ಅನಂತ್ ಮೂರ್ತಿ ಜೊತೆಗೆ ಕಾರ್ನಾಡ್, ಕನ್ನಡವನ್ನು ವಿಶ್ವಮಟ್ಟದಲ್ಲಿ ಜನಪ್ರಿಯಗೊಳಿಸಿದ ನಾಟಕಗಾರ

ಬಹು ಭಾಷಿಯ ಪ್ರತಿಭಾವಂತರಾಗಿದ್ದ ಗಿರೀಶ್ ಕಾರ್ನಾಡ್ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಕಲ್ಪಿಸಿದವರು. ಅನಂತ್ ಮೂರ್ತಿ ಅವರಂತೆ ಕನ್ನಡ ಬರಹಗಳು, ಕಥೆಗಳು ಹಾಗೂ ನಾಟಕಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿದವರು.
ಗಿರೀಶ್ ಕಾರ್ನಾಡ್
ಗಿರೀಶ್ ಕಾರ್ನಾಡ್
ಬೆಂಗಳೂರು: ಬಹು ಭಾಷಿಯ ಪ್ರತಿಭಾವಂತರಾಗಿದ್ದ ಗಿರೀಶ್ ಕಾರ್ನಾಡ್ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಕಲ್ಪಿಸಿದವರು. ಅನಂತ್ ಮೂರ್ತಿ ಅವರಂತೆ ಕನ್ನಡ ಬರಹಗಳು, ಕಥೆಗಳು ಹಾಗೂ ನಾಟಕಗಳನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿದವರು. ಈಗಲೂ ಕೂಡಾ ಅಂತಾರಾಷ್ಟ್ರೀಯ ಲೇಖಕರು ಕನ್ನಡ ಲೇಖನಗಳಿಗೆ ಗೌರವ ನೀಡುತ್ತಾರೆ. ಕಾರ್ನಾಡ್ ಅವರ ಕೆಲಸಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಾರೆ. 
ಯು. ಆರ್. ಅನಂತ್ ಮೂರ್ತಿ ಅವರ ವಿವಾದಾತ್ಮಾಕ ಸಂಸ್ಕಾರ ಚಲನಚಿತ್ರದಲ್ಲಿ ಕಾರ್ನಾಡ್  ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆ ದಿನಗಳಲ್ಲಿ ಬ್ರಾಹ್ಮಣೀಕರಣದ ಮೌಲ್ಯವನ್ನು ಅದು ಪ್ರಶ್ನಿಸುತಿತ್ತು. ಮತ್ತೊಂದು ಪ್ರಮುಖ ಪಾತ್ರದಲ್ಲಿ ಸಾಹಿತಿ ಪಿ. ಲಂಕೇಶ್ ಮಾಡಿದ್ದರು.
ಸಿನಿಮಾ ಕ್ಷೇತ್ರಕ್ಕೆ ಅವರು ಪ್ರವೇಶಿಸುವ ಮುನ್ನ ಕಾರ್ನಾಡ್ ಧಾರವಾಡದಲ್ಲಿ ನಾಟಕಗಳನ್ನು ಮಾಡುತ್ತಿದ್ದರು. ಅವರು ಕಥೆ ಬರೆಯಲು ಪ್ರಾರಂಭಿಸಿದ್ದಾಗ ಅವರು ಆಧುನಿಕ ಇತಿಹಾಸ ಮತ್ತು ಪುರಾಣಗಳ ಹೊಸ ಪ್ರಪಂಚವನ್ನು ಓದುಗರಿಗೆ ತೆರೆದರು. ಅವರ ಬಹುತೇಕ ಬರಹಗಳು ಈ ಎರಡು ಸಾರಾಂಶವನ್ನೆ ಒಳಗೊಂಡಿವೆ. ಅವರು  ತಮ್ಮ ಸ್ವಂತ ನಾಟಕಗಳನ್ನು ಬರೆಯಲು ಪ್ರಯತ್ನಿಸಿದರು.  ಆದರೆ ಅವು  ತಮ್ಮ ಇತರ ಬರಹಗಳಂತೆ ಜನಪ್ರಿಯವಾಗಲಿಲ್ಲ.
1996ರಲ್ಲಿ ಕಾರ್ನಾಡ್ ಅವರು ಬರೆದಿರುವ ಅನೇಕ ನಾಟಕಗಳು ಬೇರೆ ಭಾಷೆಗಳಿಗೆ ಭಾಷಾಂತರಗೊಂಡಿವೆಯ ಬೆಳಗಾವಿಯಲ್ಲಿ ನಡೆದ ಕಾರ್ನಾಡ್ ನಾಟಕೋತ್ಸವದಲ್ಲಿ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಮೆರಿಕಾದ ಹ್ಯೂಸ್ಟನ್ ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಯು ಆರ್ ಅನಂತ್ ಮೂರ್ತಿ ಹಾಗೂ ಗಿರೀಶ್ ಕರ್ನಾಡ್  ಕರ್ನಾಟಕದ ಪ್ರತಿನಿಧಿಯಾಗಿ ಕರ್ನಾಟಕ ಸರ್ಕಾರದಿಂದ ಆಯ್ಕೆ ಮಾಡಲಾಗಿತ್ತು. 
ಕನ್ನಡ ಸಾಹಿತ್ಯದಲ್ಲಿ ಉತ್ತಮ ಕಥೆಗಳನ್ನು ರಚಿಸಿರುವ ಗಿರೀಶ್ ಕಾರ್ನಾಡ್, ಕನ್ನಡಕ್ಕೆ ವಿಶ್ವಮಟ್ಟದಲ್ಲಿ ಗೌರವ ತಂದುಕೊಟ್ಟಿದ್ದಾರೆ. ಕಳೆದ ವರ್ಷ ಕೆಲ ವಿಷಯಗಳನ್ನು ಅವರನ್ನು ಟೀಕಿಸಲಾಗಿತ್ತು. ಅವರು ಯಾರಿಗೂ ಹೆದರುತ್ತಿರಲಿಲ್ಲ. ತನ್ನಗೆ ಏನು ಅನ್ನಿಸುತ್ತದೆಯೋ ಅದನ್ನು ಮಾಡುತ್ತಿದ್ದರು. ಆದರೆ, ಈಗ ಹೊಳೆಯುತ್ತಿದ್ದ ನಕ್ಷತ್ರ ಕಳೆದುಕೊಂಡು ಕನ್ನಡ ಸಾಹಿತ್ಯ ಪ್ರಪಂಚ ಬಡವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com