ದೇವರಿಗೂ ಇಲ್ಲ ಕಿಮ್ಮತ್ತು: ಪ್ರವಾಹ ಸಂತ್ರಸ್ಥ ದೇವಸ್ಥಾನದ ಪರಿಹಾರಕ್ಕೆ 'ಕೆಟಗರಿ' ಗೊಂದಲ!

ಪ್ರವಾಹ ಪೀಡಿತ ಮನೆಗಳನ್ನು ವಿವಿಧ ಕೆಟಗರಿಗೆ ಸೇರಿಸಿ ಪರಿಹಾರ ವಿತರಣೆ ನೀಡುತ್ತಿರುವ ರಾಜ್ಯ ಸರ್ಕಾರ ಪ್ರವಾಹ ಪೀಡಿತ ದೇಗುಲಗಳನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರವಾಹದಿಂದ ಹಾನಿಗೊಳಗಾಗಿರುವ ದೇಗುಲ
ಪ್ರವಾಹದಿಂದ ಹಾನಿಗೊಳಗಾಗಿರುವ ದೇಗುಲ

ರಾಯಭಾಗ: ಪ್ರವಾಹ ಪೀಡಿತ ಮನೆಗಳನ್ನು ವಿವಿಧ ಕೆಟಗರಿಗೆ ಸೇರಿಸಿ ಪರಿಹಾರ ವಿತರಣೆ ನೀಡುತ್ತಿರುವ ರಾಜ್ಯ ಸರ್ಕಾರ ಪ್ರವಾಹ ಪೀಡಿತ ದೇಗುಲಗಳನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ಪ್ರವಾಹ ಬಂದು ಜನರನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಪ್ರವಾಹ ಜನರ ಜೀವನವನ್ನೇ ಕಸಿದುಕೊಂಡಿದೆ. ಮನೆಗಳು ಬಿದ್ದಿವೆ. ಇನ್ನೂ ಕೆಲವು ಮನೆಗಳು ಬೀಳುವ ಹಂತದಲ್ಲಿವೆ. ಇಂತಹ ಸಂದರ್ಭದಲ್ಲಿ ಸರಕಾರ ಸಂಪೂರ್ಣ ಮನೆ ಬಿದ್ದರೆ ಎ ಕೆಟಗರಿ ಹಾಗೂ ಗೋಡೆ ಕುಸಿದರೆ ಬಿ ಕೆಟಗರಿ ಇನ್ನೂ ಗೋಡೆ ಸೀಳಿದರೆ ಸಿ ಕೆಟಗರಿ ಎಂದು ಜನರಿಗೆ ಆಯಾ ವಿಭಾಗ ಮಾಡಿ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ನೀಡುವ ಪ್ರಯತ್ನ ಮಾಡುತ್ತಿದೆ. ಆದರೆ ದೇವಸ್ಥಾನಗಳಿಗೆ ಯಾವ ಕೆಟಗರಿಯಲ್ಲಿ ಸೇರಿಸಬೇಕು ಎಂಬುವುದು ಆಡಳಿತ ಮಂಡಲಿಗಳಿಗೆ ತಿಳಿಯದೇ ಕಂಗಾಲಾಗಿದ್ದಾರೆ...

ಹೌದು.. ರಾಯಭಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಪ್ರವಾಹ ಎದುರಾಗಿ ಜನರನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇದರಿಂದ ಎಲ್ಲ ಜನರೂ ಸಹಿತ ತಮ್ಮ ಮನೆ ಬಿದ್ದವರು, ಗೋಡೆ ಕುಸಿದವರು ಹಾಗೂ ಗೋಡೆ ಬಿರುಕು ಬಿಟ್ಟವರು ಎಬಿಸಿ ಕೆಟಗೇರಿಯಲ್ಲಿ ತಮ್ಮ ಮನೆಗಳನ್ನು ಸೇರ್ಪಡೆ ಮಾಡುವ ಕಾರ್ಯದಲ್ಲಿ ಮುಂದಾಗಿದ್ದಾರೆ. ಆದರೆ ಗ್ರಾಮದಲ್ಲಿರುವ ಹನುಮ ಮಂದಿರವನ್ನು ಯಾವ ಕೆಟಗರಿಯಲ್ಲಿ ಬರೆದುಕೊಡುವುದು ಎಂದು ಕಮಿಟಿಯವರು ಚಿಂತೆಗೀಡಾಗಿದ್ದಾರೆ.

ಗ್ರಾಮದಲ್ಲಿನ ಹನುಮ ಮಂದಿರ 300 ವರ್ಷಗಳ ಹಿಂದೆ ಕಟ್ಟಿದ ಹಳೆಯ ಮಂದಿರ ಈಗ ಪ್ರವಾಹಕ್ಕೆ ಸಿಲುಕಿ ಕಂಬಗಳು ಸಹಿತ ಕಳಚಿವೆ. ಅಲ್ಲದೇ ಬೀಳುವ ಹಂತದಲ್ಲಿದೆ. ಇದರಿಂದ ಕಮಿಟಿಯವರು, ಭಕ್ತರು ಯಾವ ಕೆಟಗರಿಗೆ ಸೇರಿಸಬೇಕು ಹಾಗೂ ಯಾರ ಹೆಸರಿನಲ್ಲಿ ಸೇರಿಸಬೇಕು ಎಂಬುವುದು ತಿಳಿಯದೇ ಕಗ್ಗಂಟಾಗಿ ಉಳಿದಿದೆ. ಇನ್ನು ಮುಜುರಾಯಿ ಇಲಾಖೆ ಅಧಿಕಾರಿಗಳು ಸಹಿತ ದೇವಸ್ಥಾನಗಳ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸದ ಸಂಗತಿ. ಈ ದೇವಸ್ಥಾನಕ್ಕೆ ದರ್ಶನಕ್ಕೆಂದು ಸಾರ್ವಜನಿಕರು ದಿನನಿತ್ಯ ನೂರಾರು ಜನ ಬರುತ್ತಾರೆ. ಆದರೆ ಜೀವ ಕೈಯಲ್ಲಿ ಹಿಡಿದು ದರ್ಶನ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಇತಿಹಾಸಹೊಂದಿರುವ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿಕೊಂಡು ಜನರಿಗೆ ಅನುಕೂಲ ಮಾಡಿಕೊಬೇಕಿದೆ.

ಈಗಾಗಲೇ ಪ್ರವಾಹ ಬಂದ ಸಂದರ್ಭದಲ್ಲಿ ಮುಜುರಾಯಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಇಲ್ಲಿಯವರೆಗೆ ಯಾವುದೂ ಕ್ರಮ ಕೈಗೊಂಡಿಲ್ಲ. ಇನ್ನಾದರೂ ದೇವಸ್ಥಾನ ಶಿಥಿಲಾವ್ಯವಸ್ಥೆ ತಲುಪಿದ್ದು ಅದನ್ನು ಸುಧಾರಣೆ ಮಾಡಬೇಕಾಗಿದೆ. 
- ಅನೀಲ ಹಂಜೆ..ಗ್ರಾಪಂ ಸದಸ್ಯ. ಬಾವನ ಸೌಂದತ್ತಿ.

ಈ ದೇವಸ್ಥಾನ ಪುರಾತನ ದೇವಸ್ಥಾನವಾಗಿದೆ. ಈ ದೇವರಿಗೆ ಪರ ಗ್ರಾಮಗಳಿಂದ ಜನರು ಬಂದು ಆಶಿರ್ವಾದ ಪಡೆದುಕೊಳ್ಳುತ್ತಾರೆ. ಅಲ್ಲದೇ ಈಗ ದೇವಸ್ಥಾನದ ಸ್ಥಿತಿ ಗಂಭೀರವಾಗಿದ್ದು ತಕ್ಷಣ ರಿಪೇರಿ ಮಾಡಬೇಕಿದೆ.
-ಕಲ್ಲಪ್ಪ ಗುರವ, ಅರ್ಚಕ ಬಾವನಸೌಂದತ್ತಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com