ನೆರೆ ಪರಿಹಾರ ಒತ್ತಾಯಿಸಿ ಸಿಎಂಗೆ ಘೇರಾವ್ ಯತ್ನ: ರೈತರ ಬಂಧನ
ಬೆಳಗಾವಿ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಘೇರಾವ್ ಹಾಕಲು ಮುಂದಾಗಿದ್ದ ಹಲವು ರೈತರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ನಂತರ ಬಿಡುಗಡೆ ಮಾಡಿದ್ದಾರೆ.
ನಗರ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಅಥಣಿ ಕಡೆಗೆ ವಾಹನದ ಮೂಲಕ ಯಡಿಯೂರಪ್ಪ ಅವರು ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ಅವರಿಗೆ ಘೇರಾವ್ ಹಾಕಲು ರೈತರು ಯತ್ನಿಸಿದರು.
ಮುಖ್ಯಮಂತ್ರಿಗಳು ಕಾರಿನಿಂದ ಇಳಿದು, ತಮ್ಮ ಮನವಿಗಳನ್ನು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡ ರೈತ ಮುಖಂಡರು, ಪ್ರವಾಸಿ ಮಂದಿರ ಗೇಟ್ ನಲ್ಲಿ ಬೆಂಗಾವಲು ಪಡೆ ವಾಹನ ಬರುತ್ತಿದ್ದಂತೆ ಏಕಾಏಕಿ ಬೆಂಗಾವಲಿ ಪಡೆ ವಾಹನದ ಎದುರು ನಡು ರಸ್ತೆಯಲ್ಲಿ ಮಲಗಿ ಪ್ರತಿಭಟನೆಗೆ ಮುಂದಾದರು,
ಈ ವೇಳೆ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ನಂತರ ಎಚ್ಚೆತ್ತುಕೊಂಡ ಭದ್ರತಾ ಕಾರ್ಯದಲ್ಲಿದ್ದ ಪೊಲೀಸರು, ಕೂಡಲೇ ಪ್ರತಿಭಟನೆಗೆ ಮುಂದಾದ ರೈತರನ್ನು ವಶಕ್ಕೆ ಪಡೆದುಕೊಂಡರು. ನಂತರ ಮುಖ್ಯಮಂತ್ರಿಗಳ ವಾಹನ ಹೊಗಲು ಅವಕಾಶ ಮಾಡಿಕೊಟ್ಟರು. ನಂತರ ಪೊಲೀಸರು ಹಾಗೂ ರೈತರ ಮಧ್ಯೆ ವಾಗ್ವಾದ ನಡೆಯಿತು. ಯಡಿಯೂರಪ್ಪ ತಾವು ರೈತರ ಮಗ ಎಂದು ಹೇಳುತ್ತಾರೆ. ಆದರೆ, ನಮ್ಮಿಂದ ಮನವಿ ಸ್ವೀಕರಿಸಿ ಆಲಿಸದೆ ನಿರ್ಲಕ್ಷ್ಯ ತೋರಿದ್ದಾರೆ, ಅಲ್ಲದೆ, ಗುರುವಾರ ಮನವಿ ನೀಡುವುದಕ್ಕೆ ತೆರಳಿದಾಗ, ಡಿಸಿಎಂ ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ