ಹಾಸನದಲ್ಲಿ ಬಸ್-ಆಟೋ ಡಿಕ್ಕಿ: ಭೀಕರ ಅಪಘಾತಕ್ಕೆ ತಾಯಿ-ಮಗು ಸೇರಿ ಮೂವರ ದುರ್ಮರಣ

ಬಸ್ -ಆಟೋ ಡಿಕ್ಕಿಯಾದ ಪರಿಣಾಮ ತಾಯಿ, ಹಸುಗೂಸು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ.

Published: 12th May 2019 12:00 PM  |   Last Updated: 12th May 2019 10:36 AM   |  A+A-


3 killed in road accident at Hassan

ಹಾಸನದಲ್ಲಿ ಬಸ್-ಆಟೋ ಡಿಕ್ಕಿ: ಭೀಕರ ಅಪಘಾತಕ್ಕೆ ತಾಯಿ-ಮಗು ಸೇರಿ ಮೂವರ ದುರ್ಮರಣ

Posted By : RHN RHN
Source : Online Desk
ಹಾಸನ: ಬಸ್ -ಆಟೋ ಡಿಕ್ಕಿಯಾದ ಪರಿಣಾಮ ತಾಯಿ, ಹಸುಗೂಸು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದಿದೆ.

ಬೇಲೂರು ‌ತಾಲ್ಲೂಕಿನ  ಹಗರೆ ಸಮೀಪ ‌ಮಲ್ಲಿಕಾರ್ಜುನ ಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಟೋರಿಕ್ಷಾ ನಡುವೆ ಡಿಕ್ಕಿಯಾಗಿ ಲಕ್ಷ್ಮಮ್ಮ(60)  ಆಕೆಯ ಸೊಸೆ ಚಂದ್ರಕಲಾ (32). ಹಾಗೂ ಚಂದ್ರಕಲಾ ಅವರ ಮೂರು ತಿಂಗಳ ಮಗು ಸಾವನ್ನಪ್ಪಿದ್ದಾರೆ.

ಆಟೋದಲ್ಲಿ ಒಂದೇ ಕುಟುಂಬದವರಾಗಿದ್ದ ಆರು ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತ್ತದಲ್ಲಿ ಇನ್ನೂ ನಾಲ್ವರಿಗೆ ಗಾಯಗಳಾಗಿದ್ದು ಅವರನ್ನು ಹಾಸನ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಬಸ್ ಹಾಸನದಿಂದ ಬೇಲೂರು ಕಡೆ ಹೋಗುತ್ತಿದ್ದಾಗ  ರಂಗನಕೊಪ್ಪಲಿಂದ ಅಂದಲೆ ಗ್ರಾಮಕ್ಕೆ ಸಾಗುತ್ತಿದ್ದ ಆಟೋಗೆ ಡಿಕ್ಕಿ ಆಗಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹಳೇಬೀಡು ಠಾಣಾ ಪೋಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp