ಐಎಂಎ ಹಗರಣ: ಪೋಲೀಸ್ ಠಾಣೆಯಲ್ಲಿ ಧೂಳು ತಿನ್ನುತ್ತಿದೆ ಮನ್ಸೂರ್ ಖಾನ್ ಐಷಾರಾಮಿ ಕಾರುಗಳು!

ಪೊಂಜಿ ಹಗರಣಗಾರ ಮನ್ಸೂರ್ ಅಲಿ ಖಾನ್ ಎರಡು ಐಷಾರಾಮಿ ಕಾರುಗಳು ಸೇರಿದಂತೆ ಕನಿಷ್ಠ ಅರ್ಧ ಡಜನ್ ವಾಹನಗಳು ನಗರದ ಪೊಲೀಸ್ ಠಾಣೆಗಳಲ್ಲಿ ಧೂಳು  ತಿನ್ನುತ್ತಾ ಬಿದ್ದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪೊಂಜಿ ಹಗರಣಗಾರ ಮನ್ಸೂರ್ ಅಲಿ ಖಾನ್ ಎರಡು ಐಷಾರಾಮಿ ಕಾರುಗಳು ಸೇರಿದಂತೆ ಕನಿಷ್ಠ ಅರ್ಧ ಡಜನ್ ವಾಹನಗಳು ನಗರದ ಪೊಲೀಸ್ ಠಾಣೆಗಳಲ್ಲಿ ಧೂಳು  ತಿನ್ನುತ್ತಾ ಬಿದ್ದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

"ಜೂನ್ ಆರಂಭದಲ್ಲಿ ಅವರ ಪೊಂಜಿ ಹಗರಣ ಬೆಳಕಿಗೆ ಬಂದ ನಂತರ ಖಾನ್ ಗೆ ಸೇರಿದ ರೇಂಜ್ ರೋವರ್, ಜಾಗ್ವಾರ್ ಸೇರಿದಂತೆ ಅನೇಕ ಕಾರುಗಳು ಜೂನ್ ನಿಂದ ನಗರದ ವಿವಿಧ ಪೋಲೀಸ್ ಠಣೆಗಳಲ್ಲಿ ನಿಲುಗಡೆಯಾಗಿದ್ದು  ಅವುಗಳನ್ನು ಬೇರೆಡೆ ಸ್ಥಳಾಂತರಿಸಲು ಜಾಗದ ಸಮಸ್ಯೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐಎಂಎ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು ಮನ್ಸೂರ್ ಗೆ ಸೇರಿದ ಕಾರು, ಇತರ ಆಸ್ತಿಗಳ ವಶಕ್ಕೆ ಪಡೆಯಲಾಗಿದೆ.ಅಲಸೂರು ಠಾಣೆಯಲ್ಲಿ ಸೆಡಾನ್ ಕಾರುಗಳನ್ನು ನಿಲ್ಲಿಸಲಾಗಿದ್ದು ಇತರ ವಾಹನಗಳು ಬೇರೆಡೆ ಸ್ಥಳಾವಕಾಶದ ಕೊರತೆಯಿಂದಾಗಿಸಿಐಡಿ ಕಚೇರಿ ಸಂಕೀರ್ಣದಲ್ಲಿ ನಿಲ್ಲಿಸಲಾಗಿದೆ. 

ಬಿಜೆಪಿ ಸರ್ಕಾರವು ಆಗಸ್ಟ್ 21 ರಂದು ಬೌಕೋಟಿ ಪೊಂಜಿ ಹಗರಣವನ್ನು ಸಿಬಿಐಗೆ ವರ್ಗಾಯಿಸುತ್ತಿದ್ದಂತೆ, ಎಸ್‌ಐಟಿ ಕೇಸ್ ಫೈಲ್‌ಗಳನ್ನು ಮತ್ತು ನಗದು, ಚಿನ್ನದ ಆಭರಣಗಳು, ವಜ್ರಗಳು ಮತ್ತು ಅವರ ವೈಯಕ್ತಿಕ ಮತ್ತು ಕಚೇರಿ ವಾಹನಗಳಂತಹ ಇತರ ಆಸ್ತಿಗಳನ್ನು ಹಸ್ತಾಂತರಿಸಿದೆ "ಖಾನ್ ಅವರ ಇತರ ವಾಹನಗಳಾದ ಇನ್ನೋವಾ, ಸ್ಕೂಲ್ ವ್ಯಾನ್, ಮಿನಿ ಟ್ರಕ್ ಮತ್ತು ಮಿನಿ ಬಸ್ ಅನ್ನು ಸಿಐಡಿ ಕಚೇರಿ ಸಂಕೀರ್ಣದಲ್ಲಿ ನಿಲ್ಲಿಸಲಾಗಿತ್ತು, ಏಕೆಂದರೆ ಅವುಗಳನ್ನು ವಶಪಡಿಸಿಕೊಂಡ ನ್ಯಾಯವ್ಯಾಪ್ತಿ ಪೊಲೀಸ್ ಠಾಣೆಗಳಲ್ಲಿ ಸ್ಥಳವಿಲ್ಲ " ಮಾಜಿ ತನಿಖಾ ಅಧಿಕಾರಿ.ಹೇಳಿದ್ದಾರೆ.

ಖಾನ್ ಅವರ ಐಎಂಎ ಜ್ಯುವೆಲ್ಲರ್ಸ್‌ನ ಮುಖ್ಯ ಶೋ ರೂಂ ಮತ್ತು ಕಚೇರಿ ಇರುವ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಜೂನ್ 10 ರಂದು ಮುಖ್ಯ ಪ್ರಕರಣ ದಾಖಲಾಗಿದ್ದರೂ, ಹಗರಣದ ತನಿಖೆಗಾಗಿ ಜೂನ್ ಮಧ್ಯದಲ್ಲಿ ಎಸ್‌ಐಟಿ ಸ್ಥಾಪಿಸಿದಾಗ ಖಾನ್ ಅವರ ವಾಹನಗಳು ಮತ್ತು ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. .ನಗರದ ಕೇಂದ್ರ ವ್ಯಾಪಾರ ಸ್ಥಳವಾಗಿರುವ  ಕಮರ್ಷಿಯಲ್ ಸ್ಟ್ರೀಟ್ ಪ್ರದೇಶದಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಮತ್ತು ಇತರ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಅನೇಕ ವಾಹನಗಳನ್ನು ಈಗಾಗಲೇ ಇತರ ಪೊಲೀಸ್ ಠಾಣೆಗಳ ಸುತ್ತಲೂ ನಿಲ್ಲಿಸಲಾಗಿರುವುದರಿಂದ, ಖಾನ್ ಅವರ ವಾಹನಗಳನ್ನು ನಗರ ಕೇಂದ್ರದಲ್ಲಿರುವ ಸಿಐಡಿ ಕಚೇರಿ ಕಾಂಪೌಂಡ್‌ನಲ್ಲಿ ನಿಲ್ಲಿಸಬೇಕಾಗಿತ್ತು"" ಎಂದು ಇನ್ಸ್‌ಪೆಕ್ಟರ್ ನೆನಪಿಸಿಕೊಂಡರು.

ಇನ್ನು ಮನ್ಸೂರ್ ಖಾನ್ ದುಬೈಗೆ ಪರಾರಿಯಾಗುವ ಮುನ್ನ ಕಪ್ಪು ಬಣ್ಣದ ಜಾಗ್ವಾರ್, ರೇಂಜ್ ರೋವರ್ ಕಾರನ್ನು ವಿಮಾನ ನಿಲ್ದಾಣದಲ್ಲಿ ಪಾರ್ಕ್ ಮಾಡಿದ್ದ. ಹಗರಣದ ತನಖೆ ಆರಂಭಿಸಿದ್ದ ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದರು. 

ಇನ್ನು ಖಾನ್ ಮಾತ್ರವಲ್ಲದೆ ಇತರರಿಗೆ ಸೇರಿದ ತಹ ಅನೇಕ ಐಷಾರಾಮಿ ಕಾರುಗಳು ನಗರದಾದ್ಯಂತ ಅನೇಕ ಪೊಲೀಸ್ ಠಾಣೆಗಳಲ್ಲಿ ತುಕ್ಕು ಹಿಡಿಯುತ್ತಿವೆ, ಏಕೆಂದರೆ ಅವುಗಳನ್ನು ಒಳಗೊಂಡ ಪ್ರಕರಣಗಳನ್ನು ಪರಿಹರಿಸುವ ಅಥವಾ ವಿಲೇವಾರಿ ಮಾಡುವವರೆಗೆ ಅವುಗಳನ್ನು ಹಿಂದಿರುಗಿಸುವಂತಿಲ್ಲ.ಎಂದು ಅಧಿಕಾರಿ ಹೇಳಿದರು.

ಜುಲೈ 19 ರಂದು ನವದೆಹಲಿ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಹಿಂದಿರುಗಿದ ಖಾನ್ (48) ನನ್ನು ಬಂಧಿಸಿ ಜುಲೈ 20 ರಂದು ಬೆಂಗಳೂರಿಗೆ ಕರೆತರಲಾಗಿದೆ.ಖಾನ್ ಅಂದಿನಿಂದಲೂ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com