ಮೇಯರ್ ಉಪಮೇಯರ್ ಚುನಾವಣೆಗೆ ಬಿಜೆಪಿಯಿಂದ ತಲಾ 2 ಹೆಸರುಗಳು; ತಡ ರಾತ್ರಿ, ಬೆಳಿಗ್ಗೆ ಅಂತಿಮ ಸಾಧ್ಯತೆ!

ಮೇಯರ್ ಚುನಾವಣೆಗೆ ಇನ್ನು ಕೆಲವೇ ಗಂಟೆಗಳು ಉಳಿದಿದ್ದು, ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. 

Published: 01st October 2019 12:50 AM  |   Last Updated: 01st October 2019 12:54 AM   |  A+A-


Few hours left for BBMP Mayor elections: BJP short lists its candidates

ಮೇಯರ್ ಉಪಮೇಯರ್ ಚುನಾವಣೆಗೆ ಬಿಜೆಪಿಯಿಂದ ತಲಾ 2 ಹೆಸರುಗಳು, ತಡ ರಾತ್ರಿ, ಬೆಳಿಗ್ಗೆ ಅಂತಿಮ ಸಾಧ್ಯತೆ!

Posted By : Srinivas Rao BV
Source : Online Desk

ಬೆಂಗಳೂರು: ಮೇಯರ್ ಚುನಾವಣೆಗೆ ಇನ್ನು ಕೆಲವೇ ಗಂಟೆಗಳು ಉಳಿದಿದ್ದು, ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ. ಸೆ.30 ರಂದು ರಾತ್ರಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ತಲಾ 2 ಹೆಸರುಗಳನ್ನು ಬಿಜೆಪಿ ಶಾರ್ಟ್ ಲಿಸ್ಟ್ ಮಾಡಿದೆ. ಮೇಯರ್ ಸ್ಥಾನಕ್ಕೆ ಹಾಲಿ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಹಾಗೂ ಶಾಂತಿನರ ವಾರ್ಡ್ ನ ಗೌತಮ್ ಹೆಸರನ್ನು ಸೂಚಿಸಲಾಗಿದೆ.  
  
ಉಪಮೇಯರ್ ಸ್ಥಾನಕ್ಕೆ ಬೊಮ್ಮನಹಳ್ಳಿ ವಾರ್ಡ್ ಸದಸ್ಯ ಗುರುಮೂರ್ತಿ ಹಾಗೂ ವಿಜಯನಗರ ವಾರ್ಡ್ ನ ಮಹಾಲಕ್ಷ್ಮಿ ಅವರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಸಿಎಂ ಯಡಿಯೂರಪ್ಪ ಜತೆ ಚರ್ಚಿಸಿದ ನಂತರ ಇಂದು ತಡ ರಾತ್ರಿ ಅಥವಾ ನಾಳೆ ಬೆಳಿಗ್ಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ಖಾಸಗಿ ಸುದ್ದಿ ಮಾಧ್ಯಮದ ವರದಿಯ ಮೂಲಕ ತಿಳಿದುಬಂದಿದೆ.

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp