ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಹಿಂಸೆಗೆ ಪ್ರಚೋದಿಸುವುದು ದುರಾದೃಷ್ಟಕರ: ಐಟಿ ಇಲಾಖೆ ತಿರುಗೇಟು
ನಾವು ಯಾವುದೇ ಶಾಸಕ ಅಥವಾ ಸಂಸದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ, ಕಾನೂನು ಅಡಿಯಲ್ಲಿ ಮಾಡಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ...
Published: 28th March 2019 12:00 PM | Last Updated: 28th March 2019 05:13 AM | A+A A-

ಆದಾಯ ತೆರಿಗೆ ಇಲಾಖೆ (ಸಂಗ್ರಹ ಚಿತ್ರ)
Source : Online Desk
ಬೆಂಗಳೂರು: ನಾವು ಯಾವುದೇ ಶಾಸಕ ಅಥವಾ ಸಂಸದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ, ಕಾನೂನು ಅಡಿಯಲ್ಲಿ ಮಾಡಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.
ದಾಳಿ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಐಟಿ ಇಲಾಖೆ, ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಹಿಂಸೆಗೆ ಪ್ರಚೋದಿಸುವಂತ ಹೇಳಿಕೆ ನೀಡಿರುವುದು ದುರಾದೃಷ್ಟಕರ ಎಂದು ತಿರುಗೇಟು ನೀಡಿದೆ.
ರಾಜಕೀಯ ಪ್ರೇರಿತವಾಗಿ ಐಟಿ ದಾಳಿ ನಡೆದಿದೆ ಎಂಬ ಜೆಡಿಎಸ್, ಕಾಂಗ್ರೆಸ್ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಆದಾಯ ತೆರಿಗೆ ಇಲಾಖೆ, ವಿಶ್ವಾಸಾರ್ಹ ಮೂಲಗಳ ಆದಾರದ ಮೇಲೆ ದಾಳಿ ನಡೆಸಿದ್ದೇವೆ, ಕಾನೂನು ಚೌಕಟ್ಟಿನಲ್ಲಿ ನಡೆಯುವ ಈ ಪ್ರಕ್ರಿಯೆಗೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ಭದ್ರತೆಗಾಗಿ ನಾವು ಸಿಆರ್ ಪಿಎಫ್ ಪಡೆಯನ್ನು ಕರೆಸಿಕೊಂಡಿದ್ದೇವೆ, ನಾವು ದಾಳಿ ನಡೆಸಿದ್ದು ನಿಜ ಎಂದು ಹೇಳಿರುವ ಎಲ್ಲೆಲ್ಲಿ ದಾಳಿ ನಡೆಸಿದೆ ಎಂಬ ಬಗ್ಗೆ ಮಾಹಿತಿ ನೀಡಿದೆ. ಇನ್ನೂ ಯಾವುದೇ ಆಹಿತಕರ ಘಟನೆ ನಡೆಯದಂತೆ ಕ್ರಮ ತೆಗೆದುಕೊಂಡಿದ್ದು ಐಟಿ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now