ಎಸ್‍ಎಸ್‍ಎಲ್‍ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಮಾರ್ಚ್ 20ರಿಂದ ಏಪ್ರಿಲ್ 3ರವರೆಗೆ ಪರೀಕ್ಷೆ ನಡೆಯಲಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಮಾರ್ಚ್ 20ರಿಂದ ಏಪ್ರಿಲ್ 3ರವರೆಗೆ ಪರೀಕ್ಷೆ ನಡೆಯಲಿವೆ.

ತಾತ್ಕಾಲಿಕ ವೇಳಾಪಟ್ಟಿ
ಮಾರ್ಚ್ 20 ರಂದು ಪ್ರಥಮ ಭಾಷೆ ಕನ್ನಡ/ತೆಲುಗು/ಹಿಂದಿ/ಮರಾಠಿ/ತಮಿಳು/ಉರ್ದು/ಇಂಗ್ಲಿಷ್‌/ಸಂಸ್ಕೃತ
ಮಾರ್ಚ್ 21 ರಂದು ಕೋರ್‌ ವಿಷಯ(ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ) ತೆಗೆದುಕೊಂಡವರಿಗೆ ಪರೀಕ್ಷೆ
ಮಾರ್ಚ್ 23 ರಂದು ಸಮಾಜ ವಿಜ್ಞಾನ
ಮಾರ್ಚ್ 26 ರಂದು ವಿಜ್ಞಾನ
ಮಾರ್ಚ್ 30 ರಂದು ಗಣಿತ
ಏಪ್ರಿಲ್ 1 ರಂದು ದ್ವಿತೀಯ ಭಾಷೆ ಇಂಗ್ಲಿಷ್‌/ಕನ್ನಡ
ಏಪ್ರಿಲ್ 3 ರಂದು ತೃತೀಯ ಭಾಷೆ ಹಿಂದಿ/ಕನ್ನಡ/ಇಂಗ್ಲಿಷ್‌/ ಅರೇಬಿಕ್‌/ಪರ್ಷಿಯನ್‌/ಉರ್ದು/ಸಂಸ್ಕೃತ/ಕೊಂಕಣಿ/ತುಳು

ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ಈ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 19ರ ವರೆಗೆ ಅವಕಾಶ ನೀಡಲಾಗಿದೆ. ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಬೇಕಾದರೆ, ನೇರವಾಗಿ ಕರ್ನಾಟಕ ಶಿಕ್ಷಣಾ ಮಂಡಳಿ ಇಲಾಖೆಗೆ ಆಕ್ಷೇಪಣಾ ಅರ್ಜಿಯನ್ನು ಅಂಚೆ ಮೂಲಕ  ಸಲ್ಲಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com