ಬೆಳಗಾವಿಯಿಂದ ಮುಂಬೈಗೆ ಉಡಾನ್ ಯೋಜನೆಯಡಿ ವಿಮಾನ ಹಾರಾಟಕ್ಕೆ ಚಾಲನೆ

ಕೇಂದ್ರದ ಉಡಾನ್‌ ಯೋಜನೆಯಡಿ ಬಹುನಿರೀಕ್ಷಿತ ಸ್ಪೈಸ್‌ಜೆಟ್‌ ಸಂಸ್ಥೆಯಿಂದ ಬೆಳಗಾವಿ-ಮುಂಬಯಿ ನಡುವೆ ವಿಮಾನಯಾನ ...
ಬೆಳಗಾವಿ ವಿಮಾನ ನಿಲ್ದಾಣ
ಬೆಳಗಾವಿ ವಿಮಾನ ನಿಲ್ದಾಣ
ಬೆಳಗಾವಿ : ಕೇಂದ್ರದ ಉಡಾನ್‌ ಯೋಜನೆಯಡಿ ಬಹುನಿರೀಕ್ಷಿತ ಸ್ಪೈಸ್‌ಜೆಟ್‌ ಸಂಸ್ಥೆಯಿಂದ ಬೆಳಗಾವಿ-ಮುಂಬಯಿ ನಡುವೆ ವಿಮಾನಯಾನ ಆರಂಭವಾಗಿದೆ. ಇದಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶಾಸಕ ಅಭಯ ಪಾಟೀಲ ನಿನ್ನೆ ಚಾಲನೆ ನೀಡಿದರು. 
ಈ ವಿಮಾನ ಬೆಂಗಳೂರು-ಬೆಳಗಾವಿ-ಮುಂಬಯಿ ನಡುವೆ ನಿತ್ಯ ಹಾರಾಟ ನಡೆಸುತ್ತದೆ. ಹಲವು ಉದ್ಯಮಿಗಳಿಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಇದರಿಂದ ನೆರವಾಗಲಿದೆ. ಮೇ ತಿಂಗಳಿನಿಂದಲೇ ಇಲ್ಲಿಂದ ಅಹಮದಾಬಾದ್‌, ಪುಣೆ ಮತ್ತು ಹೈದರಾಬಾದ್‌ಗೆ ವಿಮಾನಗಳ ಸಂಚಾರವಿದ್ದು, ಬೆಳಗಾವಿಗೆ ಉಡಾನ್‌ ಯೋಜನೆಯಲ್ಲಿ ಮಂಜೂರಾಗಿರುವ 13 ಮಾರ್ಗಗಳಲ್ಲಿ ನಾಲ್ಕು ಚಾಲನೆ ಪಡೆದಂತಾಗಿದೆ. 
ನಿನ್ನೆ ಉದ್ಘಾಟನೆಯಾದ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು 55 ಪ್ರಯಾಣಿಕರು 92 ಸೀಟುಗಳ ವಿಮಾನದಲ್ಲಿ ಪ್ರಯಾಣಿಸಿದ್ದರು. ಜನರ ಬೇಡಿಕೆ ಹಿನ್ನಲೆಯಲ್ಲಿ ಮುಂಬೈಗೆ ದಿನನಿತ್ಯದ ವಿಮಾನ ಹಾರಾಟ ಆರಂಭಿಸಲಾಗಿತ್ತು. 
ಈ ವಿಮಾನ ಬೆಂಗಳೂರಿನಿಂದ ಬೆಳಗಾವಿಗೆ ಮಧ್ಯಾಹ್ನ 12.05ಕ್ಕೆ ಆಗಮಿಸಿ 12.25ಕ್ಕೆ ಮುಂಬೈಗೆ ಪ್ರಯಾಣಿಸಲಿದೆ. ಆನಂತರ ಮುಂಬೈಯಿಂದ ಬೆಳಗಾವಿಗೆ ಸಂಜೆ 4.05ಕ್ಕೆ ಬಂದು ಬೆಂಗಳೂರಿಗೆ 4.25ಕ್ಕೆ ಹೊರಡುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com