ಬೆಂಗಳೂರು: ತುಂಡುಡುಗೆ ಧರಿಸಿದ್ದಕ್ಕೆ ವ್ಯಕ್ತಿಯೊಬ್ಬ ಯುವತಿಗೆ ನಿಂದಿಸುವ ಘಟನೆ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಯುವತಿ ಗುರುವಾರ ರಾತ್ರಿ ತನ್ನ ಗೆಳೆಯನ ಜೊತೆ ಬೈಕಿನಲ್ಲಿ ಹೊರ ಹೋಗಿದ್ದಳು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಭಾರತೀಯ ಡ್ರೆಸ್ಸಿಂಗ್ ಕೋಡ್ ಪಾಲಿಸಲಿಲ್ಲ ಎಂದು ಯುವತಿಗೆ ನಿಂದಿಸಲು ಶುರು ಮಾಡಿದ್ದಾನೆ.
ಸರಿಯಾದ ರೀತಿಯಲ್ಲಿ ಬಟ್ಟೆ ಧರಿಸಿ, ಭಾರತೀಯ ಸಂಸ್ಕೃತಿ ಪಾಲಿಸಿ ಎಂದು ಅನಾಮಿಕ ವ್ಯಕ್ತಿಯೊಬ್ಬ ಯುವತಿಗೆ ಹೇಳಿದ್ದಾನೆ. ಇದನ್ನು ಯುವತಿಯ ಗೆಳೆಯ ವಿಡಿಯೋ ಮಾಡಿ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದಾನೆ.
ಈ ವಿಡಿಯೋದಲ್ಲಿ ವ್ಯಕ್ತಿ ಹಾಗೂ ಯುವತಿಯ ಸ್ನೇಹಿತನ ನಡುವೆ ವಾಗ್ವಾದ ನಡೆದಿದೆ. ಅಲ್ಲದೆ ಆ ವ್ಯಕ್ತಿ ಭಾರತದ ನಿಯಮಗಳನ್ನು ಪಾಲಿಸು, ಭಾರತದ ಉಡುಗೆಗಳನ್ನು ಧರಿಸು ಎಂದು ವ್ಯಕ್ತಿ ವಿಡಿಯೋದಲ್ಲಿ ಪದೇ ಪದೇ ಹೇಳಿದ್ದಾನೆ. ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಪರ- ವಿರೋಧ ಚರ್ಚೆಯಾಗುತ್ತಿವೆ.
Advertisement