ಅಯ್ಯೋ ದುರ್ವಿಧಿಯೇ! ಅಪಘಾತಕ್ಕೊಳಗಾದವರನ್ನು ರಕ್ಷಿಸಲು ಹೋಗಿ ಮಂಡ್ಯದಲ್ಲಿ ಮೂವರ ದುರ್ಮರಣ

ಅಪಘಾತಕ್ಕೀಡಾದವರನ್ನು ರಕ್ಷಿಸಲು ಹೋಗಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಣಿಗೆರೆ ಬಳಿ ನಡೆದಿದೆ.

Published: 13th June 2019 12:00 PM  |   Last Updated: 13th June 2019 11:20 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : Online Desk
ಮಂಡ್ಯ: ಅಪಘಾತಕ್ಕೀಡಾದವರನ್ನು ರಕ್ಷಿಸಲು ಹೋಗಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಣಿಗೆರೆ ಬಳಿ ನಡೆದಿದೆ. 

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದವರನ್ನು ಸ್ಥಳೀಯರು ರಕ್ಷಿಸಲು ಹೋಗಿದ್ದಾರೆ. ಈ ವೇಳೆ ವಿದ್ಯುತ್ ತಂತಿ ತಗುಲಿ ಸಾವು ರಕ್ಷಿಸಲು ಹೋದವರು ಸಾವಪ್ಪಿದ್ದಾರೆ.

ಮಣಿಗೆರೆ ಗ್ರಾಮದ ದೇವರಾಜು, ಬಿದರಹೊಸಹಳ್ಳಿಯ ಪ್ರಸನ್ನ ಹಾಗೂ ಪ್ರದೀಪ್ ಮೃತ ದುರ್ದೈವಿಗಳು. 

ಕೆಎಂ ದೊಡ್ಡಿ ಕಡೆಗೆ ಹೋಗುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿತ್ತು  ಅದರಲ್ಲಿದ್ದವರನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ್ದಾರೆ. . 

ಕಾರಿನಲ್ಲಿದ್ದವರು ಗಾಯಗೊಂಡು ಚೀರಾಡುತ್ತಿರುವುದನ್ನು ಕೇಳಿಸಿಕೊಂಡ ಮೂವರು ಕಾರಿನ ಬಳಿ ಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಅದನ್ನು ತುಳಿದು ಮೃತಪಟ್ಟಿದ್ದಾರೆ. 

ಕೂಡಲೇ ಅಲ್ಲಿಯೇ ಇದ್ದವರು ಸೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಅಷ್ಟೊತ್ತಿಗೆ ಮೂವರು ಮೃತಪಟ್ಟಿದ್ದರು. ಬಳಿಕ ಭಯದ ನಡುವೆಯೂ ಕಾರಿನಲ್ಲಿದ್ದವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp