ಅಮೆಜಾನ್ ಗೆ ವಂಚನೆ: ಮೈಸೂರು ಮಹಿಳೆ ಬಂಧನ

ಇ ಕಾಮರ್ಸ್ ದೈತ್ಯ ಅಮೆಜಾನ್ ಗೆ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಇ ಕಾಮರ್ಸ್ ದೈತ್ಯ ಅಮೆಜಾನ್ ಗೆ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಮೈಸೂರಿನ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 

ಮೈಸೂರಿನ ಸುಮಾ ಅಲಿಯಾಸ್ ಅಶ್ವಿನಿ ಎಂಬಾಕೆ ಅಮೇಜಾನ್ ನಿಂದ ಹಲವು ವಸ್ತುಗಳನ್ನು ಖರೀದಿಸಿ ಕೆಲವು ದಿನಗಳ  ನಂತರ ಪ್ರಾಡಕ್ಟ್ ಗಳು ಸರಿಯಿಲ್ಲವೆಂದು ದೂರಿದ್ದಾರೆ. 48 ಐಟಂಳನ್ನು ಖರೀದಿಸಿ, ಸುಮಾರು 1,17,108 ರು ವಂಚಿಸಿದ್ದಾಳೆ.

ಆರೋಪಿಯು ಇತ್ತೀಚೆಗೆ ಟ್ರೋಸರ್ ಒಂದನ್ನು ಆರ್ಡರ್ ಮಾಡಿದ್ದಳು,  ಮತ್ತೆ ಅದು ಸರಿಯಿಲ್ಲವೆಂದು ವಾಪಸ್ ಮಾಡಿದ್ದಳು. ಆಕ ವಾಪಸ್ ಮಾಡುವಾಗ ತಾನು ಬಳಸಿದ್ದ ಹಳೇಯ ಟ್ರೋಸ್ರ್ ನೀಡಿದ್ದಳು. ಹೊಸ ಟ್ರೋಸರ್ ತನ್ನ ಬಳಿಯೇ ಇಟ್ಟುಕೊಂಡಿದ್ಧು. ಅಮೆಜಾನ್ ಡೆಲಿವರ್ ಮಾಡಿದ್ದ ವಸ್ತುವಿನ ಟ್ಯಾಗ್ ಅನ್ನು ಅದಕ್ಕೆ ಹಾಕಿ ವಾಪಸ್ ನೀಡಿದ್ದಳು.

ಈ ಸಂಬಂಧ ಅಮೆಜಾನ್ ಸಿಬ್ಬಂದಿಗೆ ಅನುಮಾನ ಬಂದು ಪರಿಶೀಲಿಸಿದಾಗ ಎಲ್ಲವೂ ಬಯಲಾಗಿದೆ. ಈಕೆ ವಿವಿಧ ಹೆಸರು ಮತ್ತು ಅಡ್ರೆಸ್ ಬಳಸಿ ಸುಮಾರು 48ವಂಚನೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಎಫ್ ಐ ಆರ್ ದಾಖಲಿಸಿರುವ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com