ನಿನ್ನ ಜನ್ಮಕ್ಕೆ ಬೆಂಕಿ ಹಾಕ, ನೀನೊಬ್ಬ ಮುಖ್ಯಮಂತ್ರಿ ಆಗಿದ್ದವನು: ಸಿದ್ದರಾಮಯ್ಯಗೆ ಈಶ್ವರಪ್ಪ

ಮಕ್ಕಳಿಗೆ ಪುಸ್ತಕ ಯಾವಾಗ ಸಿಗುತ್ತೋ ಗೊತ್ತಿಲ್ಲ ಆದರೆ ಸರ್ಕಾರದ ಮಂತ್ರಿಗಳು ಒಂದೊಂದು ಹೇಳಿಕೆ ನೀಡುತ್ತಾರೆ ಇದರಿಂದಾಗಿ ಸಂತ್ರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಈಶ್ವರಪ್ಪ-ಸಿದ್ದರಾಮಯ್ಯ
ಈಶ್ವರಪ್ಪ-ಸಿದ್ದರಾಮಯ್ಯ

ಬೆಂಗಳೂರು: ಮಕ್ಕಳಿಗೆ ಪುಸ್ತಕ ಯಾವಾಗ ಸಿಗುತ್ತೋ ಗೊತ್ತಿಲ್ಲ ಆದರೆ ಸರ್ಕಾರದ ಮಂತ್ರಿಗಳು ಒಂದೊಂದು ಹೇಳಿಕೆ ನೀಡುತ್ತಾರೆ ಇದರಿಂದಾಗಿ ಸಂತ್ರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಸಂತ್ರಸ್ತರಿಗೆ 10 ಸಾವಿರ ಕೊಡೋದೆ ಹೆಚ್ಚು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದು ಎಷ್ಟು ಸರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೆಣಕಿದರು.
  
ವಿಧಾನಸಭೆ ಕಲಾಪದ ಎರಡನೇ ದಿನವಾದ ಇಂದು ಸಿದ್ದರಾಮಯ್ಯ ಆಡಳಿತ ಪಕ್ಷದವರಿಗೆ ನೆರೆ ಪರಿಹಾರ ವಿಚಾರ ಪ್ರಸ್ತಾಪ ಮಾಡಿದರು.ಬೆಳಗಾವಿ ಪ್ರವಾಹ ವೀಕ್ಷಣೆ ವೇಳೆ ಸಚಿವ ಈಶ್ವರಪ್ಪ ಅವರು ಹೇಳಿದ ಮಾತನ್ನು ಸಿದ್ದರಾಮಯ್ಯ ನೆನಪಿಸಿದ್ದಕ್ಕೆ ಕಾಂಗ್ರೆಸ್​​ ಶಾಸಕರೆಲ್ಲರೂ ಈಶ್ವರಪ್ಪ, ಈಶ್ವರಪ್ಪ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಓಹೋ! ಈಶ್ವರಪ್ಪನೇ ಆಗಂದಿದ್ದು ಎಂದು ನಟಿಸಿದರು.

ಸಿದ್ದರಾಮಯ್ಯ ಹೇಳಿಕೆಯಿಂದ ಕೆಂಡಾಮಂಡಲವಾದ ಕೆ.ಎಸ್​ ಈಶ್ವರಪ್ಪ ಅವರು, ನಿನ್ನ ಜನ್ಮಕ್ಕೆ ಬೆಂಕಿ ಹಾಕ. ಮುಖ್ಯಮಂತ್ರಿ ಆಗಿದ್ದೆ ನೀನು, ಏನೇನು ಮಾಡ್ದೆ. ಹೇಗೆ ಮಾತನಾಡಬೇಕು ಅಂತ ಗೊತ್ತಾಗಲ್ವೇ(?) ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಮೈತ್ರಿ ಸರ್ಕಾರವನ್ನು ಕಿತ್ತಾಗಿದ್ದು ನೀವು, ಪಕ್ಷದ ಹೈಕಮಾಂಡ್ ನಿಮ್ಮನ್ನು ಭೇಟಿಗೂ ಅವಕಾಶ ಕೊಡದೆ ಮನೆ ಬಾಗಿಲ ಬಳಿಯಿಂದ ವಾಪಸ್ ಕಳುಹಿಸಿದ್ದಾರೆ. ನಿಮ್ಮಿಂದ ಸರ್ಕಾರವೂ ಹೋಗಿದೆ, ಪಕ್ಷವೂ ಉಳಿಯುವುದಿಲ್ಲ, ನೀವು ಅವರನ್ನು ನಂಬಿಕೊಂಡು ಕೆಟ್ಟಿದ್ದೀರಿ ಎಂದು ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ್, ಹಾಗೂ ಕೆ.ಜೆ.ಜಾರ್ಜ ಅವರನ್ನು ಈಶ್ವರಪ್ಪ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಂಭಾಷಣಯಿಂದ ಈಶ್ವರಪ್ಪ ಅರಚಾಟವನ್ನು ನೋಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಸಿಮುಸಿ ನಕ್ಕರು.

ಮುಖ್ಯಮಂತ್ರಿ ಖಜಾನೆಯಲ್ಲಿ ಹಣ ಇಲ್ಲ ಅಂದಿದ್ದಾರೆ. ಮುಖ್ಯಮಂತ್ರಿ ಆದವರು ಇಂತ ಹೇಳಿಕೆ ನೀಡುತ್ತಾರಾ(?) ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಕೆಣಕಿದರು. ಈ ಹೇಳಿಕೆಗೆ ಬಿಎಸ್​ವೈ ಅವರು ಮಾತನಾಡಿ ನಾನು ಹಾಗೇಳಿಲ್ಲ ಎಂದರು. ಮಿಸ್ಟರ್ ಯಡಿಯೂರಪ್ಪ ನಾನು ಹೇಳಿದ್ದು ಅಲ್ರೀ, ಆ ಮಾತನ್ನು ನೀವೇ ಹೇಳಿದ್ದು ಎಂದು ಸಿದ್ದರಾಮಯ್ಯ ಮತ್ತೆ ವಾದಿಸಿದರು. ಇನ್ನು ಮತ್ತೊಬ್ಬರು ಮೋದಿಗೆ ಉಗಿದರೆ ನಿಮಗೆ ತಿರುಗಿ ಬೀಳುತ್ತೆ ಅಂತಾರೆ. ಒಂದು ವರ್ಷ ಅಭಿವೃದ್ಧಿ ಕಾರ್ಯ ನಿಲ್ಲಿಸಿ ಮೊದಲು ಸಂತ್ರಸ್ಥರ ಸಮಸ್ಯೆ ಪರಿಹರಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಲಹೆ ನೀಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com