ಬಾಗಿನದಲ್ಲೂ ಮಲತಾಯಿ ಧೋರಣೆ: ಕೆಆರ್ ಎಸ್ ಗೆ ಮಾತ್ರ ಬಾಗಿನ, ಆಲಮಟ್ಟಿಗೆ ಏಕಿಲ್ಲ?

ಇತ್ತೀಚೆಗೆ ಸುರಿದ ಮಳೆಯಿಂದ ಭರ್ತಿಗೊಂಡಿದ್ದ ಕೆಆರ್ ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ ಬಾಗಿನ ಅರ್ಪಿಸಿದ್ದಾರೆ, ಆದರೆ  ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ನೀಡದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೆಆರ್ ಎಸ್ ಗೆ ಬಾಗಿನ ಅರ್ಪಣೆ
ಕೆಆರ್ ಎಸ್ ಗೆ ಬಾಗಿನ ಅರ್ಪಣೆ

ವಿಜಯಪುರ:  ಇತ್ತೀಚೆಗೆ ಸುರಿದ ಮಳೆಯಿಂದ ಭರ್ತಿಗೊಂಡಿದ್ದ ಕೆಆರ್ ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ ಬಾಗಿನ ಅರ್ಪಿಸಿದ್ದಾರೆ, ಆದರೆ  ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ನೀಡದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬಾಗಲಕೋಟೆಯಲ್ಲಿರುವ ಆಲಮಟ್ಟಿ, ರಾಜ್ಯದ ಅತಿ ದೊಡ್ಡ ಜಲಾಶಯ, ಮಳೆಯಿಂದಾಗಿ ಈ ಜಲಾಶಯ ಕೂಡ ತುಂಬಿ ತುಳುಕುತ್ತಿದೆ,.  ರಾಜ್ಯ ಸರ್ಕಾರ ಕೇವಲ ಕೆಆರ್ ಎಸ್ ಗೆ ಮಾತ್ರ ಬಾಗಿನ ಅರ್ಪಿಸಿದೆ. ಆಲಮಟ್ಟಿ ಜಲಾಶಯಕ್ಕೆ ಏಕಿಲ್ಲ ಎಂದು ಈ ಭಾಗದ ರೈತರು ಪ್ರಶ್ನಿಸಿದ್ದಾರೆ.

ಕೆಆರ್ ಎಸ್ ಗಿಂತ ಆಲಮಟ್ಟಿ ದೊಡ್ಡ ಜಲಾಶಯವಾಗಿದೆ, ಕೇವಲ ಬಿಜೆಪಿ ಸರ್ಕಾರ ಮಾತ್ರವಲ್ಲ, ಇದಕ್ಕೂ ಹಿಂದಿದ್ದ ಸರ್ಕಾರಗಳು ಕೂಡ ಇದೇ ರೀತಿ ತಾರತಮ್ಯ ಮಾಡಿಕೊಂಡು ಬಂದಿವೆ, ಬಹಳ ಹಿಂದಿನಿಂದಲೂ ಮಲತಾಯಿ ಧೋರಣೆ ನಡೆಯುತ್ತಿದೆ ಎಂದು ಕರ್ನಾಟರ ರೈತ ಸಂಘದ ಕಾರ್ಯದರ್ಶಿ ಆರವಿಂದ್ ಕುಲಕರ್ಣಿ ಆರೋಪಿಸಿದ್ದಾರೆ. ಜೊತೆಗೆ ತುಂಗಭದ್ರಾ ಜಲಾಶಯ ಕೂಡ ತುಂಬಿದ್ದು, ಸರ್ಕಾರ ಇದನ್ನು ನಿರ್ಲಕ್ಷ್ಯಿಸಿದೆ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com