ಬಂಡೀಪುರ ಮೇಲು ರಸ್ತೆ ಯೋಜನೆಗೆ ಕೇಂದ್ರದಿಂದ ರೆಡ್ ಸಿಗ್ನಲ್: ಪರಿಸರವಾದಿಗಳಿಗೆ ಹರ್ಷ

ಬಂಡೀಪುರ ಉದ್ಯಾನ ವ್ಯಾಪ್ತಿಯಲ್ಲಿ ಫ್ಲೈ ಓವರ್ ನಿರ್ಮಾಣ ಸಂಬಂಧಿಸಿ ಕೇಂದ್ರ ಸರ್ಕಾರ ಕಡೆಗೂ ಸ್ಪಷ್ಟ ನಿಲುವಿಗೆ ಬಂದಿದೆ. ಮೇಲು ರಸ್ತೆ ನಿರ್ಮಾಣ ಹಾಗೂ ರಾತ್ರಿ ಸಂಚಾರಕ್ಕೆ ನಿರ್ಬಂಧ ತೆರೆವು....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬಂಡೀಪುರ ಉದ್ಯಾನ ವ್ಯಾಪ್ತಿಯಲ್ಲಿ ಫ್ಲೈ ಓವರ್ ನಿರ್ಮಾಣ ಸಂಬಂಧಿಸಿ ಕೇಂದ್ರ ಸರ್ಕಾರ ಕಡೆಗೂ ಸ್ಪಷ್ಟ ನಿಲುವಿಗೆ ಬಂದಿದೆ. ಮೇಲು ರಸ್ತೆ ನಿರ್ಮಾಣ ಹಾಗೂ ರಾತ್ರಿ ಸಂಚಾರಕ್ಕೆ ನಿರ್ಬಂಧ ತೆರೆವು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ರಾಜ್ಯಸಭೆಯಲ್ಲಿ ಸೋಮವಾರ ಮಾತನಾಡಿದ್ದ  ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಡಾ. ಮಹೇಶ್ ಶರ್ಮಾ ತಾವು ರಸ್ತೆ ಸಂಚಾರ ಸಚಿವಾಲಯ ನೀಡಿರುವ ನಾಲ್ಕು ನಿಯಮಿತ ಮೇಲು ರಸ್ತೆಗಳ ಕಾರಿಡಾರ್ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶದ ಮೂಲಕ ಹಾದುಹೋಗುವ ಎನ್ ಎಚ್ 212ರಲ್ಲಿ ರಾತ್ರಿ ಸಂಚಾರ ಹಾಗೂ ಮೇಲು ರಸ್ತೆ ನಿರ್ಮಾಣವನ್ನು ವಿರೋಧಿಸಿದೆ. ಅಲ್ಲದೆ ನಾವು ತಿತಿಮತಿ-ಗೋಣಿಕೊಪ್ಪಕುಟ್ಟ ಮಾರ್ಗವಾಗಿ ಸಾಗುವ ಪರ್ಯಾಯ ರಸ್ತೆಯನ್ನು ಬಲಪಡಿಸುವಂತೆ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಕೇಂದ್ರದ ಈ ಸ್ಪಷ್ಟೀಕರಣವನ್ನು ಪರಿಸರವಾದಿಗಳು, ವನ್ಯಜೀವಿ ಸಂರಕ್ಷಕರು ಸ್ವಾಗತಿಸಿದ್ದಾರೆ.ಕೇರಳವು ಹುಲಿ ಮೀಸಲು ಪ್ರದೇಶದಲ್ಲಿ ಎತ್ತರದ ಕಾರಿಡಾರ್ ಗಳಂತಹಾ ನಿರ್ಮಾಣ ಮಾಡುವಂತೆ ಇಟ್ಟಿರುವ ಬೇಡಿಕೆ ಅಸಮರ್ಥನೀಯ.ರಾತ್ರಿ ಸಂಚಾರ ನಿಷೇಧವನ್ನು ಹಿಂಪಡೆಯಲು ಕೇಳಿರುವುದು ಸಹ ಸರಿಯಲ್ಲ. ವಾಸ್ತವವಾಗಿ, ಒಂಬತ್ತು ಗಂಟೆಗಳ ನಿಷೇಧವನ್ನು 12 ಗಂಟೆಗಳವರೆಗೆ ಹೆಚ್ಚಿಸಬೇಕು, ಏಕೆಂದರೆ ಅದು ವನ್ಯಜೀವಿ ಉಳಿಸಿ ಚಳವಳಿಗೆ ಪೂರಕವಾಗಲಿದೆ. ಈಗಾಗಲೇ ನಿಷೇಧದಿಂದ ರಾತ್ರಿ ವೇಳೆ ಅಪಘಾತವಾಗಿ ಪ್ರಾಣಿಗಳು ಬಲಿಯಾಗುವುದು ಕಡಿಮೆಯಾಗಿದೆ.
ಕೇರಳಕ್ಕೆ ಸಂಪರ್ಕಿಸುವ ಈ ಮುಖ್ಯ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ಕಾರಣ ಪ್ರಯಾಣಿಕರಿಗೆ ಅನಾನುಕೂಲವಿಲ್ಲ. ಅಲ್ಲದೆ ರಾತ್ರಿಯ ಸಂಚಾರ ನಿಷೇಧದ ಕಾರಣದಿಂದ ಮರದ ಕಳ್ಳಸಾಗಣೆ ಕೂಡ ಕಡಿಮೆಯಾಗಿದೆ ಮತ್ತು ಪೋಲಿಸ್ ಅಂಕಿಅಂಶಗಳು ತೋರಿಸಿದಂತೆ ಒಟ್ಟಾರೆ ಅಪರಾಧ ಚಟುವಟಿಕೆಗಳು ಇಳಿಮುಖವಾಗಿವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com