ಮೈಸೂರು: ಮೂರು ಚಿರತೆಗಳ ಅನುಮಾನಾಸ್ಪದ ಸಾವು

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಜಮೀನೊಂದರಲ್ಲಿ ಮೂರು ಚಿರತೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. 
ಮೂರು ಚಿರತೆಗಳ ಸಾವು
ಮೂರು ಚಿರತೆಗಳ ಸಾವು

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಜಮೀನೊಂದರಲ್ಲಿ ಮೂರು ಚಿರತೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. 

ಹಲ್ಲರೆ ಗ್ರಾಮದ ಚೆನ್ನನಂಜಪ್ಪ ಮತ್ತು ಮಹಮದ್‌ ಪಾಷ ಎಂಬುವವರ ಜಮೀನಿನಲ್ಲಿ ಅಂದಾಜು 4 ವರ್ಷದ ತಾಯಿ ಚಿರತೆ ಸೇರಿದಂತೆ ಅಂದಾಜು 4 ತಿಂಗಳ ಒಂದು ಗಂಡು ಹಾಗೂ ಒಂದು ಹೆಣ್ಣು ಚಿರತೆಗಳ ಶವ ಪತ್ತೆಯಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಳ ಮೃತದೇಹವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಮೋಲ್ನೋಟಕ್ಕೆ ಚಿರತೆಗಳು ಅಸ್ವಾಭಾವಿಕವಾಗಿ ಮೃತಪಟ್ಟಿರುವುದು ಕಂಡು ಬಂದಿದೆ. ಮೃತ ಚಿರತೆಗಳ ಮರಣೋತ್ತರ ಪರೀಕ್ಷೆ ವೇಳೆ ಕೆಲ ಅಂಗಾಂಗಗಳನ್ನು ಸಂಗ್ರಹಿಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಚಿರತೆಗಳು ಮೃತಪಟ್ಟಿರುವ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. 

ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿಯೇ ಮೂರು ಚಿರತೆಗಳ ಮೃತದೇಹ ಪತ್ತೆಯಾಗಿರುವುದು ತಿಳಿಯುತ್ತಿದಂತೆ ಹಲ್ಲರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ವೀಕ್ಷಿಸಿದರು. ಚಿರತೆಗಳು ಸಮೀಪದ ಓಂಕಾರ ಅರಣ್ಯ ವಲಯದಿಂದ ಬಂದಿರಬಹುದ ಎಂದು ಶಂಕಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com