ಸೋದರತ್ವ ಘೋಷಣೆಯೇ ಪೇಜಾವರ ಶ್ರೀಗಳು ಹಿಂದೂ ಧರ್ಮೋದ್ಧಾರಕರಾಗುವಂತೆ ಮಾಡಿತ್ತು

ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ದೇಶದಲ್ಲಿ ಹಿಂದುತ್ವದ ದೊಡ್ಡ ದನಿಯಾಗಿದ್ದರು. ಸೋದರತ್ವದ ಘೋಷಣೆಯೇ ಶ್ರೀಗಳು ಹಿಂದೂ ಧರ್ಮೋದ್ಧಾರಕರಾಗುವಂತೆ ಮಾಡಿತ್ತು. ಧಾರ್ಮಿಕ ವಿಚಾರ, ವಿವಾದಗಳು, ವಿಷಯಗಳು ಬಂದಾಗ ಸ್ಪಂದಿಸುತ್ತಿದ್ದವರಲ್ಲಿ ಶ್ರೀಗಳು ಅಗ್ರಗಮ್ಯರಾಗಿದ್ದರು. 
ಪೇಜಾವರ ವಿಶ್ವೇಶ ತೀರ್ಥ ಶ್ರೀ
ಪೇಜಾವರ ವಿಶ್ವೇಶ ತೀರ್ಥ ಶ್ರೀ

ಉಡುಪಿ: ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ದೇಶದಲ್ಲಿ ಹಿಂದುತ್ವದ ದೊಡ್ಡ ದನಿಯಾಗಿದ್ದರು. ಸೋದರತ್ವದ ಘೋಷಣೆಯೇ ಶ್ರೀಗಳು ಹಿಂದೂ ಧರ್ಮೋದ್ಧಾರಕರಾಗುವಂತೆ ಮಾಡಿತ್ತು. ಧಾರ್ಮಿಕ ವಿಚಾರ, ವಿವಾದಗಳು, ವಿಷಯಗಳು ಬಂದಾಗ ಸ್ಪಂದಿಸುತ್ತಿದ್ದವರಲ್ಲಿ ಶ್ರೀಗಳು ಅಗ್ರಗಮ್ಯರಾಗಿದ್ದರು. 

1960ರಲ್ಲಿ ಆರ್'ಎಸ್ಎಸ್ ಸರಸಂಗಚಾಲಕ ನಾಯಕರಾಗಿದ್ದ ಎಂ.ಎಸ್.ಗೊಲ್ವಾಲ್ಕರ್ ಮತ್ತು ಸ್ವಾಮಿ ಚಿನ್ಮಯಾನಂದ ಅವರು ವಿಶ್ವ ಹಿಂದೂ ಪರಿಷತ್ ಸ್ಥಾಪನೆಗೆ ಶ್ರೀಗಳ ಸಲಹೆಗಳನ್ನು ಕೇಳಿದ್ದರು. 

1968ರಲ್ಲಿ ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ವಿಹೆಚ್'ಪಿ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಶ್ರೀಗಳು, ಘೋಷಣೆಗಳನ್ನು ಕೂಗಿದ್ದರು ಈ ಘೋಷಣೆಗಳೊಂದಿಗೆ ದೇಶದಾದ್ಯಂತ ಮೊಲದ ಬಾರಿಗೆ ಪರಿಚಿತವಾಗಿದ್ದರು. 

ಎಲ್ಲಾ ಹಿಂದೂಗಳು ಸಹೋದರರು. ಹಿಂದೂಗಳ ರಕ್ಷಣೆ ಹಾಗೂ ಅವರ ಹಿಂದೆ ಜೊತೆಗೆ ನಿಲ್ಲುವುದು ನನ್ನ ಕೆಲಸ ಎಂದು ಹೇಳಿದ್ದರು. ಈ ಹೇಳಿಕೆ ಸಾಕಷ್ಟು ಸುದ್ದಿಗಳನ್ನೂ ಮಾಡಿತ್ತು. ಅಲ್ಲದೆ, ತುರ್ತು ಪರಿಸ್ಥಿತಿ ಖಂಡಿಸಿ ಎರಡು ಬಾರಿ ಅಂದಿನ ಪ್ರಧಾನಮಂತ್ರಿಗಳಾಗಿದ್ದ ಇಂದಿರಾ ಗಾಂಧಿಯವರಿಗೂ ಪತ್ರ ಬರೆದಿದ್ದರು. ಆದರೆ, ಶ್ರೀಗಳನ್ನು ಮುಟ್ಟಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ಶ್ರೀಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವ ವಾಸುದೇವ್ ಭಟ್ ಅವರು ಹೇಳಿದ್ದಾರೆ. 

ಪೇಜಾವರ ಶ್ರೀಗಳು ಇತರೆ ಶ್ರೀಗಳಿಗಿಂತ ಭಿನ್ನವಾಗಿದ್ದರು. ಧಾರ್ಮಿಕ ಮುಖಂಡರು ಅನುಸರಿಸುತ್ತಿದ್ದ ನಿರ್ಬಂಧಗಳಿಗೆ ಸೀಮಿತವಾಗಿರದೆ ಎಲ್ಲಾ ವಲಯದ ಜನರನ್ನು ತಲುಪುವ ಶಕ್ತಿಯನ್ನು ಹೊಂದಿದ್ದರು. ಹಿಂದೂ ಧರ್ಮ ರಕ್ಷಣೆಗಾಗಿ ಹೋರಾಡಲು ವಿವಿಧ ಹಿಂದೂ ಪಂಥಗಳನ್ನು ಹಾಗೂ ಧಾರ್ಮಿಕ ಮುಖಂಡರನ್ನು ಒಂದೆಡೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗೋವುಗಳ ರಕ್ಷಣೆ, ಮತಾಂತರ, ರಾಮ ಸೇತು ರಕ್ಷಣೆ. ತಿರುಪತಿ ರಕ್ಷಣೆ, ರಾಮ ಜನ್ಮಭೂಮಿ ಸೇರಿದೆ ವಿವಿಧ ವಿಚಾರಗಳ ಬಗ್ಗೆ ಸಕ್ರಿಯರಾಗಿ ಹೋರಾಟ ನಡೆಸುತ್ತಿದ್ದರು. 

ಹಿಂದೂ ಸಂಸ್ಕೃತಿಗೆ ಬೆದರಿಕೆ ಇದೆ ವಿಚಾರ ತಿಳಿಯುತ್ತಿದ್ದಂತೆಯೇ ಸಮುದಾಯಗಳೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ಅವರು ಆಡುತ್ತಿದ್ದ ಮಾತುಗಳಿಗೆ ತೂಕವಿರುತ್ತಿತ್ತು. ಏಕೆಂದರೆ ಅವರ ಅನುಯಾಯಿಗಳು ಅವರ ಮಾತಿಗೆ ಅಷ್ಟರ ಮಟ್ಟಿಗೆ ಗೌರವ ನೀಡುತ್ತಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com