ಟ್ರಾಫಿಕ್ ಕಿರಿಕಿರಿ ಎದುರಿಸುತ್ತಿದ್ದ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಸಬ್ ಅರ್ಬನ್ ರೈಲು ಯೋಜನೆಗೆ ಅನುಮೋದನೆ!- ಸಂಸದ ತೇಜಸ್ವಿ ಸೂರ್ಯ    

ಬೆಂಗಳೂರಿನ ಬಹುಕಾಲದ ಬೇಡಿಕೆಯಾಗಿದ್ದ ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರಿನ ಬಹುಕಾಲದ ಬೇಡಿಕೆಯಾಗಿದ್ದ ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡಿದೆ. 

ಸಂಸದ ತೇಜಸ್ವಿ ಸೂರ್ಯ ಈ ಬಗ್ಗೆ ಟ್ವೀಟ್ ಮಾಡಿದ್ದು ರೈಲ್ವೆ ಮಂಡಳಿ ಸಭೆಯಲ್ಲಿ ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ವಿಷಯವನ್ನು ತಿಳಿಸಿದ್ದಾರೆ. 

ಈ ಬಗ್ಗೆ ಕನ್ನಡಪ್ರಭ.ಕಾಂ ನೊಂದಿಗೆ ಮಾತನಾಡಿರುವ ಸಂಸದರು, ಹೇಳಿದ್ದು ಇಷ್ಟು

"ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನ ಬಗೆಹರಿಸುವುದಕ್ಕೆ ಸಬ್ ಅರ್ಬನ್ ರೈಲು ಬೇಕು ಇದರಿಂದಾಗಿ ಕೋಟ್ಯಂತರ ಜನರಿಗೆ ಸಹಾಯವಾಗಲಿದೆ ಎಂಬ ಕೂಗು ಕಳೆದ 17 ವರ್ಷಗಳಿಂದ ಇತ್ತು. ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಈ ಹಿಂದೆ ರಾಜ್ಯ ಸರ್ಕಾರದಿಂದ ಕಳಿಸಲಾಗಿದ್ದ ಪ್ರಸ್ತಾವನೆಗೆ ಅನುಮೋದನೆ ದೊರೆತಿರಲಿಲ್ಲ. ಈ ಬಾರಿ ಆಗಸ್ಟ್ ನಲ್ಲಿ ಸಿಎಂ ಯಡಿಯೂರಪ್ಪ ಅವರು ಪರಿಷ್ಕೃತ ಕಾರ್ಯಸಾಧ್ಯತಾ ವರದಿ (ಡಿಪಿಆರ್) ನ ಕೇಂದ್ರಕ್ಕೆ ಕಳಿಸಿಕೊಟ್ಟಿದ್ದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯ, ಬೆಂಗಳೂರು, ಕರ್ನಾಟಕದ ಎಲ್ಲಾ ಸಂಸದರ ಸತತ ಪ್ರಯತ್ನದಿಂದಾಗಿ ಇಂದು ನಡೆದ ರೈಲ್ವೆ ಮಂಡಳಿ ಸಭೆಯಲ್ಲಿ ಬೆಂಗಳೂರಿನ ಸಬ್ ಅರ್ಬನ್ ರೈಲು ಯೋಜನೆಗೆ ಅನುಮೋದನೆ ದೊರೆತಿದ್ದು ಬೆಂಗಳೂರಿನ ಮಟ್ಟಿಗೆ ಬಹುದೊಡ್ಡ ಮೈಲಿಗಲ್ಲಾಗಿದೆ. 

ಇತ್ತೀಚೆಗಷ್ಟೇ ಈ ಯೋಜನೆಗೆ ಅನುಮೋದನೆ ದೃಷ್ಟಿಯಿಂದ, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ, ಕಳೆದ ಬಾರಿ ಅನುಮೋದನೆಗೆ ತಕರಾರು ವ್ಯಕ್ತಪಡಿಸಿದ್ದ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರನ್ನು ಭೇಟಿ ಮಾಡಿದ್ದೆ. ನೀತಿ ಆಯೋಗದ ತಕರಾರುಗಳಿಗೆ ಈ ಬಾರಿ ಸಲ್ಲಿಸಲಾಗಿದ್ದ ಪರಿಷ್ಕೃತ ಡಿಪಿಆರ್ ನಲ್ಲಿ ಉತ್ತರ ನೀಡಲಾಗಿರುವುದನ್ನು ಮನವರಿಕೆ ಮಾಡಿ ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ತಕರಾರು ಇಲ್ಲದೇ ಅನುಮೋದನೆ ನೀಡಬೇಕು ಎಂದು ಕೇಳಿದ್ದೆ. ಈ ಸಭೆಯಲ್ಲಿ ಯೋಜನೆಗೆ ಎಲ್ಲರ ಬೆಂಬಲ ದೊರೆತು ಅನುಮೋದನೆ ಸಿಕ್ಕಿದೆ. ಇದು ಬೆಂಗಳೂರಿಗೆ ಕೇಂದ್ರ ಸರ್ಕಾರದ ಬಹುದೊಡ್ಡ ಕೊಡುಗೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿ ಇದ್ದು, ಬೆಂಗಳೂರಿನ ಜನತೆ ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗೆ ಉಪನಗರ ರೈಲು ಯೋಜನೆ ಪರಿಹಾರವಾಗಿರಲಿದೆ, ಸಂಸತ್ ಅಧಿವೇಶನದ ಸಮಯದಲ್ಲಿ ಎಲ್ಲಾ ಸಂಸದರು,ಸಚಿವರು ಪ್ರಧಾನಿಗಳನ್ನ ಭೇಟಿ ಮಾಡಿ ಕೇಂದ್ರದ ಅನುಮೋದನೆ ಸಿಗುವಂತೆ ಮಾಡುತ್ತೇವೆ. ನಾಳೆ ಮುಖ್ಯಮಂತ್ರಿಗಳ ಜೊತೆಗೆ ರೈಲ್ವೆ ಮಂಡಳಿ ಅಧ್ಯಕ್ಷರು ಹಾಗೂ ಸುರೇಶ್ ಅಂಗಡಿ, ಸಂಸದರು ಯೋಜನೆಗೆ ಸಂಬಂಧಿಸಿದಂತೆ ಸಭೆ ನಡೆಸಲಿದ್ದಾರೆ"

ನ.04 ರಂದು ನಡೆದ ಸಭೆಯಲ್ಲಿ  ನೀತಿ ಆಯೋಗದ ಅಧಿಕಾರಿಗಳು, ಕೇಂದ್ರದ ರೈಲ್ವೆ ಮಂಡಳಿ ಅಧಿಕಾರಿಗಳು, ಕೇಂದ್ರದ ಹಣಕಾಸು ಅಧಿಕಾರಿಗಳು ಭಾಗವಹಿಸಿದ್ದರು.

ಯೋಜನಾ ವೆಚ್ಚ ಹಾಗೂ ಮಾರ್ಗದ ಉದ್ದ

ಬೆಂಗಳೂರು ಉಪನಗರ ರೈಲು 148.17 ಕಿ.ಮೀ ಉದ್ದದ ಯೋಜನೆಯಾಗಿದ್ದು, ಪರಿಷ್ಕೃತ ಯೋಜನೆಯ ಪ್ರಕಾರ 62 ನಿಲ್ದಾಣಗಳನ್ನು ಹೊಂದಿರಲಿದೆ. ಯೋಜನಾ ವೆಚ್ಚ15,990 ಕೋಟಿ ರೂ ಆಗಲಿದೆ ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com