

ಹಾಸನ: ಹಾಸನ ಜಿಲ್ಲೆಯ ಪ್ರಖ್ಯಾತ ಹಾಸನಾಂಬೆಯ ಈ ವರ್ಷದ ದರ್ಶನ ಮಂಗಳವಾರಕ್ಕೆ ಮುಕ್ತಾಯವಾಗಲಿದೆ. ಇಂದು ಮಧ್ಯಾಹ್ನ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ.
ವರ್ಷಕ್ಕೆ ಒಂದೇ ಬಾರಿ ಬಾಗಿಲು ತೆರೆಯುವ ಹಾಸನಾಂಬೆ ಈ ವರ್ಷ ಕಳೆದ ಅಕ್ಟೋಬರ್ 17ರಂದು ಆರಂಭವಾಗಿತ್ತು. ಇಂದು ಮಧ್ಯಾಹ್ನ 1 ಗಂಟೆ ನಂತರ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. 13 ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ನೀಡಿದ ಹಾಸನಾಂಬೆ ಮತ್ತೆ ಭಕ್ತರಿಗೆ ದರ್ಶನ ನೀಡುವುದು ಮುಂದಿನ ವರ್ಷವೇ.
ಹಾಸನಾಂಬೆಯ ದರ್ಶನವಾಗುವುದು ಅಶ್ವಯುಜ ಮಾಸದ ಹುಣ್ಣಿಮೆ ನಂತರ. ಇಂದು ಮಧ್ಯಾಹ್ನ 12.30ಕ್ಕೆ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿ ಬಾಗಿಲು ತೆರೆದ ಬಳಿಕ ಸಂಪ್ರದಾಯಬದ್ಧವಾಗಿ ಪೂಜಾಕೈಂಕರ್ಯಗಳು ನಡೆಯಬೇಕಿರುವುದರಿಂದ ಈ ದಿನ ಸಾರ್ವಜನಿಕರಿಗೆ ದೇವಾಲಯದೊಳಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದ್ದಾರೆ.