಕರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಾಲಾ ಮಕ್ಕಳ ಬ್ಯಾಗುಗಳ ತೂಕವನ್ನು ತಗ್ಗಿಸಲು ಸರ್ಕಾರ ಆದೇಶ ಹೊರಡಿಸಿದ್ದು ಈ ಬಗ್ಗೆ ಪೋಷಕರು ಮತ್ತು ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
2016-17ನೇ ಸಾಲಿನಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಮಕ್ಕಳು, ಕಾನೂನು ಮತ್ತು ರಾಷ್ಟ್ರೀಯ ಕಾನೂನು ಶಾಲೆ ಕೇಂದ್ರದ ಸಹಯೋಗದಲ್ಲಿ ನಡೆಸಿದ ಅಧ್ಯಯನದ ಬಳಿಕ ಶಿಕ್ಷಣ ಇಲಾಖೆ ಈ ನಿಯಮ ಹೊರಡಿಸಿದೆ. ಕಳೆದ ವರ್ಷ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಕೂಡ ಈ ಕುರುತಿ ನೀತಿಯೊಂದನ್ನು ರೂಪಿಸಿ ವರದಿ ಸಲ್ಲಿಸುವಂತೆ ಹೇಳಿತ್ತು.
ಶಿಕ್ಷಣ ಇಲಾಖೆಯ ಕ್ರಮವನ್ನು ಸ್ವಾಗತಿಸಿರುವ ಮಕ್ಕಳ ಮತ್ತು ಕಾನೂನು ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ನಿರಂಜನಾರಾಧ್ಯ ವಿ ಪಿ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಇಂತಹ ಕ್ರಮವನ್ನು ಜಾರಿಗೆ ತರಲು ಮಾರ್ಗಸೂಚಿ ಹೊರಡಿಸಿದೆ.
ಮಕ್ಕಳು ಅಧಿಕ ತೂಕದ ಬ್ಯಾಗುಗಳನ್ನು ಶಾಲೆಗೆ ಹೊತ್ತೊಯ್ಯುವುದನ್ನು ಕಂಡು ಸರ್ಕಾರ ಈ ಕ್ರಮ ಕೈಗೊಂಡಿದೆ. ವೈದ್ಯಕೀಯ ವಲಯ ಕೂಡ ಮಕ್ಕಳ ಬ್ಯಾಗುಗಳ ಭಾರದ ಬಗ್ಗೆ ಅಂತಾರಾಷ್ಟ್ರೀಯ ಅಳತೆಯನ್ನು ಸೂಚಿಸಿದೆ. ಅನೇಕರ ಜೊತೆ ಚರ್ಚಿಸಿ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮೂಲಕ ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗಿದೆ ಎಂದರು.
ಆಂಗ್ಲಮಾಧ್ಯಮ ಶಾಲೆಗಳ ವ್ಯವಸ್ಥಾಪಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್, ಶಿಕ್ಷಣ ಇಲಾಖೆ ಸಭೆ ಕರೆದಾಗ ಮಕ್ಕಳು ಮತ್ತು ಶಾಲೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಪರಿಗಣಿಸುವುದಿಲ್ಲ. ಈ ಅಧ್ಯಯನದ ಹಿಂದೆ ಯಾವುದೇ ವೈಜ್ಞಾನಿಕ ವಿಧಾನಗಳಿಲ್ಲ. ಒಂದೇ ಸಾರಿಗೆ ಜಾರಿಗೆ ತರುವ ಬದಲು ಕನಿಷ್ಠ ಹೋಂವರ್ಕ್ ಮಾಡಿಕೊಳ್ಳಬೇಕಾಗಿತ್ತು.
ರಾಜ್ಯದಲ್ಲಿರುವ 18 ಸಾವಿರ ಶಾಲೆಗಳಲ್ಲಿ ಸುಮಾರು 14 ಸಾವಿರ ಶಾಲೆಗಳು ಬಜೆಟ್ ಆಧಾರಿತ ಶಾಲೆಗಳಾಗಿದ್ದು ಸರ್ಕಾರ ಸಲಹೆ ನೀಡಿರುವ ಮೂಲಭೂತ ಸೌಕರ್ಯಗಳನ್ನು ಭರಿಸುವಷ್ಟು ಶಕ್ತವಾಗಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com