ಮುತ್ತೂಟ್ ಫೈನಾನ್ಸ್ ಕಳ್ಳತನ: ತನಿಖೆಗೆ ವಿಶೇಷ ತಂಡ ರಚನೆ 

ಮುತ್ತೂಟ್​​ನಲ್ಲಿ ನೀವು ಚಿನ್ನ, ಆಭರಣ ಇಟ್ಟಿದ್ದೀರಾ..? ಹಾಗಾದ್ರೆ ಈ ಕ್ಷಣವೇ ನಿಮ್ಮ ಎಲ್ಲಾ ಕೆಲಸ-ಕಾರ್ಯ ಬಿಟ್ಟು ಮೊದಲು ಮುತ್ತೂಟ್​ಗೆ ಹೋಗಿ ನಿಮ್ಮ ಚಿನ್ನಾಭರಣಗಳನ್ನೆಲ್ಲಾ ತಕ್ಷಣವೇ ವಾಪಸ್ ಪಡೆಯಿರಿ. ಮುತ್ತೂಟ್​​ನಲ್ಲಿ ಯಾವುದು ಸೇಫ್ ಅಲ್ಲವೇ ಅಲ್ಲಾ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ಮುತ್ತೂಟ್​​ನಲ್ಲಿ ನೀವು ಚಿನ್ನ, ಆಭರಣ ಇಟ್ಟಿದ್ದೀರಾ..? ಹಾಗಾದ್ರೆ ಈ ಕ್ಷಣವೇ ನಿಮ್ಮ ಎಲ್ಲಾ ಕೆಲಸ-ಕಾರ್ಯ ಬಿಟ್ಟು ಮೊದಲು ಮುತ್ತೂಟ್​ಗೆ ಹೋಗಿ ನಿಮ್ಮ ಚಿನ್ನಾಭರಣಗಳನ್ನೆಲ್ಲಾ ತಕ್ಷಣವೇ ವಾಪಸ್ ಪಡೆಯಿರಿ. ಮುತ್ತೂಟ್​​ನಲ್ಲಿ ಯಾವುದು ಸೇಫ್ ಅಲ್ಲವೇ ಅಲ್ಲಾ. 

ನಗರದ ವ್ಯಾಪ್ತಿಯ ಮುತ್ತೂಟ್ ಫೈನಾನ್ಸ್ ಕಚೇರಿಯ ಗೋಡೆ ಕೊರೆದ ದುಷ್ಕರ್ಮಿಗಳು, ಸುಮಾರು 70 ಕೆಜಿ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಇಲ್ಲಿನ ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೋಮವಾರ ರಾತ್ರಿ ಇಲ್ಲಿನ ಪುಲಿಕೇಶಿ ನಗರದ ಮೇಲ್ಸೇತುವೆ ಸಮೀಪದಲ್ಲಿರುವ ಮುತ್ತೂಟ್ ಫೈನಾನ್ಸ್ ಶಾಖೆಯ ಕಚೇರಿ ಗೋಡೆ ಕೊರೆದು ನುಗ್ಗಿರುವ ದುಷ್ಕರ್ಮಿಗಳು, ಕಚೇರಿಯೊಳಗಿದ್ದ 70 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ಬೆಳಗ್ಗೆ ಚಿನ್ನಾಭರಣ ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈ ಘಟನೆಗೆ ಮುತ್ತೂಟ್ ಫೈನಾನ್ಸ್ ನಿರ್ಲಕ್ಷವೇ ಕಾರಣವಾಗಿದೆ. ಘಟನೆ ನಡೆದ ವೇಳೆ, ಅಲ್ಲಿನ ಸ್ಥಳೀಯ ಸಿಬ್ಬಂದಿ ಇರಲಿಲ್ಲ. ಜತೆಗೆ, ಸಿಸಿಟಿವಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಹೇಳಿದರು. ಘಟನೆಯಲ್ಲಿ ನೇಪಾಳಿ ಗ್ಯಾಂಗ್ ಪಾತ್ರ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಕಚೇರಿಯ ಶೌಚಾಲಯವಿದ್ದ ಗೋಡೆ ಕೊರೆದು ಚಿನ್ನಾಭರಣ ದರೋಡೆ ಮಾಡಿದ್ದಾರೆ. ಅಲ್ಲದೆ, 16 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಈ ಸಂಬಂಧ ಭದ್ರತಾ ಸಿಬ್ಬಂದಿ ಅನ್ನು ವಶಕ್ಕೆ ಪಡೆದು, ತನಿಖೆ ಮುಂದುವರೆಸಲಾಗಿದೆ ಎಂದರು. ಜೊತೆಗೆ ವಿಶೇಷ ತನಿಖಾ ತಂಡ ರಚಿಸಿದ್ದು, ದೆಹಲಿ ಸೇರಿದಂತೆ ಹಲವು ರಾಜ್ಯಗಳಿಗೆ ತಂಡ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com