ಬಲವಂತದ ಭಾಷೆ ಹೇರಿಕೆ ಸಲ್ಲದು: ಮಾಜಿ ಸಿಎಂ ಸಿದ್ದರಾಮಯ್ಯ

ಯಾವುದೇ ಭಾಷಾ ಕಲಿಕೆಗೆ ನಮ್ಮ ವಿರೋಧವಿಲ್ಲ, ಆದರೆ ಯಾವುದೇ ಭಾಷೆ ಬಲವಂತದ‌ ಹೇರಿಕೆಯಾಗಬಾರದು ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಯಾವುದೇ ಭಾಷಾ ಕಲಿಕೆಗೆ ನಮ್ಮ ವಿರೋಧವಿಲ್ಲ, ಆದರೆ ಯಾವುದೇ ಭಾಷೆ ಬಲವಂತದ‌ ಹೇರಿಕೆಯಾಗಬಾರದು ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ಒಂದೇ ರಾಷ್ಟ್ರಭಾಷೆ ಅಲ್ಲ. ದೇಶದಲ್ಲಿ 22 ಭಾಷೆಗಳಿಗೆ ಮಾನ್ಯತೆ ನೀಡಲಾಗಿದ್ದು, ಅದರಲ್ಲಿ ಕನ್ನಡವೂ ಒಂದು. ಹಿಂದಿ ಒಂದೇ ಸಾರ್ವಭೌಮ‌ಭಾಷೆ ಅಲ್ಲ‌. ಯಾರೂ ಯಾವ ಭಾಷೆಯನ್ನು ಬೇಕಾದರೂ ಕಲಿಯಬಹುದು, ಆದರೆ ಬಲವಂತದಿಂದ ಇಂತಹದ್ದೇ ಭಾಷೆ ಕಲಿಯಿರಿ ಇದೇ ರಾಷ್ಟ್ರೀಯ ಭಾಷೆ ಎನ್ನುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರವಾಗಲೀ ರಾಜ್ಯದ ಬಿಜೆಪಿ ನಾಯಕರಾಗಲೀ‌ ಸಂತ್ರಸ್ತರಿಗೆ ಭಿಕ್ಷೆ ನೀಡುತ್ತಿಲ್ಲ. ಆದಷ್ಟು ಬೇಗ ಸಮರ್ಪಕ ನೆರೆ ಪರಿಹಾರ‌ ನೀಡಿ,‌ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು, ಪ್ರವಾಹ ಬಂದು 45 ದಿನಗಳಾದರೂ ಇನ್ನೂ ಪರಿಹಾರ ಬಿಡುಗಡೆಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com