ಎಸ್‌ಟಿ-ಎಸ್‌ಸಿ ಬಡ್ತಿ ಮೀಸಲಾತಿ ಕಾಯ್ದೆ: 65 ಸಾವಿರ ರಾಜ್ಯ ನೌಕರರಿಗೆ ಅನ್ವಯ!

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಸಂಬಂಧಪಟ್ಟ ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಇದು 65 ಸಾವಿರ ಸರ್ಕಾರಿ ನೌಕರರಿಗೆ...
ವಿಧಾನಸೌಧ
ವಿಧಾನಸೌಧ
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಸಂಬಂಧಪಟ್ಟ ಕಾಯ್ದೆ ಅನುಷ್ಠಾನಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಇದು 65 ಸಾವಿರ ಸರ್ಕಾರಿ ನೌಕರರಿಗೆ ಪರಿಣಾಮ ಬೀರಲಿದೆ. 
ಕಾಯ್ದೆ ಅನುಷ್ಠಾನದಿಂದ ಸಾಮಾನ್ಯ ವರ್ಗದ ಮತ್ತು ಹಿಂದುಳಿದ ವರ್ಗಗಳಿಗೆ ನಿರಾಶೆ ಉಂಟು ಮಾಡಿದೆ. 38 ಇಲಾಖೆಗಳಲ್ಲಿ 2017ರಲ್ಲಿ ಪಟ್ಟಿಯಾಗಿದ್ದ ಎಸ್ಟಿ ಎಸ್ಸಿ ಸಿಬ್ಬಂದಿಗಳಿಗೆ ಹೊಸ ಹಿರಿಯತನದ ಪಟ್ಟಿಯನ್ನು ಸಿದ್ಧಪಡಿಸಬೇಕಿದ್ದು ಇದಕ್ಕೆ 30-45 ದಿನಗಳು ತೆಗೆದುಕೊಳ್ಳಬಹುದು ಎಂದು ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ. 
ಇದರಿಂದ ಸರಿಸುಮಾರು 65 ಸಾವಿರ ಸರ್ಕಾರಿ ನೌಕರರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರಲಿದೆ. ಇನ್ನು 2.18 ಲಕ್ಷ ಹುದ್ದೆ ಬಾಕಿ/ಖಾಲಿ ಉಳಿದಿದ್ದು ಕೇವಲ 67-69ರಷ್ಟು ಕೆಲಸದ ಸಾಮರ್ಥ್ಯವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com