ಬೆಂಗಳೂರು: ಡೇಟಿಂಗ್ ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರೀತಿ ಹುಡುಕಲು ಹೋದ ಯುವಕನೊಬ್ಬ 1.35 ಲಕ್ಷ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡೇಟಿಂಗ್ ಆಪ್ ಮೂಲಕ ರಿತೇಶ್ (ಹೆಸರು ಬದಲಾಯಿಸಲಾಗಿದೆ) ಪ್ರೀತಿ ಹುಡುಕಲು ಮುಂದಾಗಿದ್ದ. ಅಲ್ಲಿ ಪರಿಚಿತಳಾದ ಯುವತಿ ಜೊತೆ ಚಾಟಿಂಗ್ ಆರಂಭಿಸಿದ್ದ. ಕಳೆದ ವಾರ ಯುವಕನಿಗೆ ಕರೆ ಮಾಡಿದ್ದ ರಾಹುಲ್ ಮಂಗಳವಾರ ಮೀಟ್ ಆಗೋಣ ಎಂದು ಹೇಳಿದ್ದಳು.
ಸೆಪ್ಟಂಬರ್ 5ನೇ ತಾರೀಖಿನಿಂದ ಇಬ್ಬರು ಪರಸ್ಪರ ಮಾತನಾಡಲು ಆರಂಭಿಸಿದ್ದರು, ಫೋನ್ ನಂಬರ್ ಎಕ್ಸ್ ಚೇಂಜ್ ಮಾಡಿಕೊಂಡಿದ್ದರು. ಬೊಮ್ಮನಹಳ್ಳಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ಗೆ ಆಕೆಯನ್ನು ಆಹ್ವಾನಿಸಿದ್ದ. ಆಕೆ ಮನೆಗೆ ಬಂದಾಗ ತಿಳಿಸಿದ್ದು ಆಕೆ ಯುವತಿಯಲ್ಲ ತೃತೀಯ ಲಿಂಗಿ ಎಂದು. ಮನೆಯನ್ನು ಹೊರಹೋಗುವಂತೆ ಯುವಕ ಗಲಾಟೆ ಮಾಡಿದ್ದ.
ಆಗ ತನ್ನ ಇನ್ನಿಬ್ಬರು ಸ್ನೇಹಿತರನ್ನು ಕರೆಸಿಕೊಂಡ ತೃತೀಯ ಲಿಂಗಿ ರಾಹುಲ್ ರಿತೇಶ್ ನನ್ನು ಕಟ್ಟಿಹಾಕಿ ಥಳಿಸಿದ್ದಾರೆ. ಆತನ ಮೊಬೈಲ್, ಪರ್ಸ್ ಕಸಿದುಕೊಂಡಿದ್ದಾರೆ.
ಬಳಿಕ ಎಟಿಎಂ ಕಾರ್ಡ್ ಪಡೆದು, ಪಿನ್ ನೀಡುವಂತೆ ಹಿಂಸೆ ನೀಡಿದ್ದಾರೆ. ರಿತೇಶ್ ಪಿನ್ ನಂಬರ್ ಹೇಳುತ್ತಿದ್ದಂತೆ 1.35 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ಮೂವರ ಪರಾರಿಯಾಗಿದ್ದಾರೆ.
ಪೊಲೀಸರಿಗೆ ದೂರು ನೀಡದಂತೆ ಮೂವರು ಬೆದರಿಗೆ ಹಾಕಿದ್ದರು. ಮೊದಲಿಗೆ ಪೊಲೀಸರು ಆತಂನ ದೂರು ದಾಖಲಿಸಿಕೊಳ್ಳಲಿಲ್ಲ, ಆದರೆ ನಾನು ಹೋದ ಮಲೇ ಪೊಲೀಸರು ರಿತೇಶ್ ನಿಂದ ಹೇಳಿಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ ಎಂದು ರಿತೇಶ್ ಪರ ವಕೀಲ ಗೌರವ್ ಸಿಂಗ್ ಗೌರ್ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
Advertisement