ವಿದ್ಯಾರ್ಥಿಗಳ ಮೊಬೈಲ್ ಪುಡಿ ಮಾಡಿದ ಶಿರಸಿ ಪಿಯು ಕಾಲೇಜು ಪ್ರಿನ್ಸಿಪಾಲ್: ವಿಡಿಯೋ ವೈರಲ್

ಮೊಬೈಲ್ ಬಳಕೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ ಹೀಗೆ ನಿಷೇಧ ಮಾಡಿದ್ದರೂ ಕದ್ದುಮುಚ್ಚಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದು ನಿಂತಿಲ್ಲ. ಇಂಥ ವಿದ್ಯಾರ್ಥಿಗಳಿಗೆ ಶಿರಸಿಯ.
ಮೊಬೈಲ್ ಪುಡಿ ಮಾಡಿದ ಪ್ರಿನ್ಸಿಪಾಲ್
ಮೊಬೈಲ್ ಪುಡಿ ಮಾಡಿದ ಪ್ರಿನ್ಸಿಪಾಲ್

ಶಿರಸಿ: ಮೊಬೈಲ್ ಬಳಕೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ ಹೀಗೆ ನಿಷೇಧ ಮಾಡಿದ್ದರೂ ಕದ್ದುಮುಚ್ಚಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದು ನಿಂತಿಲ್ಲ. ಇಂಥ ವಿದ್ಯಾರ್ಥಿಗಳಿಗೆ ಶಿರಸಿಯ ಕಾಲೇಜಿನ ಪ್ರಾಂಶುಪಾಲರೊಬ್ಬರು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

ಶಿರಸಿಯ ಎಂಇಎಸ್ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದರು. ಈ ವಿಷಯ ಪ್ರಿನ್ಸಿಪಾಲ್ ಆರ್ ಎಂ ಭಟ್ ಅವರ ಗಮನಕ್ಕೂ ಬಂದಿತ್ತು. ಇದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಯೋಚಿಸಿದ ಅವರು, ವಿದ್ಯಾರ್ಥಿಗಳಿಗೆ ಮೊಬೈಲ್ ಬಗ್ಗೆ ತಿಳಿಸಲು ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದರು,

ನಂತರ ಆಡಿಟೋರಿಯಂ ಗೆ ಬಂದ ವಿದ್ಯಾರ್ಥಿಗಳ ಬಳಿ ಪರಿಶೀಲನೆ ನಡೆಸಿದಾಗ ಒಟ್ಟು 17 ಮೊಬೈಲ್ ಫೋನ್ ಸಿಕ್ಕಿವೆ, ಮೊಬೈಲಿನಿಂದಾಗುವ ದುಷ್ಪರಿಣಾಮದ ಕುರಿತು ತಿಳಿಹೇಳುತ್ತಲೇ ವಿದ್ಯಾರ್ಥಿಗಳ ಎದುರೇ ಮೊಬೈಲ್ ಗಳನ್ನು ಸುತ್ತಿಗೆಯಿಂದ ಕುಟ್ಟಿ ಒಡೆದುಹಾಕಿದ್ದಾರೆ.

ಉಳಿದ 15 ಮೊಬೈಲ್ ಗಳನ್ನ  ಕಾಲೇಜಿನ ಲಾಕರ್ ನಲ್ಲಿಡಲಾಗಿದ್ದು, ವಾರ್ಷಿಕ ಪರೀಕ್ಷೆ ನಂತರ ಕೊಡುವುದಾಗಿ ತಿಳಿಸಿದ್ದಾರೆ,. ಮೊಬೈಲ್ ಪುಡಿ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ,.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com