ಕಾದಂಬರಿಕಾರ ಶೇಷನಾರಾಯಣ ನಿಧನ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಸಿದ್ಧ ಕತೆಗಾರ ಹಾಗೂ ಕಾದಂಬರಿಕಾರ ಶೇಷನಾರಾಯಣ ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ಶೇಷನಾರಾಯಣ
ಶೇಷನಾರಾಯಣ
ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಸಿದ್ಧ ಕತೆಗಾರ ಹಾಗೂ ಕಾದಂಬರಿಕಾರ ಶೇಷನಾರಾಯಣ ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
92 ವರ್ಷದ ಶೇಷನಾರಾಯಣ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 6.30ಕ್ಕೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಶೇಷನಾರಾಯಣ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಶೇಷನಾರಾಯಣ ಅವರು ಹುಟ್ಟಿದ್ದು ಕೊಯಮತ್ತೂರು ಜಿಲ್ಲೆಯ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯದಲ್ಲಿ. ತಂದೆ ಬಿ.ವಿ. ಸುಬ್ರಹ್ಮಣ್ಯ, ತಾಯಿ ಕಾವೇರಮ್ಮ. ಓದಿದ್ದು ನಾಲ್ಕನೆಯ ತರಗತಿವರೆಗೆ. ಶಾಲಾ ಕಾಲೇಜು ಸೇರಿ ಅಲ್ಲಿನ ಜೀವನವನ್ನು ಅನುಭವಿಸಬೇಕಿದ್ದ ದಿನಗಳಲ್ಲಿ ಕೆಲಸಕ್ಕಾಗಿ ಅಲೆದು, ಪಡೆದದ್ದು ಇಡೀ ಭಾರತ ದರ್ಶನ. 
ಶೇಷನಾರಾಯಣ ಅವರ ಕಥಾ ಸಂಕಲನಗಳು
ಸೀಳುನಾಯಿ, ಮೊಲ್ಲೆ ಮಲ್ಲಿಗೆ(ಬೆಂಗಳೂರು ವಿ.ವಿ.ದ ಪಿಯುಸಿ ಪಠ್ಯ) ಕುಮುದ, ಅಹಲ್ಯೆ ಕಲ್ಲಾಗಲಿಲ್ಲ, ಕೃಷ್ಣನ ಬಲಗಾಲು, ಶಕುನಿಮಾವ. 
ಕಾದಂಬರಿಗಳು
ಮೂಲನಕ್ಷತ್ರ, ಕಪಿಲೆ, ಪದ್ಮರಂಗು, ನೊರೆ, ಎರಡು ಉಂಗುರ, ಬೆಳಗಾಯಿತು, ಸೌಮ್ಯ ಮುಂತಾದುವು.
ನಾಟಕ, ಮಕ್ಕಳ ಸಾಹಿತ್ಯ, ಜೀವನಚರಿತ್ರೆಗಳು. ತಮಿಳಿನಿಂದ ಕನ್ನಡ-ಕನ್ನಡದಿಂದ ತಮಿಳಿಗೆ ಅನುವಾದಿಸಿದ್ದಾರೆ. ಅವರ ಒಟ್ಟು ೪೦ ಕೃತಿಗಳು ಪ್ರಕಟವಾಗಿವೆ. ಎರಡು ರಾಜ್ಯಗಳ ನೀರಿನ ಸಮಸ್ಯೆಯ ಮೇಲೆ ಬರೆದ ಸಂಶೋಧನಾತ್ಮಕ ಕೃತಿ ‘ಕಾವೇರಿ ಒಂದು ಚಿಮ್ಮು, ಒಂದು ಹೊರಳು’, ‘ನಮ್ಮ ನದಿಗಳು ಮತ್ತು ಸಮಸ್ಯೆಗಳು.’
ಶೇಷನಾರಾಯಣ ಅವರಿಗೆ ಸಂದ ಪ್ರಶಸ್ತಿಗಳು
ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯಿಂದ ಬಹುಮಾನ, ಕನ್ನಡ ಪ್ರಕಾಶಕರ ಮತ್ತು ಬರಹಗಾರರ ಸಂಸ್ಥೆಯಿಂದ ಸನ್ಮಾನ, ರೈತ ಸಂಘದಿಂದ ಸನ್ಮಾನ, ತಮಿಳುನಾಡು ಸರಕಾರದಿಂದ ಕುರಳ್‌ಪೀಠ ಪ್ರಶಸ್ತಿ, ಇತ್ತೀಚಿನ ಪ್ರತಿಷ್ಠಿತ ಅನಕೃ ಪ್ರತಿಷ್ಠಾನ ಪ್ರಶಸ್ತಿ ಮುಂತಾದುವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com