ಭಾರೀ ಮಳೆ, ಭೂಕುಸಿತ: ಆಗಸ್ಟ್ 12ರವರೆಗೆ ಶಿರಾಡಿ ಘಾಟ್‌ ಬಂದ್

ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಇತರೆ ಕಡೆ ಮಳೆ ಅಭ೯ಟ ಹೆಚ್ಚಾಗಿ ಗುಡ್ಡೆ ಕುಸಿತ, ಮರ , ವಿದ್ಯುತ್ ಕಂಬ ಉರುಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿರಾಡಿಘಾಟ್ ನಲ್ಲಿ....
ಶಿರಾಡಿ  ಘಾಟ್
ಶಿರಾಡಿ ಘಾಟ್

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಇತರೆ ಕಡೆ ಮಳೆ ಅಭ೯ಟ ಹೆಚ್ಚಾಗಿ ಗುಡ್ಡೆ ಕುಸಿತ, ಮರ , ವಿದ್ಯುತ್ ಕಂಬ ಉರುಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಇಂದು ಆದೇಶ ಹೊರಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಾಗ೯ದಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ, ತುತು೯ ಸಮಯದಲ್ಲಿ ಮಾತ್ರ ಲಘು ವಾಹನಗಳಿಗೆ ಅವಕಾಶ ನೀಡಲಾಗುವುದು ಎಂದರು.

ಹಾಸನ ಜಿಲ್ಲೆಯಲ್ಲಿ ‌ಮಳೆ‌ ಮುಂದುವರಿದಿರುವುದರಿಂದ ಜಿಲ್ಲೆಯ‌ 6 ತಾಲ್ಲೂಕುಗಳ ಶಾಲಾ ‌ಕಾಲೇಜುಗಳಿಗೆ ನಾಳೆಯೂ ರಜೆ‌ ನೀಡಲಾಗಿದೆ ಎಂದು ಅವರು ತಿಳಿಸಿದರು.]

ಶುಕ್ರವಾರ ದಿಂಡ ಆ.೧೨ರವರೆಗೆ ಸಂಜೆ ಏಳರಿಂದ ಮುಂಜಾನೆ ಏಲರವರೆಗೆ ಅಗತ್ಯ ವಸ್ತುಗಳ ಕಾಯ್ದೆಯಡಿ ಬರುವ ಸಾಮಗ್ರಿಗಳ ವಾಹನ, ಷರತ್ತು ಬದ್ದ ಸಾರ್ವಜನಿಕ ಬಸ್ ಸಂಚಾರ ಹೊರತು ಇತರೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಈ ಮಾರ್ಗವಾಗಿ ಸಂಚರಿಸುವ ವಾಹನ ಚಾಲಕರು ಔಷದಿ, ಪ್ರಥಮ ಚಿಕಿತ್ಸೆ ಪಕರಣಗಳು,ಬೇಕಾದಷ್ಟು ಆಹಾರ ಸಾಮಗ್ರಿ, ಕುಡಿಯುವ ನೀರು, ವಾಹನ ಪರವಾನಗಿ ದಾಖಲಾತಿ ಇನ್ನೂ ಮೊದಲಾದವನ್ನು ಕಡ್ಡಾಯವಾಗಿ ಇರಿಸಿಕೊಳ್ಲತಕ್ಕದ್ದು. ಹಾಗೆಯೇ ತಪಾಸಣಾಧಿಕಾರಿಗಳಿಗೆ ತಪಾಸಣೆ ವೇಳೆ ದಾಖಲಾತಿಗಳನ್ನು ಕಡ್ಡಾಯ ಪರಿಶೀಲನೆಗೆ ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ.

ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್

ಆ. ೧೧ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಗೋಷಣೆ ಮಾಡಿ ಜಿಲ್ಲಾಧಿಕಾರಿ ಸಸಿಕಾಂತ್ ಸೇಂಥಿಲ್ ಆದೇಶಿಸಿದ್ದಾರೆ. ಜಿಲ್ಲೆಯಾದ್ಯಂತ ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಕಾರಣ ಮುಂದಿನ ನಲವತ್ತೆಂಟು ಗಂಟೆಗಳ ಕಾಲ ರೆಡ್ ಅಲರ್ಟ್ ಹಾಕಲಾಗಿದೆ.

ಮೀನುಗಾರರು ಸಮುದ್ರಕ್ಕಿಳಿಯುವಂತಿಲ್ಲ, ಶಿರಾಡಿ, ಚಾರ್ಮಾಡಿ ಘಾಟ್ ಬಂದ್ ಆಗಿದ್ದು ಸಂಪಾಜೆ ಗಾಟ್ ನಲ್ಲಿ ಸಂಚಾರಕ್ಕೆ ಅಡ್ಡಿ ಇಲ್ಲವೆಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com