ಮನದಲ್ಲಿ ನಿರೀಕ್ಷೆ, ಕಣ್ಣಿನಲ್ಲಿ ಭರವಸೆ... ಇದು ಕಾಣೆಯಾದ ಕಡಲ ಮಕ್ಕಳ ಕುಟುಂಬದ ಕಥೆ!

ಅವರ ಹೆಸರು ಪ್ರೇಮ, ಆಕೆ ಪ್ರತಿ ದಿನವೂ ಬೆಳಗೆದ್ದು ತಮ್ಮ ಪತಿ ಲಕ್ಷ್ಮಣ ಹರಿಕಂತ್ರ ಅವರ ಮೊಬೈಲ್ ಗೆ ಕರೆ ಮಾಡುತ್ತಾರೆ. ಆದರೆ 45 ದಿನಗಳಿಂಡಲೂ ಆಕೆ ಪತಿಯೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ
ಮನದಲ್ಲಿ ನಿರೀಕ್ಷೆ, ಕಣ್ಣಿನಲ್ಲಿ ಭರವಸೆ... ಇದು ಕಾಣೆಯಾದ ಕಡಲ ಮಕ್ಕಳ ಕುಟುಂಬದ ಕಥೆ!
ಮನದಲ್ಲಿ ನಿರೀಕ್ಷೆ, ಕಣ್ಣಿನಲ್ಲಿ ಭರವಸೆ... ಇದು ಕಾಣೆಯಾದ ಕಡಲ ಮಕ್ಕಳ ಕುಟುಂಬದ ಕಥೆ!
ಕುಮಟಾ: ಅವರ ಹೆಸರು ಪ್ರೇಮ, ಆಕೆ ಪ್ರತಿ ದಿನವೂ ಬೆಳಗೆದ್ದು ತಮ್ಮ ಪತಿ ಲಕ್ಷ್ಮಣ ಹರಿಕಂತ್ರ ಅವರ ಮೊಬೈಲ್ ಗೆ ಕರೆ ಮಾಡುತ್ತಾರೆ. ಆದರೆ 45 ದಿನಗಳಿಂಡಲೂ ಆಕೆ ಪತಿಯೊಡನೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ! ಇದು ಈಕೆಯೊಬ್ಬರ ಕಥೆಯಲ್ಲ ಲಕ್ಷ್ಮಣ,(41) ಸೇರಿ ಒಟ್ಟು ಏಳು ಮಂದಿ ಮೀನುಗಾರರು ಡಿಸೆಂಬರ್ 15, 2018ರಿಂದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ನಾಪತ್ತೆಯಾಗಿದ್ದು ಇದುವರೆಗೆ ಪತ್ತೆಯಾಗಿಲ. ಆ ಎಲ್ಲಾ ಮೀಊನುಗಾರರ ಕುಟುಂಬದವರ ಕಥೆಯೂ ಇದೇ ಆಗಿದೆ.
ಲಕ್ಷ್ಮಣ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಅಗಿದೆ.ಸುವರ್ಣ ತ್ರಿಭುಜ ಎಂಬ ಬೋಟ್ ನಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಟಿದ್ದ ಮಲ್ಪೆಯ ಲಕ್ಷ್ಮಣ ಹಾಗೂ ಇತರೆ ಆರು ಮಂದಿ ಎಲ್ಲಿದ್ದಾರೆ ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ. ಈಗೆ ಕಾಣೆಯಾದವರಲ್ಲಿ ಐವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದರೆ ಇಬ್ಬರು ಉಡುಪಿ ಜಿಲ್ಲೆಗೆ ಸೇರಿದವರು.ಮೀನುಗಾರಿಕೆಗೆ ತೆರಳಿದ ಎರಡು ದಿನಗಳ ಬಳಿಕ ಮಹಾರಾಷ್ಟ್ರದ ಸಿಂದೂದುರ್ಗ ಕರಾವಳಿಯಲ್ಲಿದ್ದ ಬೋಟ್ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ.45 ದಿನಗಳ ನಂತರವೂ ಸಹ ಆ ಬೋಟ್ ಎಲ್ಲಿದೆ ಎಂದಾಗಲಿ, ಅದರಲ್ಲಿನ ಮೀನುಗಾರರು ಎಲ್ಲಿದ್ದಾರೆಂದಾಗಲಿ ಸುಳಿವು ಲಭ್ಯವಾಗಿಲ್ಲ.
ಲಕ್ಷ್ಮಣ ಅವರಲ್ಲದೆ ರವಿ, ಹರೀಶ್ ಮೊಗವೀರ್, ರಮೇಶ್ ಮೊಗವೀರ್,  ಸತೀಶ್ ಹರಿಕಂತ್ರ, ಉಡುಪಿ ಜಿಲ್ಲೆಯ ಚಂದ್ರಶೇಖರ ಕೋಟ್ಯಾನ್, ದಾಮೋದರ್  ಸಹ ಕಾಣೆಯಾಗಿದ್ದಾರೆ.
ಲಕ್ಷ್ಮಣ ಅವರ ಪತ್ನಿ ಪ್ರೇಮಾ ತನ್ನ ನಾಲ್ವರು ಮಕ್ಕಳೊಡನೆ ಕುಮಟಾ ಸಮೀಪದ ಹೊಲನಗದ್ದೆ ಎಂಬ ಗ್ರಾಮದಲ್ಲಿ ವಾಸವಿದ್ದಾರೆ. ಪ್ರೇಮಾ ಅವರ ಕುಟುಂಬದಲ್ಲಿ ಲಕ್ಷ್ಮಣ್ ಮಾತ್ರವೇ ದುಡಿಯುವ ವ್ಯಕ್ತಿ. ಅವರು ಕಳೆದ 15 ವರ್ಷಗಳಿಂದ ಮಲ್ಪೆಯಲ್ಲಿ ಮೀನುಗಾರರಾಗಿ ಕೆಲಸ ಮಾಡುತ್ತಿದ್ದರು, ಅವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದಲ್ಲದೆ ಮನೆ ಕಟ್ಟುವ ಪ್ರಯತ್ನದಲ್ಲಿದ್ದರು ಎಂದು ಪ್ರೇಮಾ ಹೇಳುತ್ತಾರೆ.
ಪ್ರೇಮಾ ಮತ್ತು ಆಕೆಯ ಪುತ್ರಿ ಸುಷ್ಮಾ ,ಕುಮಟಾದಲ್ಲಿನ ತಮ್ಮ ಗ್ರಾಮ ಹೊಲನಗದ್ದೆಯಲ್ಲಿ ವಾಸವಿದ್ದಾರೆ. ಪತಿ ನಾಪತ್ತೆಯಾದಾಗಿನಿಂದ ಪ್ರೇಮಾ ಯಾರೊಡನೆ ಹೆಚು ಮಾತನಾಡುವುದನ್ನೇ ಬಿಟ್ಟಿದ್ದಾರೆ. ದಿನವಿಡೀ ಮನೆಯಲ್ಲೇ ಕುಳಿತು ರೋಧಿಸುತ್ತಿದ್ದಾರೆ."ನಮಗೆ ಕಾಯುವುದಲ್ಲದೆ ಅನ್ಯ ಮಾರ್ಗವೇ ಇಲ್ಲ, ಸರ್ಕಾರ ಇವರನ್ನು ಆದಷ್ಟು ಬೇಗ ಪತ್ತೆ ಮಾಡಿ ಹಿಂದಕ್ಕೆ ಕರೆಸಲಿದೆ ಎಂದು ನಂಬಿದ್ದೇವೆ." ಪ್ರೇಮಾ ಹೇಳಿದ್ದಾರೆ.
ಲಕ್ಷ್ಮಣ್ ಅವರ ಹಿರಿಯ ಪುತ್ರಿ ಬಿಕಾಂ ಓದುತ್ತಿರುವ ಸುಷ್ಮಾ, ಮಾತನಾಡಿ "ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಾಗೌಡ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ,  ಶಾಸಕರು ಮತ್ತು ಇತರ ಮುಖಂಡರು ನಮ್ಮ ಮನೆಗೆ ಭೇಟಿ ನೀಡಿ ನನ್ನ ತಂದೆಯನ್ನು ಪತ್ತೆ ಮಾಡಿ ಹಿಂದಕ್ಕೆ ಕರೆಸುವೆವು ಎಂದು ಭರವಸೆ ನೀಡಿದ್ದಾರೆ. ಆದರೆ 45 ದಿನಗಳೇ ಕಳೆದಿದ್ದರೂ ಯಾವುದೇ ಬೆಳವಣಿಗೆಗಳಿಲ್ಲ. ಭಾರತೀಯ ನೌಕಾಪಡೆ ಮತ್ತು ಇತರರು ಕಾಣೆಯಾದ ಬೋಟ್ ಹಾಗೂ ಮೀನುಗಾರರನ್ನು ಹುಡುಕುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ. 
"ಸಾಮಾಜಿಕ ತಾಣದಲ್ಲಿ ದಿನನಿತ್ಯ ಹಲವು ವದಂತಿಗಳುಇ ಬರುತ್ತಿದೆ. ಕಾಣೆಯಾದ ಬೋಟ್ ಸಿಕ್ಕಿದೆ ಎಂದೂ ಹೇಳಲಾಗುತ್ತಿದೆ. ಆದರೆ ಅದಾವುದೂ ಸತ್ಯವಲ್ಲ ಯಾವುದೂ ದೃಷೀಕರಣಗೊಂಡಿಲ್ಲ." ಅವರು ಹೇಳಿದ್ದಾರೆ.
ಲಕ್ಷ್ಮಣ್ ಅವರ ತಾಯಿ ವಿಮಲಾ ಮಾತನಾಡಿ ""ನನ್ನ ಮಗ ಒಳ್ಳೆಯ ವ್ಯಕ್ತಿ.ಅವನಿಗೆ ಕೆಲಸದ ನಡುವೆ ಸ್ವಲ್ಪ ಸಮಯ ಸಿಕ್ಕರೂ ಮನೆಗೆ ಬರುತ್ತಿದ್ದ. ಅವನೆಂದಿಗೂ ಇತರರು ನೋವುಪಡುವುದನ್ನು ಸಹಿಸುತ್ತಿರಲ್ಲಿಲ್ಲ.ಆದರೆ ಈಗ ಇಡೀ ಕುಟುಂಬ ಮತ್ತು ಸಂಬಂಧಿಗಳು ದುಃಖದಿಂದ ಬಳಲುತ್ತಿದ್ದಾರೆ.
"ಕಳೆದ ಎಂಟು ವರ್ಷಗಳಿಂದ ಅವನು ಮನೆ ನಿರ್ಮಾಣದಲ್ಲಿ ತೊಡಗಿದ್ದ. ಲಕ್ಷ್ಮಣ್ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡಿದ್ದ ಕಾರಣ ಮನೆ ನಿರ್ಮಾಣ ವಿಳಂಬವಾಗಿದೆ" ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com