ದುಡ್ಡೇ ದೊಡ್ಡಪ್ಪ: ಬೀದಿಗೆ ಬಂತು ಪುಲ್ವಾಮಾ ದಾಳಿ ಹುತಾತ್ಮ ಯೋಧ ಗುರು ಕುಟುಂಬದ ಜಗಳ

ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಎಚ್.ಗುರು ಮನೆಯಲ್ಲಿ ದೇಣಿಗೆಯಾಗಿ ಬಂದ ಹಣಕ್ಕಾಗಿ ಜಗಳ ಆರಂಭವಾಗಿದೆ....
ಹುತಾತ್ಮ ಯೋಧ ಎಚ್.ಗುರು ಕುಟುಂಬ
ಹುತಾತ್ಮ ಯೋಧ ಎಚ್.ಗುರು ಕುಟುಂಬ
ಮೈಸೂರು: ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಎಚ್.ಗುರು ಮನೆಯಲ್ಲಿ ದೇಣಿಗೆಯಾಗಿ ಬಂದ ಹಣಕ್ಕಾಗಿ ಜಗಳ ಆರಂಭವಾಗಿದೆ.
ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಮತ್ತು ತಾಯಿ ಚಿಕ್ಕೋಳಮ್ಮ ಹಣಕ್ಕಾಗಿ ಜಗಳ ಮಾಡಿಕೊಂಡಿದ್ದಾರೆ, ಗುರು ಹೆಸರಿನಲ್ಲಿ ಬಂದಿರುವ ಪರಿಹಾರದ ಹಣದ ಚೆಕ್ ಕಲಾವತಿ ಅಕೌಂಟ್ ನಲ್ಲಿದೆ, ಗುರು ತಮ್ಮನನ್ನ ಮದುವೆಯಾಗಲು ಕಲಾವತಿ ನಿರಾಕರಿಸಿದ ಕಾರಣ ಹಣ ತೆಗೆದುಕೊಳ್ಳಲು ಗುರು ತಾಯಿ ಚಿಕ್ಕೋಳಮ್ಮ ಮುಂದಾಗಿದ್ದಾರೆ, ಹೀಗಾಗಿ ಕಲಾವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಚಿಕ್ಕೋಳಮ್ಮ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ತನಗೆ ಗುರುವಿನ ತಾಯಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಲಾವತಿ ಆರೋಪಿಸಿದ್ದಾರೆ, ಇದೇ ವೇಳೆ ಸಚಿವ ಡಿ,ಸಿ ತಮ್ಮಣ್ಣ ಮತ್ತು ಅವರ ಬೆಂಬಲಿಗರು ಮಧ್ಯ ಪ್ರವೇಶಿಸಿ ಬುದ್ದಿವಾದ ಹೇಳಿದ್ದಾರೆ, ಹಣಕ್ಕಾಗಿ ಈ ರೀತಿ ಕಚ್ಚಾಡುತ್ತಿದ್ದರೇ ಹುತಾತ್ಮ ಯೋಧ ಗುರುವಿನ ವರ್ಚಸ್ಸು ಹಾಳಾಗುತ್ತದೆ ಎಂದು ಹೇಳಿದ್ದಾರೆ, ಅತ್ತೆ ಸೊಸೆಯರ ಜಗಳದಿಂದ ಅಸಮಾಧಾನಗೊಂಡಿರುವ ಗ್ರಾಮಸ್ಥರು ಪಂಚಾಯಿತಿ ಸೇರಿಸಿ, ಶಾಂತಿಯಿಂದ ಜೀವನ ನಡೆಸುವಂತೆ ಸಲಹೆ ನೀಡಿದ್ದಾರೆ.
ಪರಿಹಾರದ ಹಣಕ್ಕಾಗಿ ಇಬ್ಬರು ಪರಸ್ಪರ ನಿಂದಿಸಿಕೊಳ್ಳುತ್ತಿದ್ದಾರೆ, ಕಲಾವತಿ ಪೋಷಕರು ಆಗಮಿಸಿ ಆಕೆಯನ್ನು ತವರಿಗೆ ಕರೆದೊಯ್ದಿದ್ದಾರೆ, ಕಲಾವತಿ ಅವರ ಅಕೌಂಟ್ ನಲ್ಲಿ ಅನಿವಾಸಿ ಭಾರತೀಯರು ನೀಡಿದ 1 ಕೋಟಿ ರು ದೇಣಿಗೆ, ರಾಜ್ಯ ಸರ್ಕಾರದ 25 ಲಕ್ಷ ಪರಿಹಾರ ಹಣ, ರಿಲಾಯನ್ಸ್ ಗ್ರೂಪ್ ನ 25 ಲಕ್ಷ, ಇನ್ಫೋಸಿಸ್ ಫೌಂಡೇಶನ್ ನಿಂದ 10 ಲಕ್ಷ, ಸಚಿವ ಜಮೀರ್ ಅಹ್ಮದ್ 10 ಲಕ್ಷ , ಅಳ್ವಾ ಇನ್ಸ್ ಸ್ಟಿಟ್ಯೂಟ್ 10 ಲಕ್ಷ ಹಣ ನೀಡಿದೆ, ಇದರ ಜೊತೆಗೆ ಸುಮಲತಾ ಅಂಬರೀಷ್ ಅರ್ಧ ಎಕರೆ ಕೃಷಿ ಭೂಮಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com