ಬಿಸಾಡಲು ಹೋದಾಗ ಕೈಯಲ್ಲಿಯೇ ಬಾಂಬ್ ಸ್ಫೋಟಗೊಂಡಿತ್ತು: ಗಾಯಾಳು ಹುಸೇನ್

ಅಡಿಕೆ ಕಾಯಿಯಂತೆ ಕಂಡಿತ್ತು. ಹೀಗಾಗಿ ಅದನ್ನು ಅಗೆಯಲು ಮುಂದಾಗಿದ್ದೆ. ಆದರೆ, ರೈಲ್ವೇ ಅಧಿಕಾರಿಗಳು ನನ್ನನ್ನು ತಡೆದರು. ಬಳಿಕ ಅದನ್ನು ಬಿಸಾಡಲು ಮುಂದಾಗಿದ್ದೆ. ಈ ವೇಳೆ ನನ್ನ ಕೈಯಲ್ಲಿಯೇ ಸ್ಫೋಟಗೊಂಡಿತ್ತು ಎಂದು ಹುಬ್ಭಳ್ಳಿ ಸ್ಫೋಟದಲ್ಲಿ ಗಾಯಗೊಂಡಿರುವ ಗಾಯಾಳು ಹುಸೇನ್ ನಾಯಕ್ ವಾಲೆಯವರು ಹೇಳಿದ್ದಾರೆ.
ಗಾಯಾಳು ಹುಸೇನ್
ಗಾಯಾಳು ಹುಸೇನ್

ಹುಬ್ಬಳ್ಳಿ: ಅಡಿಕೆ ಕಾಯಿಯಂತೆ ಕಂಡಿತ್ತು. ಹೀಗಾಗಿ ಅದನ್ನು ಅಗೆಯಲು ಮುಂದಾಗಿದ್ದೆ. ಆದರೆ, ರೈಲ್ವೇ ಅಧಿಕಾರಿಗಳು ನನ್ನನ್ನು ತಡೆದರು. ಬಳಿಕ ಅದನ್ನು ಬಿಸಾಡಲು ಮುಂದಾಗಿದ್ದೆ. ಈ ವೇಳೆ ನನ್ನ ಕೈಯಲ್ಲಿಯೇ ಸ್ಫೋಟಗೊಂಡಿತ್ತು ಎಂದು ಹುಬ್ಭಳ್ಳಿ ಸ್ಫೋಟದಲ್ಲಿ ಗಾಯಗೊಂಡಿರುವ ಗಾಯಾಳು ಹುಸೇನ್ ನಾಯಕ್ ವಾಲೆಯವರು ಹೇಳಿದ್ದಾರೆ. 

ಸ್ಫೋಟದಲ್ಲಿ ಹುಸೇನ್ ಅವರ ಕೈ ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಭಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 

ರೈಲ್ವೇ ನಿಲ್ದಾಣದಲ್ಲಿ ಹುಲೇನ್ ಅವರು ಟೀ ಮಾರಾಟ ಮಾಡುತ್ತಿದ್ದರು. ನಿಲ್ದಾಣದ ಕಚೇರಿ ಬಳಿ ಹುಸೇನ್ ಅವರು ಹೋಗುತ್ತಿದ್ದರು. ಈ ವೇಳೆ ಆರ್"ಪಿಎಫ್ ಪೇದೆ ಹುಸೇನ್ ಅವರನ್ನು ಕರೆದು ಸ್ಥಳದಲ್ಲಿದ್ದ ಬಾಕ್ಸ್'ನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ. 

ಪ್ರಸಾದ ರೀತಿ ಬಾಕ್ಸ್ ಇತ್ತು. ಆರಂಭದಲ್ಲಿ ನಾನೂ ಕೂಡ ಅಡಿಕೆ ಕಾಯಿ ಎಂದುಕೊಂಡಿದ್ದೆ. ಅದನ್ನು ಅಗೆಯಲು ಹುಸೇನ್ ಮುಂದಾಗಿದ್ದ. ಅನುಮಾನ ಶುರುವಾಗಿದ್ದ ಹಿನ್ನಲೆಯಲ್ಲಿ ಬೇಡವೆಂದು ಹೇಳಿದ್ದೆ. ಬಳಿಕ ಅದನ್ನು ಎಸೆದು ಏನೆಂದು ಪರಿಶೀಲಿಸಲು ಮುಂದಾಗಿದ್ದ ಎಸೆಯುತ್ತಿದ್ದಂತೆಯೇ ವಸ್ತು ಸ್ಫೋಟಗೊಂಡಿತ್ತು. ಇದರ ಪರಿಣಾಮ ಹುಸೇನ್ ಗಾಯಗೊಂಡಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. 

ನನ್ನ ಇಡೀ ಕುಟುಂಬ ನನ್ನ ಮೇಲೆ ಅವಲಂಬಿತವಾಗಿದೆ. ಘಟನೆ ಬಳಿಕ ಕುಟುಂಬ ಸದಸ್ಯರು ಆಘಾತ ಹಾಗೂ ನೋವಿನಲ್ಲಿದ್ದಾರೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಟೀ ಮಾರಾಟವೇ ನನ್ನ ಆದಾಯ. ಇದೀಗ ನಾನು ಹಾಗೂ ನನ್ನ ಕುಟುಂಬ ಸಂಕಷ್ಟದಲ್ಲಿದ್ದೇವೆಂದು ಹುಸೇನ್ ಹೇಳಿದ್ದಾರೆ.
  
ಹುಸೇನ್ ಸಹೋದರ ಮಾತನಾಡಿ, ರೈಲ್ವೇ ಸಿಬ್ಬಂದಿಯೇ ಇದಕ್ಕೆ ಜವಾಬ್ದಾರಿ. ಸ್ಫೋಟಕ ಪರಿಶೀಲನೆ ನಡೆಸುವುದು ಸಿಬ್ಬಂದಿಯ ಕರ್ತವ್ಯ. ಪರಿಶೀಲಿಸಲು ನನ್ನ ಸಹೋದರನಿಗೇಕೆ ಹೇಳಿದರು? ನನ್ನ ಸಹೋದರನಿಗೆ ರೈಲ್ವೇ ಇಲಾಖೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ನಿಲ್ದಾಣ ಪರಿಶೀಲನೆಗೆ ಶ್ವಾನದಳವಿಲ್ಲ
ಸಾಮಾನ್ಯವಾಗಿ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾದಾಗ ಮೊದಲಿಗೆ ಭದ್ರತಾ ಸಿಬ್ಬಂದಿ, ಶ್ವಾನ ದಳವನ್ನು ಕರೆಯಲಾಗುತ್ತದೆ. ಆದರೆ, ಪ್ರಕರಣದಲ್ಲಿ ಇಂತಹ ಯಾವುದೇ ಪ್ರಕ್ರಿಯೆಗಳೂ ನಡೆದಿಲ್ಲ. ಶ್ವಾನ ದಳ ಸ್ಥಳಕ್ಕೆ ಬಂದಿದ್ದರೆ, ಇಂತಹ ಘಟನೆಗಳು ಸಂಭವಿಸುತ್ತಿರಲಿಲ್ಲ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com