ಅಶ್ಲೀಲ ಸಂಭಾಷಣೆ ಆರೋಪ: ಪೀಠತ್ಯಾಗಕ್ಕೆ ಕಣ್ವಮಠ ಶ್ರೀ ನಿರ್ಧಾರ

ಮಹಿಳೆಯೊಬ್ಬರ ಜೊತೆ ಮೊಬೈಲ್'ನಲ್ಲಿ ಅಶ್ಲೀಲ ಸಂದೇಶ ಹಾಗೂ ಸಂಭಾಷಣೆ ನಡೆಸಿರುವ ಆರೋಪಕ್ಕೆ ಜಿಲ್ಲೆಯ ಹುಣಸಗಿ ಸಮೀಪದ ಹುಣಸಿ ಹೊಳೆಯ ಕಣ್ವಮಠದ ಪೀಠಾಧಿಪತಿ ವಿದ್ಯಾವಾರಿದಿ ತೀರ್ಥ ಸ್ವಾಮೀಜಿ ಗುರಿಯಾಗಿದ್ದು, ಪೀಠ ತ್ಯಾಗಕ್ಕೆ ನಿರ್ಧಾರ ಕೈಗೊಂಡಿದ್ದಾರೆ. 
ಕಣ್ವಮಠ ಶ್ರೀ
ಕಣ್ವಮಠ ಶ್ರೀ

ಕಲಬುರಗಿ: ಮಹಿಳೆಯೊಬ್ಬರ ಜೊತೆ ಮೊಬೈಲ್'ನಲ್ಲಿ ಅಶ್ಲೀಲ ಸಂದೇಶ ಹಾಗೂ ಸಂಭಾಷಣೆ ನಡೆಸಿರುವ ಆರೋಪಕ್ಕೆ ಜಿಲ್ಲೆಯ ಹುಣಸಗಿ ಸಮೀಪದ ಹುಣಸಿ ಹೊಳೆಯ ಕಣ್ವಮಠದ ಪೀಠಾಧಿಪತಿ ವಿದ್ಯಾವಾರಿದಿ ತೀರ್ಥ ಸ್ವಾಮೀಜಿ ಗುರಿಯಾಗಿದ್ದು, ಪೀಠ ತ್ಯಾಗಕ್ಕೆ ನಿರ್ಧಾರ ಕೈಗೊಂಡಿದ್ದಾರೆ. 

ಆರೋಪವನ್ನು ನಿರಾಕರಿಸಿರುವ ಶ್ರೀಗಳು, ಕೋಟ್ಯಾಂತರ ರುಪಾಯಿಗಳ ಮಠದ ಆಸ್ತಿ ಮೇಲೆ ಕೆಲವರು ಕಣ್ಣಿದ್ದು, ಈ ಹಿನ್ನಲೆಯಲ್ಲಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಇಂತಹ ಕೀಳುಮಟ್ಟದ ಆರೋಪದಿಂದ ಮನನೊಂದು ಪೀಠ ತ್ಯಾಗಕ್ಕೆ ಸಿದ್ಧ ಎಂದು ಹೇಳಿದ್ದಾರೆ. 

ದೇಶದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಐತಿಹಾಸಿಕ ಹಾಗೂ ಧಾರ್ಮಿಕ ಪೀಠಗಳಲ್ಲಿ ಒಂದಾದ ಹುಣಸಿಹೊಳಿ ಕಣ್ವಮಠದ 13ನೇ ಪೀಠಾಧಿಪತಿಗಳಾದ ವಿದ್ಯಾವಾರಿಥಿ ತೀರ್ಥರ ವಿರುದ್ಧ ಇಂತಹ ಆರೋಪಗಳನ್ನು ವಾಟ್ಸ್'ಆ್ಯಪ್ ಸಂದೇಶಗಳು ಹಾಗೂ ಆಡಿಯೋ ಕ್ಲಿಪ್ಪಿಂಗ್ ಗಳು ಬುಧವಾರ ನಸುಕಿನಿಂದಲೇ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದ್ದಂತೆಯೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com