ಕಿಕ್ಕೇರಿ: ಪರಿಮಳ ಬೀರದ ಮೈಸೂರು ಮಲ್ಲಿಗೆ ಕವಿ ಮನೆ: ಸ್ಮಾರಕವಾಗಿ ಪರಿವರ್ತಿಸಲು ಒತ್ತಾಯ

ಇದು ಮೈಸೂರು ಮಲ್ಲಿಗೆ ಕವಿ ನರಸಿಂಹಸ್ವಾಮಿ ಹುಟ್ಟಿದ ಮನೆ (1915) ಅವರ ಬಾಲ್ಯ ಜೀವನವನ್ನು ಇಲ್ಲಿಯೇ ಕಳೆದಿದ್ದರು. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿರುವ ಈ ಮನೆಗೆ 115 ವರ್ಷಗಳ ಇತಿಹಾಸವಿದೆ. 
ಕವಿ. ಕೆ.ಎಸ್. ನರಸಿಂಹಸ್ವಾಮಿ ಅವರ ಮನೆ
ಕವಿ. ಕೆ.ಎಸ್. ನರಸಿಂಹಸ್ವಾಮಿ ಅವರ ಮನೆ

ಕಿಕ್ಕೇರಿ:  ಇದು ಮೈಸೂರು ಮಲ್ಲಿಗೆ ಕವಿ ನರಸಿಂಹಸ್ವಾಮಿ ಹುಟ್ಟಿದ ಮನೆ (1915) ಅವರ ಬಾಲ್ಯ ಜೀವನವನ್ನು ಇಲ್ಲಿಯೇ ಕಳೆದಿದ್ದರು. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿರುವ ಈ ಮನೆಗೆ 115 ವರ್ಷಗಳ ಇತಿಹಾಸವಿದೆ. 

ಪ್ರೇಮಕವಿ ಎಂದೇ ಹೆಸರಾಗಿದ್ದ ನರಸಿಂಹಸ್ವಾಮಿ ಅವರ ಮನೆಯನ್ನು ದುರಸ್ತಿಗೊಳಿಸಿ ಸ್ಮಾರಕವಾಗಿ ಪರಿವರ್ತಿಸಬೇಕೆಂದು ಲೇಖಕರು ಹಾಗೂ ಕವಿಯ ಅಭಿಮಾನಿಗಳು ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.

ನರಸಿಂಹ ಸ್ವಾಮಿ ಅವರ ಮೊದಲ ಕವನ ಸಂಗ್ರಹ ಮೈಸೂರು ಮಲ್ಲಿಗೆ 1942ರಲ್ಲಿ ಪ್ರಕಟಗೊಂಡು ಅಂದಿನಿಂದ 40 ಆವೃತ್ತಿಗಳನ್ನು ಕಂಡಿದೆ. ಅವರ ಕವಿತೆಗಳು ಪ್ರಸಿದ್ಧ ಮೈಸೂರು ಮಲ್ಲಿಗೆ ಹೂವಿನಂತೆ ಘಮಘಮಿಸುತ್ತವೆ. ನರಸಿಂಹಸ್ವಾಮಿ ಅವರ ಪೂರ್ವಜರ ಮನೆಯನ್ನು ಮೊದಲು ಸ್ಥಳೀಯ ವ್ಯಕ್ತಿಯೊಬ್ಬರು ಖರೀದಿಸಿ, ಅದನ್ನು  ಸ್ಥಳೀಯ ಗ್ರಾಮಸ್ಥರೊಬ್ಬರಿಗೆ ಅಲ್ಪ ಮೊತ್ತಕ್ಕೆ ಗುತ್ತಿಗೆಗೆ ನೀಡಿದ್ದಾರೆ.

ನರಸಿಂಹ ಸ್ವಾಮಿ ಅವರ ಈ ಮನೆಯನ್ನು ಪಡೆದು ದುರಸ್ತಿಗೊಳಿ, ಅದನ್ನು ಸ್ಮಾರಕವಾಗಿ ಪರಿವರ್ತಿಸುವುದು ರಾಜ್ಯಸರ್ಕಾರಕ್ಕೆ ಕಷ್ಟದ ವಿಷಯವೇನಲ್ಲಾ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ಮಾಜಿ ನಿರ್ದೇಶಕ ಹಾಗೂ ಖ್ಯಾತ ಗಾಯಕ ವೈ. ಕೆ. ಮುದ್ದುಕೃಷ್ಣ. 

ನರಸಿಂಹಸ್ವಾಮಿ ಅವರ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಿ, ಅದರಲ್ಲಿ ಅವರು ಬಳಸುತ್ತಿದ್ದ ಪೆನ್, ಪ್ರಕಟಗೊಂಡು ಪುಸ್ತಕಗಳು, ಪ್ರಶಸ್ತಿಗಳು, ಬಟ್ಟೆ ಮತ್ತಿತರ ವಸ್ತುಗಳನ್ನು ಸಂರಕ್ಷಿಸಬಹುದಾಗಿದೆ. ಅಲ್ಲದೇ, ಇದು ಮೈಸೂರು ಮಲ್ಲಿಗೆ ಕವಿಗೆ ನೀಡಿದ್ದಂತಹ ಗೌರವವಾಗುತ್ತದೆ ಎಂದು ಅವರನ್ನು ಹೇಳುತ್ತಾರೆ. 

2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇಲ್ಲಿಗೆ ಭೇಟಿ ನೀಡಿದ್ದರು. ಕಳೆದ ವರ್ಷ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇಬ್ಬರು ಕೂಡಾ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸುವ ಭರವಸೆ ನೀಡಿದ್ದರು. ಆದರೆ, ಏನೂ ಆಗಲಿಲ್ಲ ಎಂದು ಸ್ಥಳೀಯ ನಿವಾಸಿ ಹಾಗೂ ವಕೀಲ ಕಾಳೇಗೌಡ ಅಸಮಾಧಾನ ವ್ಯಕ್ತಪಡಿಸುತ್ತಾರೆ. 

ಸಿದ್ದರಾಮಯ್ಯ ಅವಧಿಯಲ್ಲಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಸ್ಥಾಪನೆಯಾಗಿದೆ. ಎಂ. ಕೃಷ್ಣಪ್ಪ ಜಿಲ್ಲಾ ಉಸ್ತುವಾರಿಯಾಗಿದ್ದಾಗ ಕ್ಕಿಕ್ಕೇರಿ ಕೆರೆ ಅಭಿವೃದ್ದಿಗಾಗಿ 3 ಕೋಟಿ ರೂ. ಬಿಡುಗಡೆ ಮಾಡಿ ಎಲ್ಲಾ ರೀತಿಯ ಮಲ್ಲಿಗೆ ಬೆಳೆಯಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ನರಸಿಂಹ ಸ್ವಾಮಿ ಹುಟ್ಟಿದ ಮನೆಯನ್ನು ಅಭಿವೃದ್ದಿಗೊಳಿಸಲು ಗಮನ ನೀಡಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನರಸಿಂಹಸ್ವಾಮಿ ಅವರ ಮನೆಯನ್ನು ಸ್ಮಾರಕವಾಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಭರವಸೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com