ಇಂದಿನಿಂದ ೧೩ ದಿನ ಐತಿಹಾಸಿಕ ಹಾಸನಾಂಬೆ ದರ್ಶನ ಶುರು

ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಐತಿಹಾಸಿನ ಹಾಸನಾಂಬಾ ದೇವಾಲಯದ ಬಾಗಿಲನ್ನು ಗುರುವಾರ ತೆರೆಯಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಐತಿಹಾಸಿನ ಹಾಸನಾಂಬಾ ದೇವಾಲಯದ ಬಾಗಿಲನ್ನು ಗುರುವಾರ ತೆರೆಯಲಾಗಿದೆ.

ಇದೇ ತಿಂಗಳ ೨೯ರ ವರೆಗೆ ದೇವಿಯ ದರ್ಶನ ಸಿಗಲಿದೆ.  ಏತನ್ಮಧ್ಯೆ ಹಾಸನಾಂಬಾ ಜಾತ್ರೆಯ ಅಂಗವಾಗಿ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.  ಲಕ್ಷಾಂತರ ಜನರು ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ವ್ಯವಸ್ಥೆಗಳನ್ನೂ ಮಾಡಿದೆ. 

ಅರಸು ಮನೆತನದ ನಟರಾಜ್ ಸಾಂಪ್ರಾದಾಯಿಕವಾಗಿ ಬನ್ನಿ ಕಡಿಯುವ ಮೂಲಕ ದೇವಾಲಯ ಬಾಗಿಲು ತೆಗೆಯಲಾಯಿತು. 

ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುವ ಈ ದೇಗುಲದ ದೇವಿ ದರ್ಶನ ಪಡೆಯಲು ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಯ ಜನರು ಆಗಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ದೇಗುಲದ ಬಾಗಿಲನ್ನು ೧೩ದಿನಗಳ ಕಾಲ ತೆಗೆಯಲು ನಿರ್ಧರಿಸಲಾಗಿದೆ.

ಅಕ್ಟೋಬರ್ ೧೮ ರಿಂದ ಸಪ್ತಮಾತೃಕೆಯರು ಮತ್ತು ಹಾಸನಾಂಬಾ ಕಥೆಯನ್ನು ಚಿತ್ರಿಸಿರುವ ರಥವು ಜಿಲ್ಲೆಯ ಎಲ್ಲಾ ಏಳು ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ದೇವತೆಯ ಪುರಾಣಗಳನ್ನು ಪಟ್ಟಣಗಳು ಮತ್ತು ಹಳ್ಳಿಗಳ ಪ್ರಮುಖ ವಲಯಗಳಲ್ಲಿ ಕಲಾವಿದರು ನಿರೂಪಿಸಲಿದ್ದಾರೆ.

ಪದ್ಧತಿಯ ಪ್ರಕಾರ ಅಕ್ಟೋಬರ್ ೨೯ ರಂದು ಬಾಗಿಲು ಮುಚ್ಚಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರನ್ನು ಆಕರ್ಷಿಸುವ ಹಾಸನಂಬಾ ಉತ್ಸವವನ್ನು ಸುಗಮವಾಗಿ ನಡೆಸಲು ಹಾಸನ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಿಂದ ದೇವಾಲಯದವರೆಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ.  ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ದೇವಾಲಯದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಈ ಹಬ್ಬದ ಸಮಯದಲ್ಲಿ ಮಾತ್ರ ದೇವಾಲಯವನ್ನು ತೆರೆಯಲಾಗುತ್ತಿರುವುದರಿಂದ, ದೂರದ ಸ್ಥಳಗಳ ಜನರು ಈ ಸಂದರ್ಭದಲ್ಲಿ ಹಾಸನಕ್ಕೆ ಭೇಟಿ ನೀಡುವುದನ್ನು ಸೂಚಿಸುತ್ತಾರೆ. ಅಕ್ಟೋಬರ್ ೧೭ ರಂದು (ಮೊದಲ ದಿನ) ಮತ್ತು ಅಕ್ಟೋಬರ್ ೨೯ ರಂದು (ಕೊನೆಯ ದಿನ) ಸಾರ್ವಜನಿಕರಿಗೆ ಅನುಮತಿ ಇರುವುದಿಲ್ಲ  ಪೂಜಾ ಸಮಯವನ್ನು ಹೊರತುಪಡಿಸಿ, ದೇವಾಲಯವು ದಿನವಿಡೀ ತೆರೆದಿರುತ್ತದೆ.

ಹಾಸನಾಂಬಾ ಹಬ್ಬದ ಸಂದರ್ಭದಲ್ಲಿ ಹಾಸನಕ್ಕೆ ಭೇಟಿ ನೀಡುವವರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆ ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಏರ್ಪಡಿಸಿದೆ.  ಈ ದೇವಾಲಯವು ೧೨ ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಲಕ್ಷಾಂತರ ಜನರನ್ನು ಪ್ರತಿವರ್ಷ ತನ್ನತ್ತ ಆಕರ್ಷಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com