ಸಾಂದರ್ಭಿಕ ಚಿತ್ರ
ರಾಜ್ಯ
ಮಂಡ್ಯ: ಕೆ.ಆರ್. ಪೇಟೆ ಬಳಿ ಪಿಎಫ್ ಐ ಪರೇಡ್, 16 ಮಂದಿ ವಶಕ್ಕೆ
ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಆಲಂಬಾಡಿ ಕಾವಲ್ ನಲ್ಲಿ ಇಂದು ಪಿಎಫ್ ಐ ಸಂಘಟನೆ ಪರೇಡ್ ನಡೆಸಿದೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಆಲಂಬಾಡಿ ಕಾವಲ್ ನಲ್ಲಿ ಇಂದು ಪಿಎಫ್ ಐ ಸಂಘಟನೆ ಪರೇಡ್ ನಡೆಸಿದೆ.
ಈ ಮಾಹಿತಿ ಕಲೆ ಹಾಕಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಶಂಕಿತ 16 ಮಂದಿ ಪಿಎಫ್ ಐ ಸಂಘಟನೆಯ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್ಪಿ ಪರಶುರಾಮ್, ಎಎಸ್ಪಿ ಡಾ.ವಿ.ಜೆ.ಶೋಭಾರಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಹುಣಸೂರಿನ ನಲ್ಲಿ 3, ಆಲಂಬಾಡಿಕಾವಲ್ ನ 5, ಕೆ.ಆರ್.ಪೇಟೆ ಪಟ್ಟಣದ 8 ಮಂದಿ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಕೆ. ಆರ್. ಪೇಟೆ ಪಟ್ಟಣದ ಶಫೀವುಲ್ಲಾ ಕಿಕ್ಕೇರಿ ರಸ್ತೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಮತ್ತು ಪಿಎಫ್ ಐ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬುದು ತಿಳಿದುಬಂದಿದೆ.
ವರದಿ: ನಾಗಯ್ಯ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ