ಎತ್ತರದ ಪ್ರತಿಮೆಗಳ ಸ್ಥಾಪನೆಯದ್ದೇ ಮೇಲಾಟ: ಅರಿವಿಲ್ಲವೇಕೆ ನೀರು, ರಸ್ತೆಗಳಿಲ್ಲದೇ ನಾಗರಿಕರ ಸಂಕಟ?

ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿ ರಾಮನಗರ ಸದ್ಯ ಸುದ್ದಿಯಲ್ಲಿದೆ. ಅತಿ ಎತ್ತರದ ಪ್ರತಿಮೆ ನಿರ್ಮಾಣ ವಿಷಯದಿಂದಾಗಿ ರೇಷ್ಮೆನಗರಿ ಸುದ್ದಿಯಲ್ಲಿದೆ.
ಎತ್ತರದ ಪ್ರತಿಮೆಗಳ ಸ್ಥಾಪನೆಯದ್ದೇ ಮೇಲಾಟ:
ಎತ್ತರದ ಪ್ರತಿಮೆಗಳ ಸ್ಥಾಪನೆಯದ್ದೇ ಮೇಲಾಟ:

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿ ರಾಮನಗರ ಸದ್ಯ ಸುದ್ದಿಯಲ್ಲಿದೆ. ಅತಿ ಎತ್ತರದ ಪ್ರತಿಮೆ ನಿರ್ಮಾಣ ವಿಷಯದಿಂದಾಗಿ ರೇಷ್ಮೆನಗರಿ ಸುದ್ದಿಯಲ್ಲಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ತಮ್ಮ ಆಡಳಿತಾವಧಿಯಲ್ಲಿ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 111 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸುವುದಾಗಿ ಘೋಷಿಸಿದ್ದರು. ಅದಾದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿತು.

ಸದ್ಯ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್, ಕನಕಪುರದಲ್ಲಿ ಯೇಸು ಕ್ರಿಸ್ತನ ಅತಿ ದೊಡ್ಡ ಪ್ರತಿಮೆ ನಿರ್ಮಿಸಲು ಶಂಕು ಸ್ಥಾಪನೆ ನೆರವರೇಸಿದ್ದಾರೆ,  ಕನಕಪುರ ತಾಲೂಕಿನ ಹಾರೊಬೆಲೆ ಗ್ರಾಮದ ಕಪ್ಪತಗುಡ್ಡದಲ್ಲಿನ ಸುಮಾರು 10 ಎಕರೆ ಜಾಗದಲ್ಲಿ ದೇಶದಲ್ಲೇ ಅತಿ ಎತ್ತರದ ಕ್ರಿಸ್ತನ ಪ್ರತಿಮೆ ನಿರ್ಮಿಸುವುದಾಗಿ ಘೋಷಿಸಿದ್ದಾರೆ.

ಆದರೆ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪಿಸಲು ಶಿವಕುಮಾರ್ ಸರ್ಕಾರಿ ಜಮೀನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್, ಅಶೋಕ್ ಆರೋಪಿಸಿದ್ದಾರೆ, ಜೊತೆಗೆ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ್ದಾರೆ. ದರೆ ಪ್ರತಿಮೆ ಸ್ಥಾಪಿಸಲು ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದು ಸಂಬಂಧ ಪಟ್ಟ ಇಲಾಖೆ ಅದಕ್ಕೆ ಅನುಮತಿ ನೀಡಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

ಒಂದು ವೇಳೆ ಈ ಯೋಜನೆಗ ಸರ್ಕಾರ ಹಸಿರು ನಿಶಾನೆ ತೋರಿಸಿದರೇ ರಾಮನಗರದಲ್ಲಿ ನಿರ್ಮಾಣವಾಗಲಿರವ ಇತರ ಎರಡು ದೊಡ್ಡ ಪ್ರತಿಮೆಗಳ ಸಾಲಿಗೆ ಇದು ಸೇರಲಿದೆ, ಮಾಗಡಿ ತಾಲೂಕಿನ ವೀರಾಪುರದಲ್ಲಿ ಶಿವಕುಮಾರ ಸ್ವಾಮೀಜಿಗಳ 111 ಅಡಿ ಎತ್ತರದ ವಿಗ್ರಹಕ್ಕೆ ಸಿಎಂ ಯಡಿಯೂರಪ್ಪ 25 ಕೋಟಿ ರು ಅನುದಾನ ಘೋಷಿಸಿದ್ದಾರೆ.

ಇದರ ಜೊತೆಗೆ ರಾಮನಗರದ ಬಿಡದಿಯ ಬಾನಂದೂರಿನಲ್ಲಿ ಬಾಲಗಂಗಾರ ನಾಥಸ್ವಾಮೀಜಿ ಅವರ ಪ್ರತಿಮೆ ಸ್ಥಾಪನೆಗೂ ಸರ್ಕಾರ 25 ಕೋಟಿ ರು ಅನುದಾನ ನೀಡುವುದಾಗಿ ಪ್ರಕಟಿಸಿದೆ.  ಆದರೆ ಎಷ್ಟು ಅಡಿ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.  ಇದರ ಜೊತೆಗೆ ಇನ್ನು ಹಲವು ದೇವರುಗಳ ವಿಗ್ರಹ ಸ್ಥಾಪನೆ ಕೂಡ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಪ್ರತಿಮೆ ಸ್ಥಾಪನೆಗಾಗಿ ಹಣ ಖರ್ಚು ಮಾಡುವ ಬದಲು, ಅದೇ ಹಣವನ್ನು ರಸ್ತೆ, ಮತ್ತು ಕುಡಿಯುವ ನೀರು ಸೇರಿದಂತೆ ಹಲವು ಮೂಲಭೂತ ಸೌಕರ್ಯ ಒದಗಿಸಲು ಬಳರಬಾರದೇಕೆ, ಅದನ್ನು ಯಾರೂ ಮಾಡುವುದಿಲ್ಲ, ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲಾ ಕೆಲವು ಸೀಮೀತ ಸಮುದಾಯಗಳ ಓಲೈಕೆಗೆ ಮುಂದಾಗುತ್ತಿದೆ ಎಂದು ಹೆಸರು ಹೇಳಲು ಇಚ್ಚಿಸದ ಸರ್ಕಾರದ ಅಧಿಕಾರಿಯೊಬ್ಬರು ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com