ಇದು ಪ್ರಜಾಪ್ರಭುತ್ವವಲ್ಲ ಏಕಚಕ್ರಾಧಿಪತ್ಯ: ಕೇಂದ್ರ ಸರ್ಕಾರದ ವಿರುದ್ಧ ಕನ್ಹಯ್ಯ ಕುಮಾರ್ ವಾಗ್ದಾಳಿ

ಚುನಾವಣೆ ಎದುರಿಸುವುದಷ್ಟೇ ಅಲ್ಲದೆ ವಿವಿಧ ವಿಷಯಗಳ ಬಗ್ಗೆ ದೇಶದ ನಾಗರಿಕರಿಗೆ ಜಾಗೃತಿ ಮೂಡಿಸಲು “ಯುನೈಟೆಡ್ ಫ್ರಂಟ್” ಹುಟ್ಟು ಹಾಕುವುದಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹೇಳಿದ್ದಾರೆ.
ಕನ್ಹಯ್ಯ ಕುಮಾರ್
ಕನ್ಹಯ್ಯ ಕುಮಾರ್

ಕಲಬುರಗಿ: ಚುನಾವಣೆ ಎದುರಿಸುವುದಷ್ಟೇ ಅಲ್ಲದೆ ವಿವಿಧ ವಿಷಯಗಳ ಬಗ್ಗೆ ದೇಶದ ನಾಗರಿಕರಿಗೆ ಜಾಗೃತಿ ಮೂಡಿಸಲು “ಯುನೈಟೆಡ್ ಫ್ರಂಟ್” ಹುಟ್ಟು ಹಾಕುವುದಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹೇಳಿದ್ದಾರೆ.

ಈ “ಯುನೈಟೆಡ್ ಫ್ರಂಟ್” ಮೂಲಕ ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸುತ್ತದೆ ಎಂದು ಅವರು ಹೇಳಿದ್ದಾರೆ. ಕಲಬುರಗಿಯಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ಹಯ್ಯ ಕುಮಾರ್ ಯುನೈಟೆಡ್ ಫ್ರಂಟ್ ರಾಜಕೀಯ ಸ್ವರೂಪಕ್ಕೆ ಇನ್ನಷ್ಟು ಸಮಯ ಬೇಕು.  ಚುನಾವಣೆಯಲ್ಲಿ ಸ್ಪರ್ಧಿಸಲು ಸಮಯ ತೆಗೆದುಕೊಳ್ಳುತ್ತೇವೆ ಎಂದರು. ಅಲ್ಲದೆ ಮುಂಬರುವ ಚುನಾವಣೆಗಳಲ್ಲಿ ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ರಾಜ್ಯ ವಿಧಾನಸಭೆಗಳಿಗೆ ಪ್ರಚಾರ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಮತ್ತು ಕರ್ನಾಟಕದಲ್ಲಿನ ಪ್ರಸ್ತುತ ಸರ್ಕಾರ ಜನ ವಿರೋಧಿ ನೀತಿಯನ್ನು ಅನುಸರಿಸಿದೆ ಎಂದ ಕನ್ಹಯ್ಯ ಸರ್ಕಾರದ ಮುಖಂಡರು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಒಂದು ರೀತಿಯಲ್ಲಿ ಮಾತನಾಡಿ ಇನ್ನೊಂದು ರೀತಿಯ ಕೆಲಸ ಮಾಡುತ್ತಾರೆ. ಅವರು ಮಾತನಾಡುವುದೊಂದು ಂಆಡುವುದು ಇನ್ನೊಂದು ಆಗಿದೆ. "ಅವರು ವಿದೇಶಗಳಿಗೆ ಹೋದಾಗ ಶಾಂತಿ ಮಂತ್ರಗಳನ್ನು ಜಪಿಸುತ್ತಾರೆ ಮತ್ತು ಬುದ್ಧ ಮತ್ತು ಬಸವನನ್ನು ಶ್ಲಾಘಿಸುತ್ತಾರೆ. ಆದರೆ ದೇಶಕ್ಕೆ ಹಿಂದಿರುಗಿದಾಗ ಪಾಕಿಸ್ತಾನದ ವಿರುದ್ಧದ ಯುದ್ಧದ ಬಗ್ಗೆ ಮಾತನಾಡುತ್ತಾರೆ" 

"ಪ್ರಧಾನಿ ತನ್ನನ್ನು ಬಡ ಕುಟುಂಬದಿಂದ ಬಂದ ವ್ಯಕ್ತಿಯೆಂದು ತೋರಿಸಿಕೊಳ್ಳುತ್ತಾರೆ ಆದರೀಗ ಶ್ರೀಮಂತರಾಗಿದ್ದಾರೆ. ಆದರೆ ದೇಶದಲ್ಲಿ ಬಡವರು ಬಡವರಾಗಿಯೇ ಉಳಿದಿದ್ದಾರೆ." ಕನ್ಹಯ್ಯ ಹೇಳಿದರು. ಮೂಲಭೂತ ಅವಶ್ಯಕತೆಗಳನ್ನು ಕೇಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಆದರೆ ಯಾರೂ ಇದನ್ನು ಪ್ರಶ್ನಿಸುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ನಾಯಕರು ಯಾವಾಗಲೂ ಭಿನ್ನಾಭಿಪ್ರಾಯದ ಧ್ವನಿಯನ್ನು ನಿಗ್ರಹಿಸುತ್ತಾರೆ, ಇದು ಪ್ರಜಾಪ್ರಭುತ್ವವಲ್ಲ ಬದಲಿಗೆ ಏಕಚಕ್ರಾಧಿಪತ್ಯ ಎಂದು ಅವರು ಆರೋಪಿಸಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾನಿಲಯದಲ್ಲಿ ಇಂದು ನಡೆಯಬೇಕಿದ್ದ ಕನ್ಹಯ್ಯ ಕುಮಾರ್ ಉಪನ್ಯಾಸ ಕಾರ್ಯಕ್ರಮ ಕಡೇ ಗಳಿಗೆಯಲ್ಲಿ ರದ್ದಾಗಿದೆ. ಕಾರ್ಯಕ್ರಮಕ್ಕೆ ರಾಜ್ಯಪಾಲ ವಜುಭಾಯಿವಾಲಾ ಅನುಮತಿ ನಿರಾಕರಿಸಿದ ಕಾರಣ ಉಪನ್ಯಾಸ ರದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com