ಬೆಂಗಳೂರಿನಲ್ಲಿ ಗೂಗಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬ್: ಸ್ಟಾರ್ಟ್ ಅಪ್ ಗಳಿಗೆ ವರ?

ತಂತ್ರಜ್ಞಾನ ದೈತ್ಯ ಕಂಪೆನಿ ಗೂಗಲ್ ಬೆಂಗಳೂರಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ) ಮತ್ತು ಅದರ ಅಪ್ಲಿಕೇಶನ್ಸ್ ಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧನಾ ಪ್ರಯೋಗಾಲಯವಾದ ಗೂಗಲ್ ರಿಸರ್ಚ್ ಇಂಡಿಯಾವನ್ನು ಸ್ಥಾಪಿಸಲು ನಿರ್ಧರಿಸಿರುವುದು ಹಲವರಿಗೆ ಎಐ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಂತ್ರಜ್ಞಾನ ದೈತ್ಯ ಕಂಪೆನಿ ಗೂಗಲ್ ಬೆಂಗಳೂರಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ) ಮತ್ತು ಅದರ ಅಪ್ಲಿಕೇಶನ್ಸ್ ಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧನಾ ಪ್ರಯೋಗಾಲಯವಾದ ಗೂಗಲ್ ರಿಸರ್ಚ್ ಇಂಡಿಯಾವನ್ನು ಸ್ಥಾಪಿಸಲು ನಿರ್ಧರಿಸಿರುವುದು ಹಲವರಿಗೆ ಎಐ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಿದೆ. 


ಎಐಯನ್ನು ಡ್ರೋನ್ ಮಾದರಿಯಲ್ಲಿ ಬಳಸಿಕೊಂಡು ಚಹಾ ತೋಟದಲ್ಲಿ ಕೀಟನಾಶಗಳನ್ನು ಸಿಂಪಡಿಸುವುದರಿಂದ ಹಿಡಿದು ಸಂಚಾರಿ ದಟ್ಟಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಣಗೊಳಿಸಬಹುದು. ಎಐ ತಂತ್ರಜ್ಞಾನವನ್ನು ನಮ್ಮ ದಿನನಿತ್ಯ ಜೀವನದಲ್ಲಿ ಬಳಸಬಹುದು. 


ಏನಿದು ಎಐ: ಯಂತ್ರಗಳು ಮಾನವನ ರೀತಿ ಬುದ್ದಿಮತ್ತೆ ತೋರಿಸುವುದಕ್ಕೆ ಕೃತರ ಬುದ್ದಿಮತ್ತೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ) ಎನ್ನುತ್ತಾರೆ. ಈ ಪ್ರಕ್ರಿಯೆಗಳಲ್ಲಿ ಕಲಿಕೆ (ಮಾಹಿತಿ ಮತ್ತು ಮಾಹಿತಿಯನ್ನು ಬಳಸುವುದು ಮತ್ತು ನಿಯಮಗಳನ್ನು ಬಳಸುವುದು), ತಾರ್ಕಿಕ ಕ್ರಿಯೆ (ಅಂದಾಜು ಅಥವಾ ನಿರ್ದಿಷ್ಟ ತೀರ್ಮಾನಗಳನ್ನು ತಲುಪಲು ನಿಯಮಗಳನ್ನು ಬಳಸುವುದು) ಮತ್ತು ಸ್ವಯಂ-ತಿದ್ದುಪಡಿ ಸೇರಿವೆ. ತಾಂತ್ರಿಕ ಯಂತ್ರಗಳನ್ನು ಹೆಚ್ಚು ಬೌದ್ಧಿಕಗೊಳಿಸಿ ಅವುಗಳು ಮಾನವರಂತೆ ಪ್ರತಿಕ್ರಿಯೆ ನೀಡುತ್ತಾ ಕೆಲಸ ಮಾಡುತ್ತವೆ. ಮನುಷ್ಯನ ದಿನನಿತ್ಯದ ಕೆಲಸಗಳನ್ನು ಸುಲಭ, ದಕ್ಷಗೊಳಿಸುವುದು ಮತ್ತು ಕಡಿಮೆ ಅವಧಿಯಲ್ಲಿ ಮಾಡಿ ಮುಗಿಸುತ್ತದೆ.


ಭಾರತ ಈಗಾಗಲೇ ಡಿಜಿಟಲೀಕರಣದತ್ತ ವಾಲುತ್ತಿದೆ. ಡಿಜಿಟಲೀಕರಣಕ್ಕೆ ಜನ ಬಹಳ ಬೇಗನೆ ಒಗ್ಗಿ ಹೋಗುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರಸ್ತುತ ಸುಮಾರು 627 ಮಿಲಿಯನ್ ಜನರು ಇಂಟರ್ನೆಟ್ ಬಳಸುತ್ತಿದ್ದು ಸುಧಾರಿತ ತಂತ್ರಜ್ಞಾನ ಉತ್ಪಾದಿಸುವಲ್ಲಿ ಭಾರತ ದೇಶ ಸೂಪರ್ ಪವರ್ ರಾಷ್ಟ್ರಗಳಾದ ಚೀನಾ ಮತ್ತು ಅಮೆರಿಕಾ ಜೊತೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದಿದೆ.


ಬೆಂಗಳೂರು ನಗರದಲ್ಲಿ 100ಕ್ಕೂ ಹೆಚ್ಚು ಮಲ್ಟಿ ನ್ಯಾಷನಲ್ ಕಂಪೆನಿಗಳಿದ್ದು ಸುಮಾರು 7,500 ಸ್ಟಾರ್ಟ್ ಅಪ್ ಕೇಂದ್ರಗಳು, ಜಾಗತಿಕ ಮಟ್ಟದ ಐಟಿ ಕಂಪೆನಿಗಳಿವೆ. ಬೆಂಗಳೂರು ನಗರ ದೊಡ್ಡ ದೊಡ್ಡ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದು ಮಾತ್ರವಲ್ಲದೆ ಉದ್ದಿಮೆ ಬಂಡವಾಳಗಾರರು ದೇಶದಲ್ಲಿ ಹೂಡಿಕೆ ಮಾಡುವಂತೆ ನೋಡುತ್ತಿದೆ. 2019ರ ಆನಾಲಿಟಿಕ್ಸ್ ಇಂಡಿಯಾ ಮ್ಯಾಗಜಿನ್ ಸಮೀಕ್ಷೆ ಪ್ರಕಾರ, ಅತಿ ಹೆಚ್ಚು ಆದಾಯ ಬಂದಿದ್ದು ಬೆಂಗಳೂರಿನಿಂದ. 2017ರಲ್ಲಿ 539 ಡಾಲರ್ ಇದ್ದರೆ ಕಳೆದ ವರ್ಷ 739 ಡಾಲರ್ ಆಗಿತ್ತು.ಅಂದರೆ ಒಂದೇ ವರ್ಷದಲ್ಲಿ ಶೇಕಡಾ 37ರಷ್ಟು ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com