ಟಿಪ್ಪುಜಯಂತಿ ರದ್ದು: ಕೊಡಗು ಸಂಪೂರ್ಣ ಶಾಂತ, ಸಹಜ ಸ್ಥಿತಿಯತ್ತ ಜನತೆ

ವಿವಾದಾತ್ಮಕ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ನಿಷೇಧ ಮಾಡುತ್ತಿದ್ದಂತೆಯೇ ಕೊಡಗಿನಲ್ಲಿ ಸಂಪೂರ್ಣವಾಗಿ ಶಾಂತಿ ನೆಲೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಡಗು: ವಿವಾದಾತ್ಮಕ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ನಿಷೇಧ ಮಾಡುತ್ತಿದ್ದಂತೆಯೇ ಕೊಡಗಿನಲ್ಲಿ ಸಂಪೂರ್ಣವಾಗಿ ಶಾಂತಿ ನೆಲೆಸಿದೆ.

ರಾಜಕೀಯ ಮತ್ತು ಧರ್ಮ ಕಾರಣಕ್ಕಾಗಿ ಸೃಷ್ಟಿಯಾಗಿದ್ದ ಟಿಪ್ಪು ಜಯಂತಿ ಆತಂಕ ಇದೀಗ ದೂರವಾಗಿದೆ. ಕೊಡಗು ಜಿಲ್ಲೆಯಲ್ಲಿ ಎಲ್ಲಿಯೂ ನಿನ್ನೆ ಖಾಸಗಿಯಾಗಿಯೂ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿಲ್ಲ.

ಕೊಡಗು ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕಿದ್ದು, ಟಿಪ್ಪಿ ಜಯಂತಿಯನ್ನು ಆಚರಣೆ ಮಾಡದಂತೆ ಈ ಹಿಂದೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿತ್ತು. ಇದರಂತೆ ಕೊಡಗು ಜಿಲ್ಲೆಯಲ್ಲಿ ಎಲ್ಲಿಯೂ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಗಿಲ್ಲ. 

ಇನ್ನು ಮಡಿಕೇರಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಯಾವುದೇದ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಈದ್ ಮಿಲಾದ್'ನ್ನು ಹಬ್ಬ ಆಚರಣೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. 

ಸೋಮವಾರಪೇಟೆ ಹಾಗೂ ವಿಜಾಜಪೇಟೆಯಲ್ಲಿ ಈದ್ ಮಿಲಾದ್ ಆಚರಿಸಲಾಗಿತ್ತಾದರೂ, ಯಾವುದೇ ರೀತಿಯ ಮೆರವಣಿಗೆಗಳು ನಡೆಯಲಿಲ್ಲ. ಈ ನಡುವೆ ಟಿಪ್ಪು ಗಲಾಟೆಯಲ್ಲಿ ಅಸುನೀಗಿದ್ದ ದೇವಪಂಡ ಕುಟ್ಟಪ್ಪ ಅವರನ್ನು ನೆನೆದು ಹಿಂದೂ ಹೋರಾಟಗಾರರು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com