ಜುಲೈ 20ರಿಂದ ಬೆಳಗಾವಿ-ಗೋವಾ ಮಧ್ಯೆ ಹೊಸ ರೈಲು ಸಂಚಾರ

ಬೆಳಗಾವಿ ಮತ್ತು ಗೋವಾ ನಡುವೆ ಇದೇ ತಿಂಗಳು ನೂತನ ರೈಲು ಸಂಪರ್ಕ ಆರಂಭವಾಗಲಿದೆ. ರೈಲ್ವೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಬೆಳಗಾವಿ ಮತ್ತು ಗೋವಾ ನಡುವೆ ಇದೇ ತಿಂಗಳು ನೂತನ ರೈಲು ಸಂಪರ್ಕ ಆರಂಭವಾಗಲಿದೆ. 
ರೈಲ್ವೆ ಅಧಿಕಾರಿಗಳಿಗೆ ಕಾರ್ಯನಿರ್ವಹಣೆಯ ವೇಳಾಪಟ್ಟಿಯನ್ನು ನೀಡಲಾಗಿದ್ದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಬೆಳಗಾವಿಯಿಂದ ವಾಸ್ಕೊ ಮಾರ್ಗದ ತಪಾಸಣೆ ನಡೆಸುತ್ತಿದ್ದಾರೆ. ಇದೇ 20ರಂದು ವಾಸ್ಕೊ ರೈಲು ನಿಲ್ದಾಣದಿಂದ ರೈಲ್ವೆ ಉದ್ಘಾಟನೆಯಾಗಲಿದೆ.
ವೇಳಾಪಟ್ಟಿ ಪ್ರಕಾರ, ರೈಲು ಬೆಳಗಾವಿ ನಿಲ್ದಾಣದಿಂದ ಬೆಳಗ್ಗೆ 6.20ಕ್ಕೆ ಹೊರಟು ವಾಸ್ಕೊಗೆ ಮಧ್ಯಾಹ್ನ 12.40ಕ್ಕೆ ತಲುಪಲಿದೆ. ಅದೇ ದಿನ ಅಪರಾಹ್ನ 3.55ಕ್ಕೆ ರೈಲು ವಾಸ್ಕೊ ನಿಲ್ದಾಣದಿಂದ ಹೊರಟು ಬೆಳಗಾವಿಗೆ ರಾತ್ರಿ 9.25ಕ್ಕೆ ತಲುಪಲಿದೆ. 
ಆರಂಭದಲ್ಲಿ ಶುಕ್ರವಾರ ಮತ್ತು ಶನಿವಾರ ರೈಲು ಸಂಚಾರ ನಡೆಸಲಿದ್ದು ಜನರ ಪ್ರತಿಕ್ರಿಯೆ ನೋಡಿಕೊಂಡು ಮುಂದೆ ಪ್ರತಿದಿನ ಸಂಚಾರ ಮಾಡುವ ಬಗ್ಗೆ ರೈಲು ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com