'ಏಕತೆ' ಸಂದೇಶ ಸಾರಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪ್ರವಾಸ!

1.4 ಬಿಲಿಯನ್ ಭಾರತೀಯರನ್ನು ಒಗ್ಗೂಡಿಸುವ  ಗುರಿಯೊಂದಿಗೆ ಬೆಂಗಳೂರಿನ ನಿವಾಸಿ ಶೈಲೇಂದ್ರ ಸಿಂಗ್  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರಾಜಕೀಯಯೇತರ ಜಾಥಾ ಕೈಗೊಂಡಿದ್ದಾರೆ.  
ಶೈಲೇಂದ್ರ ಸಿಂಗ್
ಶೈಲೇಂದ್ರ ಸಿಂಗ್
Updated on

ಬೆಂಗಳೂರು: 1.4 ಬಿಲಿಯನ್ ಭಾರತೀಯರನ್ನು ಒಗ್ಗೂಡಿಸುವ  ಗುರಿಯೊಂದಿಗೆ ಬೆಂಗಳೂರಿನ ನಿವಾಸಿ ಶೈಲೇಂದ್ರ ಸಿಂಗ್  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರಾಜಕೀಯಯೇತರ ಜಾಥಾ ಕೈಗೊಂಡಿದ್ದಾರೆ.  

ಮಹಾತ್ಮ ಗಾಂಧಿ ಅವರ 150 ಜನ್ಮ ದಿನಾಚರಣೆ ಸಂದರ್ಭದಂದು ಈ ಜಾಥಾವನ್ನು ಆರಂಭಿಸಿದ್ದು, ಮುಂದಿನ ಕೆಲ ವಾರಗಳ ಕಾಲ ಮುಂದುವರೆಯಲಿದೆ.

ಮುಂಬೈ ಮೂಲದ ಸಿಂಗ್  18 ದಿನಗಳಲ್ಲಿ 19 ನಗರಗಳು ಹಾಗೂ 7 ಸಾವಿರದ 170 ಕಿಲೋ ಮೀಟರ್ ದೂರ ಸುತ್ತುವ ಗುರಿ ಹೊಂದಿದ್ದಾರೆ. ಈ ಹಾದಿಯಲ್ಲಿ  ಹೇಳಲಾಗದ ಸಾವಿರಾರು ಕಥೆಗಳು ಅನಾವರಣಗೊಳ್ಳುವ ಭರವಸೆಯನ್ನು ಅವರು ಹೊಂದಿದ್ದಾರೆ. 

ಕಳೆದ ಮೂರು ವರ್ಷಗಳಲ್ಲಿ  ದೇಶಾದ್ಯಂತ ಸುತ್ತಾಡಿದ್ದೇನೆ. ಜಾತಿ, ಆಹಾರ, ಧರ್ಮ, ನಕ್ಷೆಗಳು, ಫ್ಯಾಷನ್ ಹಾಗೂ ಭಾಷೆ ನಮ್ಮನ್ನು ವಿಭಜಿಸಿವೆ. ಆದರೆ, ಪ್ರೀತಿ ನಮ್ಮನ್ನು ಒಗ್ಗೂಡಿಸುತ್ತದೆ. ಪ್ರತಿಯೊಬ್ಬ ಮನುಷ್ಯನು ಆಂತರಿಕವಾಗಿ ಸಮಾನರಾಗಿರುತ್ತಾರೆ. ಆದರೆ, ಬಾಹ್ಯವಾಗಿ ಭಿನ್ನವಾಗಿರುತ್ತದೆ. ಆ ಚಿಂತನಾ ಪ್ರಕ್ರಿಯೆ ತಮ್ಮೊಂದಿಗೆ ಇರುವುದಾಗಿ ಸಿಂಗ್ ಹೇಳುತ್ತಾರೆ. 

ಪ್ರವಾಸದ ಸಂದರ್ಭದಲ್ಲಿ ಎಲ್ಲಾ ಹಂತದ ಜನರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ. ಬೆಂಗಳೂರಿನಲ್ಲಿ  ಡಾ. ಸುನೀಲ್ ಕುಮಾರ್ ಹೆಬ್ಬಿ ಅವರನ್ನು ಭೇಟಿ ಮಾಡಿದ್ದಾರೆ.  ಹೆಬ್ಬಿ ಅವರ ತಂಡ 700 ಉಚಿತ ಬಹು ಉಪಯೋಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿದ್ದು, ಸಂಚಾರಿ ವಾಹನಗಳ ಮೂಲಕ 40 ಸಾವಿರ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದೆ. 

ಗಾಂಧಿ ಅವರ ಜೀವನಕ್ಕೆ  ಸಂಬಂಧಿಸಿದ ಕೆಲ ಪ್ರದೇಶಗಳತ್ತ ಗಮನ ನೀಡುತ್ತಿರುವ ಸಿಂಗ್, ಕೊಯಂಬತ್ತೂರು, ಕೊಚ್ಚಿ, ಬೆಂಗಳೂರು , ಹಂಪಿ, ಮುಂಬೈ,ಅಹಮದಾಬಾದ್ ಮಾರ್ಗವಾಗಿ ಗಾಂಧಿ ದಂಡಿಯಾತ್ರೆ ಕೈಗೊಂಡ ಸ್ಥಳ ತಲುಪಲಿದ್ದಾರೆ. 
 
ಪ್ರಸ್ತುತ ದಿನಗಳಲ್ಲಿ ಜನರು ಶೇಕ್ ಹ್ಯಾಂಡ್  ಕೊಡುವುದಿಲ್ಲ, ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್ ಮಾಡುತ್ತಾರೆ.  ದೇಶದಲ್ಲಿ 25 ವರ್ಷದೊಳಗಿನ 600 ಬಿಲಿಯನ್ ಯುವಕರಿದ್ದಾರೆ. ನಾವೆಲ್ಲರೂ ಒಂದೇ ಕುಟುಂಬದಂತೆ ಬಾಳೋಣ ಎಂಬ ಸಂದೇಶ ನೀಡುವಲ್ಲಿ ಈ ಯಾತ್ರೆ ನೆರವು ನೀಡಲಿದೆ ಎಂದು ಅವರು ಹೇಳುತ್ತಾರೆ. 

ಏಕ ಭಾರತ ನನ್ನ ಭಾರತ ಎಂಬ ಗೀತೆಯನ್ನು ಸಿಂಗ್ ರಚಿಸಿದ್ದಾರೆ.  ಒಂಬತ್ತು ದಿನಗಳಲ್ಲಿ 21 ನಗರಗಳಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡಿನಲ್ಲಿ ಮಿಥೂನ್, ಸುಖ್ವಿಂದರ್ ಸಿಂಗ್, ಜುಬಿನ್ ನೌತಿಯಾಲ್ ಮತ್ತು ಗಾಡ್ಸ್ ವಿಲ್ ಅವರ ಧ್ವನಿಗಳಿರುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com