ಅರುಣ್ ಜೇಟ್ಲಿ ಮತ್ತು ಕರ್ನಾಟಕ ರಾಜ್ಯಕ್ಕೂ ಅವಿನಾಭಾವ ಸಂಬಂಧ!

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕೇಂದ್ರದ  ಮಾಜಿ ಸಚಿವ ಅರುಣ್ ಜೇಟ್ಲಿ ಅವರು ಬಹಳವಾಗಿ ಶ್ರಮಿಸಿದವರು. ಒಂದು ರೀತಿ ರಾಜ್ಯದಲ್ಲಿ ಕಮಲ ಅರಳಲು  ಪ್ರತ್ಯಕ್ಷ, ಪರೋಕ್ಷ ಕಾರಣ ಎಂದರೂ ತಪ್ಪಲ್ಲ .
ಇನ್ವೆಸ್ಟ್ ಕರ್ನಾಟಕ-2016 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೇಟ್ಲಿ
ಇನ್ವೆಸ್ಟ್ ಕರ್ನಾಟಕ-2016 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೇಟ್ಲಿ

ಬೆಂಗಳೂರು:  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕೇಂದ್ರದ  ಮಾಜಿ ಸಚಿವ ಅರುಣ್ ಜೇಟ್ಲಿ ಅವರು ಬಹಳವಾಗಿ ಶ್ರಮಿಸಿದವರು. ಒಂದು ರೀತಿ ರಾಜ್ಯದಲ್ಲಿ ಕಮಲ ಅರಳಲು  ಪ್ರತ್ಯಕ್ಷ, ಪರೋಕ್ಷ ಕಾರಣ ಎಂದರೂ ತಪ್ಪಲ್ಲ .

ಕರ್ನಾಟಕದ ಚುನಾವಣಾ ಉಸ್ತುವಾರಿಯಾಗಿ  ರಾಜ್ಯದ ನಾಯಕರಾದ  ಅನಂತಕುಮಾರ್  ಧನಂಜಕುಮಾರ್ ಬಿ.ಎಸ್. ಯಡಿಯೂರಪ್ಪ,  ಡಿ. ವಿ. ಸದಾನಂದ ಗೌಡ ಮೊದಲಾದ ನಾಯಕರ ಜೊತೆ ಒಡನಾಟ ಇಟ್ಟುಕೊಂಡು ಪಕ್ಷದ ಸಂಘಟನೆಯಲ್ಲಿ  ಹೆಚ್ಚು ಕಾಳಜಿ  ತೋರಿದವru  ಎಂಬುದಕ್ಕಿಂತ ಚಾಣಕ್ಯ  ತಂತ್ರ  ಹೆಣೆಯುವ ಮೂಲಕ ಅನಂತ ಕುಮಾರ್ ಬಿಜೆಪಿ  ಅಧ್ಯಕ್ಷ ರಾಗಿದ್ದ ಸಮಯದಲ್ಲಿ ಬಿಜೆಪಿ 79 ಸ್ಥಾನ ಪಡೆಯಲು ತಮ್ಮದೇ ಕೊಡುಗೆ ಕೊಟ್ಟಿದ್ದರು. 

ಇದರ ನಂತರ ಮುಂದೆ ಬಿಜೆಪಿ ಜೆಡಿಎಸ್ ಜೊತೆ ಸೇರಿ ಅಧಿಕಾರ  ಹಿಡಿಯಲು ಇದು ನೆರವಾಗಿತ್ತು  ಇದರ ನಂತರ  ಸದಾನಂದ ಗೌಡ  ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅವರ ನಾಯಕತ್ವದಲ್ಲಿ ಪಕ್ಷ ಚುನಾವಣೆಗೆ ಹೋದಾಗಲೂ  ಬಿಜೆಪಿ 105 ಸ್ಥಾನ ಗೆಲ್ಲಲು ಬೇಕಾದ ನೆರವಿನ ಸೂತ್ರ ಸಿದ್ದಪಡಿಸಿಕೊಡಲು ಸಹಾಯ ಮಾರ್ಗದರ್ಶನ ಮಾಡಿದ್ದರು. 

ಮುಂದೆ ಯುಡಿಯೂರಪ್ಪ ಸರಕಾರವನ್ನುಅಭದ್ರ ಗೊಳಿಸಲು ಮಾಜಿ ಪ್ರಧಾನಿ  ದೇವೇಗೌಡರು ಆಗಿನ ರಾಜ್ಯಪಾಲರಾಗಿದ್ದ  ಹಂಸರಾಜ್ ಭಾರದ್ವಾಜ್  ಅವರನ್ನು ಮತ್ತು ರಾಜಭವನವನ್ನು ಉಪಯೋಗ ಮಾಡಿಕೊಂಡು  ವಕೀಲರಾದ ಸಿರಾಜಿನ್,  ಬಾಷಾ ಅವರನ್ನು ಎತ್ತಿಕಟ್ಟಿ ಯತ್ನಿಸಿದಾಗಲೂ  ಅದನ್ನು ತಡೆಯಲು ಮೇಲಿಂದ ಮೇಲೆ ಜೇಟ್ಲಿ ಬೆಂಗಳೂರಿಗೆ ಬಂದು  ತಡೆಗೋಡೆಯಾಗಿ ನಿಂತವರು. 

ಸರಕಾರ  ಅಧಿಕಾರಕ್ಕೆ ತರಲು ಪ್ರಯತ್ನ ಮಾಡುವುದರ ಜೊತೆಗೆ ಸಿಕ್ಕಿದ  ಅಧಿಕಾರ  ಉಳಿಸಿಕೊಳ್ಳಲೂ ಸಹ ನಿರಂತರ ಪ್ರಯತ್ನ ಮಾಡಿದ್ದರು . ಹೀಗಾಗಿ  ಅವರಿಗೂ ಕರ್ನಾಟಕಕ್ಕೂ  ಬಹಳ ನಿಕಟವಾದ ಸಂಬಂಧವಿತ್ತು , ಒಡನಾಟವಿತ್ತು. ಅವಿನಾಭಾವ ಸಂಬಂಧವಿತ್ತು. 

ರಾಜಕಾರಿಣಿಗಳನ್ನು ಹೊರತು ಪಡಿಸಿದರೆ  ಅವರು ಹೆಚ್ಚಾಗಿ ರಾಮಾಜೋಯಿಸ್ ಮತ್ತು ಸುಪ್ರಿಂ ಕೋರ್ಟಿನ ನಿವೃತ್ತ  ಮುಖ್ಯ ನ್ಯಾಯಮೂರ್ತಿ ಎಂ. ಎನ್ ವೆಂಕಟಾಚಲಯ್ಯ ಅವರ ಜೊತೆ ನಿರಂತರ ಒಡನಾಡವಿಟ್ಟುಕೊಂಡು ಅವರ ಜೊತೆ ಬಹಳ, ಗಹನ ಸಮಾಲೋಚನೆ ಮಾಡುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com