ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬೆಂಕಿ ಅವಘಡ, 25 ಎಕರೆ ಅರಣ್ಯ ನಾಶ!

: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಕಳೆದ ಕೆಲ ವಾರಗಳಲ್ಲಿ ಇದು ಮೂರನೇ ಪ್ರಕರಣವಾಗಿದ್ದು ಶುಕ್ರವಾರ ಕಾಣಿಸಿದ ಬೆಂಕಿಗೆ ಅಂದಾಜು 25 ಎಕರೆಗಳಷ್ಟು ಅರಣ್ಯ ....
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬೆಂಕಿ ಅವಘಡ, 25 ಎಕರೆ ಅರಣ್ಯ ನಾಶ!
ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮತ್ತೆ ಬೆಂಕಿ ಅವಘಡ, 25 ಎಕರೆ ಅರಣ್ಯ ನಾಶ!

ಮೈಸೂರು: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಕಳೆದ ಕೆಲ ವಾರಗಳಲ್ಲಿ ಇದು ಮೂರನೇ ಪ್ರಕರಣವಾಗಿದ್ದು ಶುಕ್ರವಾರ  ಕಾಣಿಸಿದ ಬೆಂಕಿಗೆ ಅಂದಾಜು 25 ಎಕರೆಗಳಷ್ಟು ಅರಣ್ಯ  ಹಾಗೂ ಅದರಲ್ಲಿನ ವನ್ಯಜೀವಿಗಳು ನಾಶವಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಮೂರು ವಿಭಿನ್ನ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದು ಆಕಸ್ಮಿಕವಾಗಿರದೆ ಉದ್ದೇಶಪೂರ್ವಕ ಕೃತ್ಯ ಎಂದು ಅಧಿಕಾರಿಗಳು ಊಹಿಸಿದ್ದಾರೆ.ಮೈಸೂರು-ನಂಜನಗೂಡು ರಸ್ತೆ ಬದಿಯ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಖಾಸಗಿ ಭೂಮಿಯಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಬಳಿಕ ರಣ್ಯ ಪ್ರದೇಶಕ್ಕೆ ಹಬ್ಬಿದೆ.
"ಸುಮಾರು 4.30 ರ ವೇಳೆಗೆ ನಮಗೆ ಎಚ್ಚರಿಕೆ ಸಂದೇಶ ಸಿಕ್ಕಿದೆ.ಅಗ್ನಿಶಾಮಕ ದಳ ಹಾಗೂ ಅರಣ್ಯ ಸಂರಕ್ಷಕರು  ಒಳಗೊಂಡಂತೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆತಂದು ಐದರಿಂದ ಆರು ಬೆಂಕಿ ನಂದಿಸುವ ಯಂತ್ರಗಳನ್ನು ಅಲ್ಲಿ ಅಳವಡಿಸಲಾಗಿದೆ.ಹೇಗಾದರೂ, ಗಾಳಿಯ ವೇಗ ಹೆಚ್ಚಿದ್ದ ಕಾರಣ ನಮಗೆ ಸಲಾವೆದುರಾಗಿತ್ತು. ಸತತ  ಮೂರು ಗಂಟೆಗಳ ನಂತರ ಬೆಂಕಿಯನ್ನು ತಹಬಂದಿಗೆ ತರಲು ಸಾಧ್ಯವಾಗಿದೆ.ಬೆಟ್ಟದ ಪ್ರವೇಶಿಸಲಾಗದ ಸ್ಥಳದ ಕಾರಣದಿಂದಾಗಿ, ಬೆಂಕಿಯು ಕೆಳಗಿನಿಂದ ಮೇಲಕ್ಕೆ ಹರಡುತ್ತಿದ್ದಂತೆ, ಜ್ವಾಲೆಗಳನ್ನು ನಂದಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಮಯ ಹಿಡಿದಿತ್ತು." ಅರಣ್ಯ ಸಂರಕ್ಷಣಾಧಿಕಾರಿ (ಮೈಸೂರು) ಪ್ರಶಾಂತ್ ಕುಮಾರ್ ಕೆ ಸಿ ಹೇಳಿದ್ದಾರೆ.
ಈ ಘಟನೆಯಲ್ಲಿ ನಾಶವಾದ ಬಹುತೇಕ ಕಾಡು ಹುಲ್ಲುಹಾಸು, ಪೊದೆಗಳನ್ನು ಒಳಗೊಂಡಿತ್ತು.ಆದರೆ ಬೃಹತ್ ಮರಗಳು, ಔಷಧೀಯ ಸಸ್ಯಗಳಿಗೆ ಹಾನಿಯಾಗಿಲ್ಲ ಎನ್ನಲಾಗಿದೆ.ಒಟ್ಟಾರೆ ಹಾನಿಯ ಪ್ರಮಾಣವನ್ನು ನಿರ್ಣಯಿಸುವುದಕ್ಕಾಗಿ ಭೌಗೋಳಿಕ ಸ್ಥಾನೀಕರಣ ವ್ಯವಸ್ಥೆ (ಜಿಪಿಎಸ್) ಸಮೀಕ್ಷೆಯನ್ನು ಶನಿವಾರ ನಡೆಸಲಾಗುತ್ತದೆ ಎಂದು ಪ್ರಶಾಂತ್ ಹೇಳಿದ್ದಾರೆ.
ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಈಶ್ವರ್ ನಾಯಕ್ ಮಾತನಾಡುತ್ತಾ, "ಬೆಂಕಿಯ ತೀವ್ರತೆಯು ಬೃಹತ್ ಪ್ರಮಾಣದ್ದಾಗಿತ್ತು, ಆದರೆ ನಂದಿ ಪ್ರತಿಮೆ ಇರುವ ಉತ್ತನಹಳ್ಳಿ ಹಾಗೂ ಚಾಮುಂಡಿ ಬೆಟ್ಟದ ರಸ್ತೆಗೆ ಬೆಂಕಿ ಹಬ್ಬಿರಲಿಲ್ಲ.ಕೇವಲ ಹುಲ್ಲು ಹಾಸು ಮಾತ್ರವೇ ಬೆಂಕಿಗಾಹುತಿಯಾಗಿದೆ.ಅರಣ್ಯಕ್ಕೆ ಯಾವುದೇ ಪ್ರಮುಖ ಹಾನಿ ಸಂಭವಿಸಿಲ್ಲ" ಎಂದಿದ್ದಾರೆ.
ಮಹಿಳೆಯ ದೇಹ ಪತ್ತೆ
ಈ ನಡುವೆ ಚಾಮುಂಡಿ ಬೆಟ್ತದ ತಪ್ಪಲಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯ ನಡುವೆ ಗುರುತಿಸಲಾಗದ ಮಹಿಳೆಯೊಬ್ಬರ ದೇಹ ಪತ್ತೆಯಾಗಿದೆ.ಸುಟ್ಟುಹೋದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಖಾಸಗಿ ಭೂಮಿಯಲ್ಲಿ ಈ ಮೃತದೇಹವನ್ನು ಅರಣ್ಯಾಧಿಕಾರಿಗಳು ಗುರುತಿಸಿದ್ದಾರೆ.
ಸ್ಥಳಕ್ಕೆ ಮೈಸೂರು ಮೆಡಿಕಲ್ ಕಾಲೇಜ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ನ ಸಿಬ್ಬಂದಿ ಆಗಮಿಸಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಇನ್ನು ಈ ಪ್ರಕರಣವು ಸಹಲ ಅಥವಾ ಆಕಸ್ಮಿಕ ಸಾವಲ್ಲ ಬದಲಿಗೆ ಆತ್ಮಹತ್ಯೆಯಾಗಿರಬಹುದು ಎಂಡು ಪೋಲೀಸರು ಶಂಕಿಸಿದ್ದಾರೆ. ಏಕೆಂದರೆ ಶವದ ಪಕ್ಕದಲ್ಲೇ ಮಾತ್ರೆಗಳ ಬಾಟಲಿ ಪತ್ತೆಯಾಗಿದೆ. ಕೆ.ಆರ್. ಪೋಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com