ಬಳ್ಳಾರಿ: ಕಬ್ಬು ತುಂಬಿದ ಟ್ರಾಕ್ಟರ್ ಬೈಕ್ ಗೆ ಡಿಕ್ಕಿ, 4 ವರ್ಷದ ಮಗು, ಗಂಭೀರವಾಗಿ ಗಾಯಗೊಂಡಿದ್ದ ತಾಯಿಯೂ ಸಾವು!

ಕಬ್ಬು ಸಾಗಿಸುತಿದ್ದ ಟ್ರಾಕ್ಟರ್ ಬೈಕ್ ಗೆ ಡಿಕ್ಕಿಯಾದ ಪರಿಣಾಮ, ವರ್ಷದ ಮಗು ಸಾವನ್ನಪ್ಪಿದ್ದು ಬೈಕ್ ನಲ್ಲಿದ್ದ ದಂಪತಿಗಳಿಬ್ಬರು ಗಂಭೀರ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮಗುವಿನ ತಾಯಿ ಸಹ ಮೃತಪಟ್ಟಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ಎ.ಪಿ.ಎಂ.ಸಿ.ಯಾರ್ಡ್ ಬಳಿ ನಡೆದಿದೆ.
ಬಳ್ಳಾರಿ:  ಕಬ್ಬು ತುಂಬಿದ ಟ್ರಾಕ್ಟರ್ ಬೈಕ್ ಗೆ ಢಿಕ್ಕಿ, 4ರ ಮಗು ಸಾವು, ದಂಪತಿಗಳು ಗಂಭೀ
ಬಳ್ಳಾರಿ: ಕಬ್ಬು ತುಂಬಿದ ಟ್ರಾಕ್ಟರ್ ಬೈಕ್ ಗೆ ಢಿಕ್ಕಿ, 4ರ ಮಗು ಸಾವು, ದಂಪತಿಗಳು ಗಂಭೀ

ಹೊಸಪೇಟೆ: ಕಬ್ಬು ಸಾಗಿಸುತಿದ್ದ ಟ್ರಾಕ್ಟರ್ ಬೈಕ್ ಗೆ ಡಿಕ್ಕಿಯಾದ ಪರಿಣಾಮ, ವರ್ಷದ ಮಗು ಸಾವನ್ನಪ್ಪಿದ್ದು ಬೈಕ್ ನಲ್ಲಿದ್ದ ದಂಪತಿಗಳಿಬ್ಬರು ಗಂಭೀರ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮಗುವಿನ ತಾಯಿ ಸಹ ಮೃತಪಟ್ಟಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ಎ.ಪಿ.ಎಂ.ಸಿ.ಯಾರ್ಡ್ ಬಳಿ ನಡೆದಿದೆ.

ಮಾಗಳ ಗ್ರಾಮದ ಶಿಕ್ಷಕ ಅರವಿಂದ ಮತ್ತು ಅವರ ಪತ್ನಿ ಶ್ವೇತ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶ್ವೇತ ಮೃತಪಟ್ಟಿದ್ದಾರೆ. ಇನ್ನು ನಾಲ್ಕು ವರ್ಷದ ಮಗುವಿನ ಹೆಸರು ನಿರಂಜನ್ ಎಂದು ಗುರುತಿಸಲಾಗಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಜನಗಳು ಉದ್ರಿಕ್ತಗೊಂಡು ಕಬ್ಬು ತುಂಬಿದ್ದ ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ,ಅದಲ್ಲದೆ, ಘಟನೆ ನಡೆದು ನಲವತ್ತು ನಿಮಿಷಗಳಾದರೂ ಸ್ಥಳಕ್ಕೆ ಬಾರದ ಪೊಲೀಸರ ವಿರುದ್ದ ಮತ್ತು 108 ಅಂಬುಲೆನ್ಸ್ ಸಿಬ್ಬಂದಿಯ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ, 

ಉದ್ರಿಕ್ತರನ್ನ ಅಲ್ಲಿಂದ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರಮಾಡಿದ್ದು, ಪ್ರತ್ಯುತ್ತರವಾಗಿ ಜನಗಳು ಕೂಡ ಪೋಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಪೋಲಿಸರು ಮತ್ತು ಸ್ಥಳೀಯರ ಮದ್ಯ ಉಂಟಾದ ಘರ್ಷಣೆಯಿಂದ ಸ್ಥಳದಲ್ಲಿ ಕೆಲವೊತ್ತು ಬಿಗುವಿನ ವಾತವರಣ ನಿರ್ಮಾಣವಾಗಿದೆ, 

ಇನ್ನು ಜನಗಳು ಈ ರೀತಿ ಉದ್ರಿಕ್ತರಾಗಲು ಕಾರಣ,ಕಳೆದ ಒಂದು ವಾರದ ಹಿಂದೆ ಇದೇ ಸ್ಥಳದಲ್ಲಿ ನಿಂತಿದ್ದ ಲಾರಿಗೆ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಡಿಕ್ಕಿಯಾದ ಪರಿಣಾಮ ಲಾರಿ ರಿಪೇರಿ ಮಾಡುತ್ತಿದ್ದ ಮೆಕಾನಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದ, ಇದೀಗ ದಂಪತಿಗಳು ಸಾಗುತಿದ್ದ ಬೈಕ್ಗೆ ಟ್ರಾಕ್ಟರ್ ಡಿಕ್ಕಿಯಾದ ನಂತರ ಸ್ಥಳೀಯರ ಪಿತ್ತ ನೆತ್ತಿಗೇರಿ ಪೋಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ, 

ಸದ್ಯಕ್ಕೆ ಘಟನೆಯಲ್ಲಿ ಗಾಯಗೊಂಡಿರುವ ದಂಪತಿಗಳಿಬ್ಬರು ಹೂವಿನಹಡಗಲಿ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಮತ್ತೊಂದು ಕಡೆ ಅದೇ ಆಸ್ಪತ್ರೆಯ ಶವಾಗಾರದಲ್ಲಿ ಅವರ ನಾಲ್ಕು ವರ್ಷದ ಮಗು ನಿರಂಜನ ಶವ ಇಡಲಾಗಿದೆ, ಇನ್ನು ಈ ಅಪಘಾತಕ್ಕೆ ಕಾರಣವಾದ ಟ್ರಾಕ್ಟರ್ ಚಾಲಕ ಅಲ್ಲಿಂದ ಪರಾರಿಯಾಗಿದ್ದು ಹೂವಿನಹಡಗಲಿ ಪೊಲೀಸರು ಚಾಲಕನಿಗೆ ಶೋದ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com