ಶಶಿಕಲಾಗೆ ಕಾರಾಗೃಹದಲ್ಲಿ ವಿಐಪಿ ಸೌಕರ್ಯ- ಆರ್ ಟಿಐನಲ್ಲಿ ಬಹಿರಂಗ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾಗೆ ವಿಐಪಿ ಸೌಕರ್ಯ ಒದಗಿಸುತ್ತಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಯಲ್ಲಿ ತಿಳಿದುಬಂದಿದೆ

Published: 20th January 2019 12:00 PM  |   Last Updated: 20th January 2019 07:02 AM   |  A+A-


Sasikala

ಶಶಿಕಲಾ

Posted By : ABN ABN
Source : The New Indian Express
ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಲ್ಲಿ ನಾಲ್ಕು ವರ್ಷಗಳ ಕಾಲ ಜೈಲುಶಿಕ್ಷೆಗೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾಗೆ ವಿಐಪಿ ಸೌಕರ್ಯ ಒದಗಿಸುತ್ತಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಯಲ್ಲಿ ತಿಳಿದುಬಂದಿದೆ.

ಶಶಿಕಲಾಗೆ ಒಂದು ಕೊಠಡಿ ನೀಡುವಂತೆ ಕೋರ್ಟ್ ಆದೇಶಿಸಿದ್ದರೂ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ. ಜೈಲಿನಲ್ಲಿ ಅಡುಗೆ ಮಾಡಿಕೊಳ್ಳಲು ವಿನಾಯಿತಿ ಇಲ್ಲ. ಆದರೆ, ಶಶಿಕಲಾ ಅಡುಗೆ ಮಾಡಿಕೊಳ್ಳಲು ಜೈಲಿನ ಅಧಿಕಾರಿಗಳು ಅವಕಾಶ ನೀಡಿದ್ದಾರೆ.

ಗುಂಪಾಗಿ ಬರುವ ಜನರು ಆಕೆಯ ಕೊಠಡಿಗೆ ನೇರವಾಗಿ ತೆರಳಿ 3 ರಿಂದ ನಾಲ್ಕು ಗಂಟೆಗಳ ಕಾಲ  ಮಾತುಕತಕೆ ನಡೆಸಲು ಅವಕಾಶ ನೀಡುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಈ ಹಿಂದೆ ಕಾರಾಗೃಹದ ಡಿಐಜಿ ಆಗಿದ್ದ ಡಿ. ರೂಪಾ 2017ರಲ್ಲಿಯೇ ಶಶಿಕಲಾ ಹಾಗೂ ಆಕೆಯ ಸಹಚರರಿಗೆ  ಪ್ರತ್ಯೇಕವಾದ ಅಡುಗೆ ಮನೆ, ಹೆಚ್ಚುವರಿ ಕೊಠಡಿಗಳು ಹಾಗೂ ಸಂದರ್ಶಕರ ಅವಧಿ ವಿಸ್ತರಿಸುವ ಮೂಲಕ ವಿಶೇಷವಾಗಿ ಉಪಚರಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಇದು ಸುಳ್ಳಿನ ಆರೋಪವಾಗಿದೆ ಎಂದು ಅಂದಿನ ಡಿಜಿ ಆಗಿದ್ದ  ಹೆಚ್ ಎಸ್ ಸತ್ಯನಾರಾಯಣ ರಾವ್ ಹೇಳಿಕೆ ನೀಡಿದ್ದರು.

ಈ ಆರೋಪದ ತನಿಖೆಗಾಗಿ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಈ ಸಮಿತಿ ವರದಿ ಈಗ ಹೊರ ಬಂದಿದ್ದು, ಶಶಿಕಲಾ ಹಾಗೂ ಆಕೆಯ ಸಹಚರರಿಗೆ  ಜೈಲಿನಲ್ಲಿ ವಿಶೇಷ ಸೌಕರ್ಯ ಒದಗಿಸಿರುವುದು ತಿಳಿದುಬಂದಿದೆ.
Stay up to date on all the latest ರಾಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp