ಚಾಮರಾಜನಗರ: ಸೌದೆ ತರಲು ಹೋದವ ಕಾಡಾನೆ ದಾಳಿಗೆ ಬಲಿ

ಸೌದೆ ಕಡಿಯಲು ಹೋದ ವ್ಯಕ್ತಿಯೊಬ್ಬ ಕಾಡಾನೆಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಸಮೀಪ ನಡೆದಿದೆ.

Published: 18th November 2019 04:29 PM  |   Last Updated: 18th November 2019 04:29 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : RC Network

ಚಾಮರಾಜನಗರ: ಸೌದೆ ಕಡಿಯಲು ಹೋದ ವ್ಯಕ್ತಿಯೊಬ್ಬ ಕಾಡಾನೆಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಸಮೀಪ ನಡೆದಿದೆ. 

ಗ್ರಾಮದ ರಂಗರಾಜು(65) ಮೃತಪಟ್ಟ ದುರ್ದೈವಿ. ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೌದೆ ತರಲು ಹೋಗಿ ಬರುತ್ತೇನೆಂದು ಹೋದವರು ಸಂಜೆಯಾದರು ಬಂದಿರಲಿಲ್ಲ. ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಪ್ರತಿನಿತ್ಯ ಗ್ರಾಮದ ಬಳಿ ಕಾಡಾನೆಗಳು ಬರುತ್ತದೆ. ಆದರೆ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆನೆಗಳು ಗೀಳಿಡುತ್ತಿದ್ದವು, ಇಷ್ಟು ದಿನ ಆನೆಗಳು ಬಂದರೂ ಈ ರೀತಿಯಲ್ಲಿ ಶಬ್ಧ ಮಾಡುತ್ತಿರಲಿಲ್ಲ. ಈ ಹಿನ್ನೆಲೆ ಬೆಳಗ್ಗೆ ಸ್ಥಳ ಪರಿಶೀಲಿಸಿದಾಗ ರಂಗರಾಜು ಮೃತಪಟ್ಟಿರುವುದು ತಿಳಿದು ಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಲಾಗಿದೆ.

ವರದಿ: ಗೂಳಿಪುರ ನಂದೀಶ ಎಂ

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp