ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಹಲವು ಸಮುದಾಯದ ಸ್ವಾಮೀಜಿಗಳ ಅಭಯ ಹಸ್ತ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಹಲವು ದೇವಾಸ್ಥಾನಗಳು ಹಾಗೂ ಮಠಗಳಿಗೆ ಬೇಟಿ ನೀಡುತ್ತಿದ್ದಾರೆ. 
ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಹಲವು ಸಮುದಾಯದ ಸ್ವಾಮೀಜಿಗಳ ಅಭಯ ಹಸ್ತ

ತುಮಕೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಹಲವು ದೇವಾಸ್ಥಾನಗಳು ಹಾಗೂ ಮಠಗಳಿಗೆ ಬೇಟಿ ನೀಡುತ್ತಿದ್ದಾರೆ. 

ಕುಂಚಟಿಗ ಒಕ್ಕಲಿಗ ಸಮುದಾಯದ ಶ್ರೀ ನಂಜಾವಧೂತ ಸ್ವಾಮೀಜಿ ಶಿವಕುಮಾರ್ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಲಿಂಗಾಯತ ಸಮುದಾಯದ ಕಾಡ ಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಹಾಗೂ ಕನಕಪುರದಲ್ಲಿರುವ ಲಿಂಗಾಯರ ದೇಗುಲ ಮಠದ ಸ್ವಾಮೀಜಿಗಳೆಲ್ಲರೂ ಬಹಿರಂಗವಾಗಿಯೇ ತಮ್ಮ ಬೆಂಬಲ ಸೂಚಿಸಿದ್ದಾರೆ. ಹಾಗೂ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತರು ಎಂಬ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ನಡುವೆ ಡಿಕೆ ಶಿವಕುಮಾರ್  ಶ್ರೀ ನಂಜಾವಧೂತ ಸ್ವಾಮಿಜಿ ಹಾಗೂ ಕರಿ ವೃಷಭ ದೇಶಿಕೇಂದ್ರ ಸ್ವಾಮಿಜಿಗಳನ್ನು ಭೇಟಿ ಮಾಡಿದ್ದರು, ಇದೆಲ್ಲದರ ನಡುವೆ ಅವರು ಲಿಂಗಾಯತರನ್ನು ಮರೆಯಲಿಲ್ಲ, ಶ್ರೀಸಿದ್ದಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಕುರುಬ ಸಮುದಾಯ ಹೊರತು ಪಡಿಸಿ ಎಲ್ಲಾ ಸಮುದಾಯಗಳನ್ನು ಶಿವಕುಮಾರ್ ಓಲೈಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. 

ಶಿವಕುಮಾರ್ ಸದ್ಯಕ್ಕೆ ಜೈಲಿನಿಂದ ಹೊರ ಬಂದಿದ್ದಾರೆ, ಆದರೆ ಅವರ ಮುಂದೆ ಬಹು ದೊಡ್ಡ ಸವಾಲುಗಳಿವೆ, ಜಾರಿ ನಿರ್ದೇಶನಾಲಯ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಅವರಿಗೆ ವಿಚಾರಣೆಗಾಗಿ ನೊಟೀಸ್ ನೀಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com