ಶಿವಮೊಗ್ಗ: ಸೇನೆ ಸೇರಲು ಆಸಕ್ತಿ ಹೊಂದಿರುವ ಯುವಕರಿಗೆ ಉಚಿತ ತರಬೇತಿ ನೀಡುವ ಮಾಜಿ ಸೈನಿಕ

ಮಲೆನಾಡು ಸೆರಗು ಶಿವಮೊಗ್ಗ ಜಿಲ್ಲೆಯ ಅನಂದಪುರಂ ಬಳಿ ಸೇನೆ ಸೇರಲು ಉತ್ಸುಕರಾಗಿರುವ ಗ್ರಾಮೀಣ ಭಾಗದ ಯುವಕರಿಗೆ ಮಾಜಿ ಸೈನಿಕರೊಬ್ಬರು ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.
ಕಿಶೋರ್ ಕುಮಾರ್
ಕಿಶೋರ್ ಕುಮಾರ್

ಶಿವಮೊಗ್ಗ: ಮಲೆನಾಡು ಸೆರಗು ಶಿವಮೊಗ್ಗ ಜಿಲ್ಲೆಯ ಅನಂದಪುರಂ ಬಳಿ ಸೇನೆ ಸೇರಲು ಉತ್ಸುಕರಾಗಿರುವ ಗ್ರಾಮೀಣ ಭಾಗದ  ಯುವಕರಿಗೆ ಮಾಜಿ ಸೈನಿಕರೊಬ್ಬರು ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

ಮೇ 28 ರಂದು ಸೇನಾ ನೇಮಕಾತಿ ನಡೆಯುತ್ತಿದೆ . ಈ ಹಿನ್ನೆಲೆಯಲ್ಲಿ  ಸುತ್ತಮುತ್ತಲಿನ ಸುಮಾರು 80 ಯುವಕರಿಗೆ   ಮಾಜಿ ಸೈನಿಕ ಕಿಶೋರ್ ಕುಮಾರ್ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಇವರು ಸೇನೆಯಲ್ಲಿ 18 ವರ್ಷ ಸೇವೆ ಸಲ್ಲಿಸಿದ್ದಾರೆ.

ಬೈರಾಪುರ ಗ್ರಾಮದ ಕಿಶೋರ್ ಕುಮಾರ್ ಮದ್ರಾಸ್ ರೆಜಿಮೆಂಟ್ ನಲ್ಲಿ  ಸೇವೆ ಸಲ್ಲಿಸಿದ್ದಾರೆ. ಸೇನೆ ಸೇರಲು ಏನು ಮಾಡಬೇಕೆಂಬ ಬಗ್ಗೆ ಇಲ್ಲಿನ ಯುವಕರಿಗೆ ಮಾಹಿತಿ ದೊರೆಯುತ್ತಿಲ್ಲ. ಆದ್ದರಿಂದ ಯೋಚಿಸಿ ಕೋಚಿಂಗ್ ಸೆಂಟರ್ ಆರಂಭಿಸಿದ್ದೇನೆ. ಇದರಿಂದಲೇ ಅವರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ನಾಗರಿಕ ಸೇವೆ ಸೇರಬಯಸುವ ಆಕಾಂಕ್ಷಿಗಳಿಗೆ ಕೋಚಿಂಗ್ ಸೆಂಟರ್ ಗಳು ಇರುವುದನ್ನ ನಾವು ನೋಡಿದ್ದೇವೆ. ಆದರೆ. ಸೇನೆ ಸೇರಬೇಕೆನ್ನುವ ಆಕಾಂಕ್ಷಿಗಳಿಗೆ ಒಂದೇ ಒಂದು ಕೋಚಿಂಗ್ ಸೆಂಟರ್ ಕಾಣಸಿಗುವುದಿಲ್ಲ. ದಕ್ಷಿಣ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಇದು ದೇಶಭಕ್ತಿ ಕಾಯಕ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

 ಆಟೋ ಚಾಲಕರು, ಬಸ್ ಏಜೆಂಟ್, ವ್ಯಾಪಾರಿಗಳು ಮತ್ತು ತರಕಾರಿ ವ್ಯಾಪಾರಿಗಳಿಂದ  ನಿಧಿ ಸಂಗ್ರಹಿಸುತ್ತಾರೆ. ಆ ಹಣದಲ್ಲಿ ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಆನ್ ಲೈನ್ ನಲ್ಲಿ ಹೇಗೆ ಅರ್ಜಿ ತುಂಬುವುದು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ.

ಕಿಶೋರ್ ಕುಮಾರ್ ಜೊತೆಗೆ ಮೂವರು ಸೈನಿಕರು ಹಾಗೂ ಮಾಜಿ ಸೈನಿಕರೊಬ್ಬರು ಸೇರಿಕೊಂಡಿದ್ದಾರೆ.  ಸೈನಿಕರು ರಜೆಯ ಸಂದರ್ಭದಲ್ಲಿ ಬಂದು ಯುವಕರಿಗೆ ದೈಹಿಕತೆ ಬಗ್ಗೆ ತರಬೇತಿ ನೀಡಿದರೆ, ಮಾಜಿ ಸೈನಿಕರೊಬ್ಬರು ವ್ಯಾಯಾಮಾದ ಬಗ್ಗೆ ತರಬೇತಿ ನೀಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com