ತ್ರಿಭಾಷಾ ಸೂತ್ರದಡಿ ಭಾಷಾ ಹೇರಿಕೆ; ತಜ್ಞರ ಪರ-ವಿರೋಧ ಅಭಿಪ್ರಾಯ

ರಾಷ್ಟ್ರೀಯ ಶಿಕ್ಷಣ ಕರಡು ನೀತಿ ವರದಿಯನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಕರಡು ನೀತಿ ವರದಿಯನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಕೆಯಾಗುತ್ತಿದ್ದಂತೆ ಹಿಂದಿ ಭಾಷೆ ಹೇರಿಕೆ ಬಗ್ಗೆ ದಕ್ಷಿಣ ಭಾರತದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಶಿಕ್ಷಣ ಕರಡು ನೀತಿಯ ಬಗ್ಗೆ ಶಿಕ್ಷಣ ತಜ್ಞರು, ಪರಿಣಿತರು ಹಲವು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಹಲವು ನೀತಿ, ನಿಯಮಗಳ ಮೂಲಕ ಖಾಸಗಿ ಸಂಸ್ಥೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೆಲವರು ಆರೋಪಿಸಿದರೆ, ಇಂತಹ ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕು, ಪೂರ್ವ ಪ್ರಾಥಮಿಕ ಹಂತದಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿಗಳ ಕಲಿಕೆ ಹಂತಗಳಲ್ಲಿ ನಡೆಯುವ ಬದಲಾವಣೆಗಳನ್ನು ಸ್ವೀಕರಿಸಬೇಕು ಎನ್ನುತ್ತಾರೆ.
ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಪ್ರೊಫೆಸರ್ ರಿಶಿಕೇಶ್, ವಿದ್ಯಾರ್ಥಿಯ ಪ್ರಾಥಮಿಕ ಕಲಿಕೆ ಹಂತಗಳಲ್ಲಿ ಎಲ್ ಕೆಜಿಯಿಂದ 3ನೇ ತರಗತಿಯವರೆಗೆ ಮಕ್ಕಳು ಆಟವಾಡುತ್ತಾ ಕಲಿಯುತ್ತಾರೆ, ಇಲ್ಲಿ ಭಾಷೆ, ತ್ರಿಭಾಷಾ ನೀತಿ ಯಾವೂದೂ ಮಕ್ಕಳ ಕಲಿಕೆಗೆ ಲೆಕ್ಕಕ್ಕೆ ಬರುವುದೇ ಇಲ್ಲ. ಮಕ್ಕಳು 8ನೇ ತರಗತಿಯವರೆಗೆ ಹಲವು ಭಾಷೆಗಳನ್ನು ಕಲಿಯುವುದಕ್ಕೆ ಇಷ್ಟಪಡುತ್ತಾರೆ. ಹೈಸ್ಕೂಲ್ ಗೆ ಹೋದರೆ ಮಕ್ಕಳಿಗೆ ವಿವಿಧ ವಿಷಯಗಳು ಕಲಿಕೆಗೆ ಇರುತ್ತದೆ, ಕಲೆ, ಕ್ರೀಡೆ, ಕಸೂತಿ ಹೀಗೆ ನಾನಾ ವಿಚಾರಗಳು ಬರುತ್ತದೆ ಎನ್ನುತ್ತಾರೆ.
ತ್ರಿಭಾಷಾ ಸೂತ್ರ: ತ್ರಿಭಾಷಾ ಸೂತ್ರ ಹೊಸದಲ್ಲ. ಅದರಲ್ಲಿ ಹಿಂದಿ ಭಾಷೆಗೆ ಒತ್ತು ನೀಡಿಲ್ಲ, ಆದರೆ ಜಾರಿಯಲ್ಲಿ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿದೆ. ತ್ರಿಭಾಷಾ ಸೂತ್ರವನ್ನು ಉತ್ಸಾಹದಿಂದ ಜಾರಿಗೆ ತರಬೇಕು ಎನ್ನುತ್ತಾರೆ ರಿಶಿಕೇಶ್,
ಹಿಂದಿ ಭಾಷೆಯ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಆಧುನಿಕ ಭಾರತೀಯ ಭಾಷೆಗಳಿರುತ್ತದೆ. ಅದಕ್ಕೆ ಹೊರತಾಗಿ 6ರಿಂದ 8ನೇ ತರಗತಿಯವರೆಗೆ ಭಾರತದ ಭಾಷೆಯಿದ್ದು ದೇಶದ ಎಲ್ಲಾ ಪ್ರಮುಖ ಭಾಷೆಗಳನ್ನು ಸ್ವಲ್ಪ ಸ್ವಲ್ಪ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತದೆ. ಎನ್ ಸಿಇಆರ್ ಟಿ ಮತ್ತು ಎಸ್ ಸಿಇಆರ್ ಟಿ ದೇಶಾದ್ಯಂತ ಮಕ್ಕಳ ಪಠ್ಯಪುಸ್ತಕಗಳನ್ನು ಸಿದ್ದಗೊಳಿಸುತ್ತದೆ. ಸಂಸ್ಕೃತ ಭಾಷೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com