ಬೆಂಗಳೂರು: ಪ್ರೇಮವೈಫಲ್ಯದ ಸೇಡು, ಯುವತಿಯ ಸ್ಕೂಟರ್ ಗೆ ಬೆಂಕಿ ಇಟ್ಟ ಪಾಗಲ್ ಪ್ರೇಮಿ ಅರೆಸ್ಟ್!

ಪ್ರೀತಿಸುತ್ತಿದ್ದ ಗೆಳತಿ ಪ್ರೇಮವನ್ನು ನಿರಾಕರಿಸಿದ್ದಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಯುವತಿಯ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದಲ್ಲದೆ ಇತರೆ ಮೂರು ದ್ವಿಚಕ್ರವಾಹನಗಳಿಗೆ ಸಹ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರೀತಿಸುತ್ತಿದ್ದ ಗೆಳತಿ ಪ್ರೇಮವನ್ನು ನಿರಾಕರಿಸಿದ್ದಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಯುವತಿಯ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದಲ್ಲದೆ ಇತರೆ ಮೂರು ದ್ವಿಚಕ್ರವಾಹನಗಳಿಗೆ ಸಹ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ನಡೆದಿದೆ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಮದುವೆಯಾಗಲೂ ನಿರ್ಧರಿಸಿದ್ದರು. ಆದರೆ ಯುವತಿಗೆ ತನ್ನ ಗೆಳೆಯ "ಕೆಟ್ಟ ಸಹವಾಸಕ್ಕೆ" ಬಿದ್ದಿದ್ದಾನೆಂದು ತಿಳಿದಿದೆ. ಅಲ್ಲದೆ ಆತನಿಗೆ ಬೇರೆ ಯುವತಿಯೊಡನೆ ಸಂಪರ್ಕವಿದೆ ಎಂದು ಗೊತ್ತಾಗಿದ್ದು ಆಕೆ ಅವನಿಂದ ದೂರವಿರಲು ಬಯಸಿದ್ದಳು.

ಸಿವಿ ರಾಮನ್ ನಗರದ ಪೇಯಿಂಗ್ ಗೆಸ್ಟ್ (ಪಿಜಿ) ನಲ್ಲಿ ಈ ಪ್ರಕರಣ ನಡೆದಿದ್ದು ಪ್ರೇಯಸಿಯ ವಿರುದ್ಧ ಸೇಡು ತೀರಿಸಿಕೊಳ್ಲಲು ಯುವಕ ತನ್ನ ಗೆಳೆಯನೊಡನೆ ಸೇರಿ ವಳ ಸ್ಕೂಟರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದನು. ಬೆಂಕಿಯು ಇತರ ಮೂರು ಸ್ಕೂಟರ್‌ ಗಳಿಗೆ ಸಹ ಹರಡಿದೆ.ಈ ಸಂಬಂಧ ಸಿ.ವಿ.ರಾಮನ್ ನಗರದ ಎಸ್‌ಜಿ ಪಾಲ್ಯದಲ್ಲಿರುವ ಪಿಜಿ ನಿವಾಸಿ ಪುಷ್ಪಾ (ಹೆಸರು ಬದಲಾಯಿಸಲಾಗಿದೆ) (26) ತನ್ನ ಮಾಜಿ ಗೆಳೆಯ ಕೇತನ್ ಕುಮಾರ್ (26) ಮತ್ತು ಆತನ ಸ್ನೇಹಿತ ಶಿವಶಂಕರ್ (31) ವಿರುದ್ಧ ದೂರು ದಾಖಲಿಸಿದ್ದಾರೆ.

ಬೈಯಪ್ಪನಹಳ್ಳಿ ಪೋಲೀಸರಿಗೆ ಸಲ್ಲಿಕೆಯಾದ ದೂರಿನ ಅನುಸಾರ ಅವಳು ಮತ್ತು ಕೇಥನ್ ಒಂದೇ ಆಟೋ ಕನ್ಸಲ್ಟೆನ್ಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ನಾಲ್ಕು ವರ್ಷಗಳಿಂದ ಪರಸ್ಪರಪರಿಚಯವಿದ್ದವರು.ಮೂರು ವರ್ಷಗಳ ಹಿಂದೆ, ಅವರು ಪ್ರೀತಿಸಲು ಪ್ರಾರಂಭಿಸಿದ್ದರು.ಹಾಗೂ ಮುಂದೆ ಪರಸ್ಪರ ಒಪ್ಪಿಗೆಯೊಡನೆ ವಿವಾಹವಾಗಲು ಸಹ ಅನುಮತಿಸಿದ್ದರು. ಆದರೆ ಕೆಲವು ತಿಂಗಳ ಹಿಂದೆ, ಕೇತನ್ ಆಲ್ಕೊಹಾಲ್ ಸೇವನೆ ಮಾಡುತ್ತಾನೆಂದೂ ಆತನಿಗೆ ಇನ್ನೋರ್ವ ಯುವತಿಯೊಡನೆ ಸಂಪರ್ಕವಿದೆ ಎಂದೂ ತಿಳಿದು ಬಂದಿದೆ. ಆದ್ದರಿಂದ, ಕಳೆದ ಎರಡು ತಿಂಗಳುಗಳಿಂದ ಅವಳು ಅವನಿಂದ ದೂರವಿರಲು ಪ್ರಯತ್ನಿಸಿದ್ದಾಳೆ.ಶುಕ್ರವಾರ ರಾತ್ರಿ ಪುಷ್ಪಾ ತನ್ನ ಸ್ಕೂಟರ್ ಅನ್ನು ತನ್ನ ಪಿಜಿಯ ಕಾಂಪೌಂಡ್‌ನಲ್ಲಿ ನಿಲ್ಲಿಸಿ ತನ್ನ ಕೋಣೆಗೆ ತೆರಳಿದ್ದಳು. ಆದರೆ ಮರುದಿನ ಶನಿವಾರ ಮುಂಜಾನೆ ಆಕೆಯ ಗೆಳತಿಯರು ಅವಳನ್ನು ಎಚ್ಚರಿಸಿ ಆಕೆಯ ಸ್ಕೂಟರ್ ಮತ್ತು ಇತರ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿರುವುದನ್ನು ಗಮನಕ್ಕೆ ತಂದಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕೇಥನ್ ಮತ್ತು ಶಿವಶಂಕರ್ ಪಿಜಿ ಆವರಣಕ್ಕೆ ಪ್ರವೇಶಿಸಿ, ಅವರ ಸ್ಕೂಟರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಪಕ್ಕದ ಮೂರು ಸ್ಕೂಟರ್‌ಗಳಿ ಸಹ ಬೆಂಕಿ ತಗುಲಿ ಹಾನಿಯಾಗಿದೆ. "ಆಕೆಯ ದೂರಿನ ಆಧಾರದ ಮೇಲೆ ನಾವು ಕೇಥನ್ ಮತ್ತು ಶಿವಶಂಕರ್ ಅವರನ್ನು ಬಂಧಿಸಿದ್ದೇವೆ" ಎಂದು ತನಿಖಾ ಅಧಿಕಾರಿ ತಿಳಿಸಿದ್ದಾರೆ. "ಪ್ರೀತಿಸಿದವಳು ಬೇರಪಟ್ಟ ನಂತರ ಆದ ಬ್ರೇಕ ಅಪ್ ಗೆ ಸೇಡು ತೀರಿಸಿಕೊಳ್ಳಲು ಕೇಥನ್ ಮುಂದಾಗಿದ್ದನು. ಶಿವಶಂಕರ್ ಅವರೊಂದಿಗೆ ಕೈಜೋಡಿಸಿದನು. ಪಿಜಿಯಲ್ಲಿ ಯಾವುದೇ ಭದ್ರತೆ ಇರಲಿಲ್ಲ, ಆದ್ದರಿಂದ ಅವರಿಗೆ ಇದು ಸುಲಭವಾಗಿದೆ, ”ಎಂದು ಅಧಿಕಾರಿ ಹೇಳಿದರು.

ಇದಕ್ಕೆ ಹಿಂದಿನ ರಾತ್ರಿ ಕೂಡ ಇವರಿಬ್ಬರು ಪುಷ್ಪಾ ಅವರ ಸ್ಕೂಟರ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಅವರು ಪೆಟ್ರೋಲ್ ಸುರಿದರು ಆದರೆ ಬೆಂಕಿ ಇಡುವುದಕ್ಕೆ ಮುನ್ನ ಮಾರ್ಗದಲ್ಲಿ ಯಾರೋ ಹಾದು ಹೋದಂತಾಗಿ ಅವರು ತಮ್ಮ ಕಾರ್ಯವನ್ನು ಅಲ್ಲಿಗೇ ಮೊಟಕುಗೊಳಿಸಿದ್ದರು. ಮತ್ತು ಸ್ಥಳದಿಂದ ತಪ್ಪಿಸಿಕೊಂಡರು.ಘಟನೆಯ ನಂತರ, ಪುಷ್ಪಾ ಮತ್ತು ಕೇಥನ್ ಉದ್ಯೋಗ ಕಳೆದುಕೊಂಡಿದ್ದಾರೆ. "ಪಿಜಿ ಮಾಲೀಕರು ಇತರ ಮೂರು ವಾಹನಗಳ ವೆಚ್ಚವನ್ನು ಸಹ ಭರಿಸಬೇಕೆಂದು ಪುಷ್ಪಾ ಅವರನ್ನು ಕೇಳಿಕೊಂಡಿದ್ದಾರೆ, ಆದರೆ ಆಕೆ ತಪ್ಪಿಲ್ಲದ ಕಾರಣ ಆರೋಪಿ ಜೋಡಿಯಿಂದ ಅದನ್ನು ಸಂಗ್ರಹಿಸಲು ಅವಳು ಮಾಲೀಕರಿಗೆ ಹೇಳಿದಳು" ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com